ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು; ವಾರಾಂತ್ಯದ ಕರ್ಫ್ಯೂಗೆ ಉತ್ತಮ ಬೆಂಬಲ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಏಪ್ರಿಲ್ 25; ಕೋವಿಡ್ ಸೋಂಕು ಹರಡುವಿಕೆ ತಡೆಯಲು ಸರ್ಕಾರ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕರ್ಫ್ಯೂಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಜನಸಂಚಾರ ಮತ್ತು ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು ರಸ್ತೆಗಳೆಲ್ಲ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿವೆ. ಭಾನುವಾರ ಬೆಳಗ್ಗೆ 6 ರಿಂದ 10 ಗಂಟೆಯವರೆಗೂ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು.

ದಾವಣಗೆರೆ; ಮಾರ್ಕೆಟ್‌ನಲ್ಲಿ ಕೋವಿಡ್ ನಿಯಮ ಮರೆತ ಜನ! ದಾವಣಗೆರೆ; ಮಾರ್ಕೆಟ್‌ನಲ್ಲಿ ಕೋವಿಡ್ ನಿಯಮ ಮರೆತ ಜನ!

ಹಾಲು, ಹಣ್ಣು, ಹೂವು, ದಿನಸಿ ಸೇರಿದಂತೆ ಇತರೆ ವಸ್ತುಗಳ ಖರೀದಿಗೆ ಜನರು ಆಗಮಿಸಿದ್ದರು. ಭಾನುವಾರವಾದ ಹಿನ್ನಲೆಯಲ್ಲಿ ಹಾಲು, ಹಣ್ಣು ಖರೀದಿಗಿಂತ ಮೀನು, ಮಾಂಸ, ಮೊಟ್ಟೆ ಖರೀದಿಗೆ ಜನರು ಮುಗಿಬಿದಿದ್ದರು.‌ ಚಿಕನ್‌, ಮೀನು, ಮಾಂಸದ ಅಂಗಡಿ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು.

ಕೋವಿಡ್ ಮಾರ್ಗಸೂಚಿ; ಮದುವೆಗೆ ಬಂದವರು ಅರ್ಧದಲ್ಲೇ ವಾಪಸ್! ಕೋವಿಡ್ ಮಾರ್ಗಸೂಚಿ; ಮದುವೆಗೆ ಬಂದವರು ಅರ್ಧದಲ್ಲೇ ವಾಪಸ್!

 Good Response For Weekend Curfew In Chikkamagaluru

10 ಗಂಟೆ ಬಳಿಕ ಪೋಲಿಸರು ಎಲ್ಲಾ ಅಂಗಡಿ ಬಂದ್ ಮಾಡಿಸಿದ್ದರಿಂದ ಕೆಲವರಿಗೆ ಮೀನು, ಮಾಂಸ ಸಿಕ್ಕದೆ ನಿರಾಸೆಯಿಂದ ಮನೆ ಕಡೆಗೆ ಹೆಜ್ಜೆ ಹಾಕಿದರು. 11 ಗಂಟೆ ವೇಳೆಗೆ ಗಿಜುಗುಡುತ್ತಿದ್ದ ಮಾರುಕಟ್ಟೆಗಳೆಲ್ಲ ಸ್ತಬ್ದಗೊಂಡವು. ಕೆಎಸ್‌ಆರ್‌ಟಿಸಿ ಬಸ್‌ಗಳಿದ್ದರೂ ಪ್ರಯಾಣಿಕರು ನಿಲ್ದಾಣದ ಕಡೆ ಸುಳಿಯಲಿಲ್ಲ.

ಕೊರೊನಾ ಕರ್ಫ್ಯೂ: ಹೊಸ ಕಠಿಣ ಮಾರ್ಗಸೂಚಿ ಪ್ರಕಟ, ಏನಿರುತ್ತೆ? ಏನಿರಲ್ಲ?ಕೊರೊನಾ ಕರ್ಫ್ಯೂ: ಹೊಸ ಕಠಿಣ ಮಾರ್ಗಸೂಚಿ ಪ್ರಕಟ, ಏನಿರುತ್ತೆ? ಏನಿರಲ್ಲ?

ಆಟೋ, ಟ್ಯಾಕ್ಸಿ ವಾಹನಗಳು 10ಗಂಟೆಯ ವರೆಗೂ ಸಂಚಾರ ನಡೆಸಿದವು. 10 ಗಂಟೆಯ ನಂತರ ಸಂಚಾರ ಸಂಪೂರ್ಣ ಸ್ಥಗಿತವಾಯಿತು. ಔಷಧಿ ಅಂಗಡಿ, ಪೆಟ್ರೋಲ್ ಬಂಕ್, ಆಸ್ಪತ್ರೆ ಹೊರತು ಪಡಿಸಿದಂತೆ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.

 Good Response For Weekend Curfew In Chikkamagaluru

Recommended Video

ಲಾಕ್ ಡೌನ್ ಭೀತಿ ಹಿನ್ನೆಲೆ ಬೆಂಗಳೂರು ಬಿಟ್ಟು ಹೊರಟ ಜನ..! | Oneindia Kannada

ಸೋಮವಾರ ಬೆಳಗ್ಗೆ 6 ಗಂಟೆಯ ತನಕ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರಲಿದೆ. ಸೋಮವಾರ ರಾತ್ರಿ 9 ರಿಂದ ಪುನಃ ನೈಟ್ ಕರ್ಫ್ಯೂ ಜಾರಿಗೆ ಬರಲಿದೆ.

English summary
Good response for weekend curfew in Chikkamagaluru. People come to market from morning 6 to 10 am to get essential items.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X