ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ಮಲ್ಲಿಗೆ ಹೂ ಅಲ್ಲವೋ ಅಣ್ಣಾ, ಆಲಿಕಲ್ಲು!

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಏಪ್ರಿಲ್ 24: ಕಾಫಿನಾಡು ಮಲೆನಾಡು ಭಾಗದಲ್ಲಿ ಮಂಗಳವಾರ (ಏ.23) ಸಂಜೆ ಸುರಿದ ಧಾರಾಕಾರ ಮಳೆಗೆ 20 ಕೆ.ಜಿ.ತೂಕದ ಒಂದು ಆಲಿಕಲ್ಲು ಬೀಳುವುದರ ಜೊತೆಗೆ ಕಾಫಿತೋಟದ ತುಂಬೆಲ್ಲಾ ಬಿದ್ದ ಇತರೆ ಚಿಕ್ಕ ಚಿಕ್ಕ ಆಲಿ ಕಲ್ಲುಗಳು ನೋಡಲು ಮಲ್ಲಿಗೆ ಹೂವೇ ಬಿದ್ದಂತೆ ಭಾಸವಾಗುತ್ತಿತ್ತು.

ಉತ್ತರ ಕನ್ನಡದಲ್ಲಿ ಮತದಾನಕ್ಕೆ ಅಡ್ಡಿಯಾದ ಗುಡುಗು ಸಹಿತ ಭಾರೀ ಮಳೆಉತ್ತರ ಕನ್ನಡದಲ್ಲಿ ಮತದಾನಕ್ಕೆ ಅಡ್ಡಿಯಾದ ಗುಡುಗು ಸಹಿತ ಭಾರೀ ಮಳೆ

ಸುಮಾರು ಒಂದು ಗಂಟೆಯ ಕಾಲ ಭಾರೀ ಮಳೆ ಸುರಿದ ಪರಿಣಾಮ ಮನೆಯ ಆವರಣದ ತುಂಬಾ ಮಲ್ಲಿಗೆ ಹೂ ಬಿದ್ದಂತೆ ಆಲಿಕಲ್ಲು ಬಿದ್ದಿದೆ. ಮಲೆನಾಡಿನ ಜನ ಆ ಆಲಿಕಲ್ಲುಗಳನ್ನ ಪಾತ್ರೆ-ಲೋಟಗಳಲ್ಲಿ ತುಂಬಿ ಖುಷಿ ಪಟ್ಟರು. ಅಷ್ಟೇ ಅಲ್ಲ, ಆ 20 ಕೆ.ಜಿಯ ಆಲಿಕಲ್ಲನ್ನು ಹಿಡಿದು ಫೋಟೋ ಹೊಡೆದು ಸಂಭ್ರಮಿಸಿದರು.

Hail stones rain came yesterday in Chikkamagalur

ಕಳೆದ ಎರಡು ತಿಂಗಳ ಭೀಕರ ರಣ ಬಿಸಿಲಿಗೆ ಹೈರಾಣಾಗಿದ್ದ ಮಲೆನಾಡಿಗರಿಗೆ ಈ ಮಳೆ ಸಂತಸ ತಂದರೆ, ಆಲಿಕಲ್ಲು ಮತ್ತಷ್ಟು ಖುಷಿ ನೀಡಿದೆ. ಕಾಫಿ-ಅಡಿಕೆ-ಮೆಣಸು ಬೆಳೆಗಾರರಿಗೆ ಮಳೆ ಖುಷಿ ತಂದರೂ ಆಲಿಕಲ್ಲು ಮಳೆ ತಲೆಮೇಲೆ ಕೈಹೊದ್ದು ಕೂರುವಂತೆ ಮಾಡಿದೆ.

Hail stones rain came yesterday in Chikkamagalur

ಈ ಪ್ರಮಾಣದಲ್ಲಿ ಮಳೆಗಿಂತ ಆಲಿಕಲ್ಲೇ ಹೆಚ್ಚಾಗಿ ಸುರಿದಿರುವುದರಿಂದ ಬೆಳೆ ಹಾಳಾಗುತ್ತೆಂದು ರೈತರು ತಲೆ ಮೇಲೆ ಕೈಹೊದ್ದು ಕೂತಿದ್ದಾರೆ.

English summary
Hail stones rain came yesterday in Chikkamagalur.Hail stones in the coffee plantation looked like a jasmine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X