ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಡಿಗೆರೆ ಸುತ್ತಮುತ್ತ ಭಾರೀ ಮಳೆ; ಮತ್ತೆ ಗುಡ್ಡ ಕುಸಿವ ಭೀತಿಯಲ್ಲಿ ಚಾರ್ಮಾಡಿ ಘಾಟ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್ 3: ಕೆಲವು ದಿನಗಳಿಂದ ತಣ್ಣಗಾಗಿದ್ದ ಮಳೆ ಈಗ ಮತ್ತೆ ಚುರುಕಾಗಿದೆ. ಮೂಡಿಗೆರೆ ತಾಲೂಕಿನಾದ್ಯಂತ ಮಳೆಯ ಆರ್ಭಟ ಆರಂಭವಾಗಿದೆ.

ಇಂದು ಬೆಳಗ್ಗೆಯಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು, ಹಲವೆಡೆ ಮರಗಳು ನೆಲಕ್ಕುರುಳಿವೆ. ವಿದ್ಯುತ್ ಕಂಬಗಳು ಉರುಳಿ ಹಲವೆಡೆ ವಿದ್ಯುತ್ ಕಡಿತವಾಗಿದೆ.

ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ 24 ಗಂಟೆ ಭಾರಿ ಮಳೆಬೆಂಗಳೂರು ಸೇರಿ ವಿವಿಧ ಜಿಲ್ಲೆಗಳಲ್ಲಿ 24 ಗಂಟೆ ಭಾರಿ ಮಳೆ

ಚಾರ್ಮಾಡಿ ಘಾಟ್ ಸೇರಿದಂತೆ ಕೊಟ್ಟಿಗೆಹಾರ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ಮತ್ತೆ ಘಾಟ್ ನಲ್ಲಿ ಭೂಕುಸಿತದ ಭೀತಿ ಆವರಿಸಿದೆ. ಮೊನ್ನೆಯಷ್ಟೇ ಚಾರ್ಮಾಡಿ ಘಾಟ್ ನಲ್ಲಿ ಲಘು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಸಂಜೆ ವೇಳೆಗಾಗಲೇ ಆ ಅನುಮತಿಯನ್ನು ಹಿಂಪಡೆಯಲಾಗಿತ್ತು. ಇದೀಗ ಮತ್ತೆ ಗುಡ್ಡ ಕುಸಿಯುವ ಭೀತಿ ಆವರಿಸಿದೆ.

Heavy Rain Around Mudigere And Charmedi Ghat In Fear Of Collapse

ಲಿಂಗನಮಕ್ಕಿ ತುಂಬಲು ಬರೀ ಅರ್ಧ ಅಡಿ ಬಾಕಿ; 11 ಗೇಟ್ ಗಳಿಂದಲೂ ನೀರುಲಿಂಗನಮಕ್ಕಿ ತುಂಬಲು ಬರೀ ಅರ್ಧ ಅಡಿ ಬಾಕಿ; 11 ಗೇಟ್ ಗಳಿಂದಲೂ ನೀರು

ಬೆಳಿಗ್ಗೆಯಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಮುಗ್ರಹಳ್ಳಿ ಗ್ರಾಮದ ಸೇತುವೆ ಕುಸಿಯುವಂತೆ ಕಾಣುತ್ತಿದೆ, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

English summary
Rainfall has begun across the Mudigere taluk. Many trees have fallen to the ground. Charmadi ghat again in the fear of collapse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X