ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಏನ್ ಘನಂಧಾರಿ ಕೆಲಸ ಮಾಡಿದ್ದೀರ ಅಂತ ಟ್ಯಾಪ್ ಮಾಡ್ಬೇಕು?"; ಗುಡುಗಿದ ಎಚ್ ಡಿಕೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

'ಏನ್ ಘನಂಧಾರಿ ಕೆಲಸ ಮಾಡಿದ್ದೀರ ಅಂತ ಟ್ಯಾಪ್ ಮಾಡ್ಬೇಕು?'; ಗುಡುಗಿದ ಎಚ್ ಡಿಕೆ

ಚಿಕ್ಕಮಗಳೂರು, ಆಗಸ್ಟ್ 19: "ಬಿಎಸ್ ವೈ ರೀತಿ ನಾನು ಯಾವುದೇ ಸಂವಿಧಾನಾತ್ಮಕ ಸಂಸ್ಥೆಯನ್ನು ಖರೀದಿಸಿಲ್ಲ. ಜನರ ಕಷ್ಟದ ಬಗ್ಗೆ ಗಮನ ಕೊಟ್ಟಿದ್ದೆ. ಅಧಿಕಾರ ದುರುಪಯೋಗಪಡಿಸಿಕೊಂಡು ನನ್ನ ರಕ್ಷಣೆ ಮಾಡಿಕೊಳ್ಳುವ ಅಗತ್ಯ ನನಗಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಫೋನ್ ಕದ್ದಾಲಿಕೆ ಆಗಿರುವುದು ಮೇಲ್ನೋಟಕ್ಕೆ ದೃಢ: ಬಿಎಸ್‌ವೈಫೋನ್ ಕದ್ದಾಲಿಕೆ ಆಗಿರುವುದು ಮೇಲ್ನೋಟಕ್ಕೆ ದೃಢ: ಬಿಎಸ್‌ವೈ

ಚಿಕ್ಕಮಗಳೂರು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಅವರು, ಫೋನ್ ಕದ್ದಾಲಿಕೆ ಪ್ರಕರಣದ ಕುರಿತೂ ಮಾತನಾಡಿದರು. ತಮ್ಮ ಬಗ್ಗೆ ಆರೋಪ ಮಾಡಿದ ವಿಶ್ವನಾಥ್ ಅವರ ವಿರುದ್ಧ ಕಿಡಿಕಾರಿದರು. "ವಿಶ್ವನಾಥ್ ಒಬ್ಬ ಮನುಷ್ಯಾನಾ? ವಯಸ್ಸಿನ ಗಾಂಭೀರ್ಯಾ ಬೇಡ್ವ ಅವರಿಗೆ? ಅವರು ಏನ್ ಘನಾಂಧಾರಿ ಕೆಲಸ ಮಾಡ್ತಿದ್ದಾರೆಂದು ಫೋನ್ ಟ್ಯಾಪ್ ಮಾಡ್ಬೇಕು? ನಿಮ್ಮ ವಯಸ್ಸು, ಹಿರಿತನಕ್ಕೆ ತಕ್ಕಂತೆ ಮಾತಾಡಿ, ಗೌರವಯುತವಾಗಿ ನಡೆದುಕೊಳ್ಳಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಫೋನ್ ಟ್ಯಾಪಿಂಗ್ ಪ್ರಕರಣ ಬಿಜೆಪಿಗೆ ಸಿಕ್ಕ ಬ್ರಹ್ಮಾಸ್ತ್ರ! ಫೋನ್ ಟ್ಯಾಪಿಂಗ್ ಪ್ರಕರಣ ಬಿಜೆಪಿಗೆ ಸಿಕ್ಕ ಬ್ರಹ್ಮಾಸ್ತ್ರ!

"ನಿಮ್ಮಿಂದ ನಾನು ಪಾಠ ಕಲಿಯಬೇಕಿಲ್ಲ. ಯಾವ ತನಿಖೆ ಬೇಕಾದ್ರು ಮಾಡಿಕೊಳ್ಳಿ, ನಾನು ಶುದ್ಧವಾಗಿರದಿದ್ರೆ ನಂಗೆ ಈ ಧೈರ್ಯ ಇರುತ್ತಿರಲಿಲ್ಲ. ಹೆದರಿ ಯಡಿಯೂರಪ್ಪ ಬಳಿ ಉಳಿಸಪ್ಪಾ ಎಂದು ಕೇಳ್ಕೊಬೇಕಿತ್ತು. ಅಂಥ ಸ್ಥಿತಿ ಬಂದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಗೌರವ, ಸ್ವಾಭಿಮಾನ ಕಳೆದುಕೊಂಡು ಬದುಕುವುದಿಲ್ಲ" ಎಂದು ಗುಡುಗಿದರು.

HD Kumaraswamy Reacted On Phone Tapping In Chikkamagaluru

ಇದೇ ಸಂದರ್ಭ ಮೂಡಿಗೆರೆ ತಾಲೂಕಿನ‌ ನೆಲ್ಲಿಬೀಡು, ಸಂಸೆ, ಕಳಸಾ, ಹಿರೇಬೈಲು ಗ್ರಾಮಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ತರ ಅಹವಾಲು ಸ್ವೀಕರಿಸಿದರು. ಭೋಜೇಗೌಡ, ಧರ್ಮೇಗೌಡ, ಬಿ ಬಿ‌ ನಿಂಗಯ್ಯ ಕುಮಾರ ಸ್ವಾಮಿಯವರಿಗೆ ಸಾಥ್ ನೀಡಿದರು.

English summary
Former chief minister HD Kumaraswamy, who visited the flood-prone area of ​​Chikkamagaluru district, also spoke about the phone tapping issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X