ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರಿನಲ್ಲಿ ಈಡೀ ರಾತ್ರಿ ಸುರಿದ ಮಳೆ: ಕೃಷಿ ಚಟುವಟಿಕೆಗಳು ಬಿರುಸು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮೇ 5 : ಕಳೆದ ಕೆಲವು ದಿನಗಳಿಂದ ಬಿಡುವ ನೀಡಿದ್ದ ವರುಣದೇವ ಕಳೆದ ರಾತ್ರಿ ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಕೃಷಿ ಚಟುವಟಿಕೆಗಳಿಗದೆ ಅಣಿಯಾಗಲು ಸಿದ್ದರಿರುವ ಮಲೆನಾಡಿಗರ ರೈತರ ಮೊಗದಲ್ಲಿ ಮೂಡಿದೆ.

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು ಸುತ್ತಮುತ್ತ ಧಾರಾಕಾರ ಮಳೆಯಾಗಿದ್ದು, ಬುಧವಾರ ಇಳಿಸಂಜೆಯಲ್ಲಿ ಆರಂಭವಾದ ಮಳೆ ಇಡೀ ರಾತ್ರಿ ಧಾರಾಕಾರವಾಗಿ ಮಳೆ ಬಂದಿದೆ. ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ವಾಹನ ಸವಾರರು ವಾಹನಗಳನ್ನು ಚಲಾಯಿಸಲು ಪರದಾಟ ನಡೆಸಿದ್ದಾರೆ. ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಗ್ರಾಮೀಣ ಭಾಗದಲ್ಲಿ ಅಲ್ಲಲ್ಲೇ ಮರಗಳು ಧರೆಗುರುಳಿದ್ದು, ರಸ್ತೆ ಸಂಪರ್ಕ ಕೂಡ ಜಖಂಗೊಂಡಿದೆ. ವಿದ್ಯುತ್ ತಂತಿಗಳ ಮೇಲೆ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದ್ದು ಜನ ಕತ್ತಲಲ್ಲಿ ಕಳೆಯುವಂತಾಗಿದೆ.

ಮಲೆನಾಡು ಕೃಷಿಕರ ಸೆರಗು:

ಮಲೆನಾಡು ಎಂದರೆ ಸಾಕು ಥಟ್ಟನೆ ನೆನಪಿಗೆ ಬರೋದು ಕೃಷಿನಾಡು ಅಂತ. ಕಳೆದ 15 ದಿನಗಳ ಹಿಂದ ಬಿದ್ದ ಸುರಿದ ಮಳೆ ಪರಿಣಾಮ ಕಾಫಿ ಅಡಿಕೆ-ಮೆಣಸಿಗೆ ಈಗ ನೀರಿನ ಅಗತ್ಯವಿರಲಿಲ್ಲ. ಕಾಫಿ ಹೂವಾಗಿ ಕಾಯಾಗುವ ಸಮಯ ಈಗ ಮಳೆ ಬೇಡವಾಗಿತು. ಆದರೆ ಎಂಟತ್ತು ದಿನಗಳಿಂದ ಬಿಡುವ ನೀಡಿದ್ದ ವರುಣ ಮತ್ತೆ ಧಾರಾಕಾರವಾಗಿ ಸುರಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಕೃಷಿ ಚಟುವಟಿಕೆಗೆಗಳು ಗರಿಗೆದರಿವೆ. ಬಿತ್ತನೆ ಕಾರ್ಯಕ್ಕೆ ಸಜ್ಜಾಗಲು ಮಲೆನಾಡಿಗರಿಗೆ ಅನುಕೂಲವಾಗಿದೆ ಎಂದರೆ ತಪ್ಪಾಗಲಾರದು.

 Chikkamaaluru: Heavy rains district- farmers getting ready to agriculture works

ಬಿಸಿಲಿಗೆ ಸುಸ್ತಾಗಿದ್ದ ಕಾಫಿನಾಡಿನ ಜನ, ತಂಪೆರದ ವರುಣ:

ಇನ್ನು ಕಳೆದ ಒಂದು ವಾರದಿಂದ ಭಾರೀ ಬಿಸಿಲಿನಿಂದ ಕಾಫಿನಾಡಿನ ಜನ ಕಂಗಲಾಗಿದ್ದರು, ಸುಮಾರು 33 ರಿಂದ 36 ತಾಪಮಾನ ಕಂಡು ಆಶ್ಚರ್ಯಕ್ಕೆ ಒಳಗಾಗಿದ್ದರು, ನಿನ್ನೆ ಸುರಿದ ಮಳೆಯಿಂದ ವಾತಾವರಣ ತಂಪೆರೆದಿದ್ದು ನಿಟ್ಟುಸಿರುಬಿಡುವಂತಾಗಿದೆ.

ಮಳೆನಾಡಿನ ಮಳೆ, ಸೌಂದರ್ಯದ ಕಳೆ:

ಮಲೆನಾಡಿನಲ್ಲಿ ಮಳೆಯಿಂದಾಗಿ ಅಲ್ಲಿನ ಸೌಂದರ್ಯಗಳ ನಡುವೆ ಇಣುಕುವ ಇಲ್ಲಿನ ಮಳೆಹನಿಗಳ ಲೀಲೆಯೇ ಹಾಗೆ. ಅದು ಅಂಥ ವೈಶಿಷ್ಟತೆ ರೋಮಾಂಚನ ನೀಡುತ್ತದೆ. ಪ್ರವಾಸಿಗರು ಅಂತೂ ಮಲೆನಾಡಿನ ಸೊಬಗನ್ನು ಸವಿಯಲು ಹಣಿಯಾಗುತ್ತಾರೆ. ವರುಣದೇವನ ಕೃಪೆಗೆ ಇಲ್ಲಿನ ಪ್ರಕೃತಿ ಸೊಬಗು ಸೆಳೆಯುವಂತಾಗಿದೆ ಕಾಫಿನಾಡು.

ಬಿಸಿಲಿನ ಝಳಕ್ಕೆ ಬೆಂಡಾಗಿದ್ದ ಜನರು ಪಶ್ಚಿಮಘಟ್ಟಗಳ ಸಾಲುಗಳು ಮಳೆಯ ಹನಿ ಹನಿಗಳು ಇಳೆಗೆ ಇಳಿಯಲಾರಂಭಿಸಿದ ಕೂಡಲೇ ತಮ್ಮ ಮಲೆನಾಡಿನ ಸೊಬಗು ತನ್ನ ನೈಜರೂಪ ತೋರಿಸುತ್ತದೆ. ಈ ನೈಜ ಪ್ರಕೃತಿ ಸೊಬಗಿಗೆ ಮನಸು ಸೋಲದೆ ಇರಲಾರರು. ಮಲೆನಾಡು ಮಳೆಯ ಸಿಂಚಿನ ಮಳೆಗಾಲದ ವಿಶೇಷತೆ ಹಿಡಿದ ಕನ್ನಡಿಯಂತಿರುತ್ತದೆ. ಮೈ ಬೆಚ್ಚಗೆ ಮಾಡಿಕೊಳ್ಳಲು ಹವಣಿಸುವ ಸನ್ನವೇಶ ಗಮನ ಸೆಳೆಯುವಂತಿರುತ್ತದೆ.

English summary
The rain, which had been leaving for the past few days, fell again last night. There is a farmer's paw that is ready to rally without agricultural activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X