ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೃಂಗೇರಿಯಲ್ಲಿ ದೇವೇಗೌಡರಿಂದ ಸಹಸ್ರ ಚಂಡಿಕಾ ಯಾಗ: ಪಕ್ಷದ ಬಲವರ್ಧನೆಗೆ ಮುಂದಾದರಾ ಎಚ್ ಡಿಡಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 17: ಸತತ ಸೋಲು ಕಂಡ ನಂತರ ರಾಜಕೀಯವಾಗಿ ಪಕ್ಷದ ಬಲವರ್ಧನೆ, ರಾಜಕೀಯ ಭವಿಷ್ಯ, ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಶಕ್ತಿ ದೇವತೆ ಶೃಂಗೇರಿ ಶಾರದೆಯ ಮೊರೆ ಹೋಗಿದ್ದಾರೆ ಎಚ್ ಡಿ ದೇವೇಗೌಡರು. ನಿನ್ನೆ ಗುರುವಾರವೇ ಪತ್ನಿ ಚನ್ನಮ್ಮ ಅವರೊಂದಿಗೆ ಶೃಂಗೇರಿಗೆ ಆಗಮಿಸಿರುವ ದೇವೇಗೌಡರು ಹಲವು ಹೋಮ ಹವನಗಳನ್ನು ನೆರವೇರಿಸಲಿದ್ದಾರೆ.

ಪಕ್ಷ ಉಳಿವಿಗಾಗಿ ಶೃಂಗೇರಿ ಶಾರದೆ ಮೊರೆ ಹೋದ ಮಾಜಿ ಪ್ರಧಾನಿಪಕ್ಷ ಉಳಿವಿಗಾಗಿ ಶೃಂಗೇರಿ ಶಾರದೆ ಮೊರೆ ಹೋದ ಮಾಜಿ ಪ್ರಧಾನಿ

ಜನವರಿ 21, ಮಂಗಳವಾರದವರೆಗೂ ಇಲ್ಲೇ ವಾಸ್ತವ್ಯ ಹೂಡಿರುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಸ್ಥರಿಂದ ಸಹಸ್ರ ಚಂಡಿಕಾ ಯಾಗವನ್ನು ಹಮ್ಮಿಕೊಳ್ಳಲಾಗಿದೆ. ಸಂಕ್ರಾಂತಿಯ ಮರುದಿನವೇ ಶೃಂಗೇರಿಗೆ ಆಗಮಿಸಿದ ಗೌಡರು, ಭಾರತಿ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ವಿಧುಶೇಖರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಶಾರದಾಂಬೆ ಸನ್ನಿಧಿಯಲ್ಲಿ ಇಂದಿನಿಂದ 5 ದಿನಗಳ ಕಾಲ ಹೋಮ ಹವನ ನಡೆಯಲಿದೆ. ಇಂದು ಬೆಳಿಗ್ಗೆ ದೇಗುಲದ ಯಾಗ ಮಂಟಪದಲ್ಲಿ ಗಣಪತಿ ಹೋಮದ ಮೂಲಕ ಯಾಗಕ್ಕೆ ಸಂಕಲ್ಪ ನೆರವೇರಿಸಿದ್ದಾರೆ. ಮಂಗಳವಾರ ಯಾಗದ ಪೂರ್ಣಾಹುತಿ ಆಗಲಿದೆ.

 Hd Devegowda Family Performing Sahasra Chandika Yaga In Sringeri

ಭಿನ್ನವಾಗಿ ಅಭಿಮಾನ ಮೆರೆದ ದೇವೇಗೌಡರ ಅಭಿಮಾನಿ ರೈತಭಿನ್ನವಾಗಿ ಅಭಿಮಾನ ಮೆರೆದ ದೇವೇಗೌಡರ ಅಭಿಮಾನಿ ರೈತ

10 ಋತ್ವಿಜಯರಿಂದ ಸಹಸ್ರ ಚಂಡಿಯಾಗ ನಡೆಯಲಿದ್ದು, 5ನೇ ದಿನ ದೇವೇಗೌಡರ ಕುಟುಂಬಸ್ಥರೆಲ್ಲರೂ ಪೂರ್ಣಹುತಿಯಲ್ಲಿ ಭಾಗಿಯಾಗುವರೆಂದು ತಿಳಿದುಬಂದಿದೆ. ದೇವೇಗೌಡರು ಮತ್ತೊಮ್ಮೆ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ, ಈ ಹಿನ್ನೆಲೆ ಜೆಡಿಎಸ್ ಬಲವರ್ಧನೆಗೆ ಗೌಡರು ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷ ಹೋಮ ಹವನ, ಯಾಗ ನಡೆಸುತ್ತಿದ್ದಾರೆ ಎನ್ನಲಾಗಿದೆ.

English summary
Former PM HD Deve Gowda performing sahasra chandika yaga in sringeri to strengthening the party
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X