• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರೀತಿಸಿ ಮದುವೆಯಾಗಿದ್ದ ಐಎಎಸ್ ಅಧಿಕಾರಿಗಳು ಚಿಕ್ಕಮಗಳೂರಿಗೆ ವರ್ಗ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಫೆಬ್ರವರಿ 21: ಪರಸ್ಪರ ಪ್ರೀತಿಸಿ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಾವಣಗೆರೆ ಡಿಸಿ ಗೌತಮ್ ಬಗಾದಿ ಹಾಗೂ ಸಿಇಓ ಅಶ್ವತಿ ಈಗ ಒಂದೇ ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ.

2009ರ ಐಎಎಸ್ ಬ್ಯಾಚ್ ನಲ್ಲಿದ್ದ ಇಬ್ಬರು ಅಧಿಕಾರಿಗಳು ಕಳೆದ ನಾಲ್ಕು ವರ್ಷಗಳ ಹಿಂದೆ ರಾಯಚೂರು ಜಿಲ್ಲೆಯಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದರು.ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ನಂತರ ಇದೇ ತಿಂಗಳು ಫೆಬ್ರವರಿ 14 ರಂದು ಗೌತಮ್ ಬಗಾದಿ ಹಾಗೂ ಅಶ್ವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಪ್ರೇಮಿಗಳ ದಿನದಂದು ಸಪ್ತಪದಿ ತುಳಿಯಲಿದ್ದಾರೆ ದಾವಣಗೆರೆ ಡಿಸಿ, ಜಿಲ್ಲಾ ಪಂಚಾಯಿತಿ ಸಿಇಓ

ಈಗ ಇಬ್ಬರನ್ನೂ ಚಿಕ್ಕಮಗಳೂರು ಜಿಲ್ಲೆಯ ಡಿ ಸಿ ಹಾಗೂ ಸಿಇಓ ಆಗಿ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಈ ಜೋಡಿ ಮಲೆನಾಡಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮನೆ ಮಾಡಿದೆ.

ಈ ಹಿಂದೆ ಕೆಲಸ ಮಾಡಿದ ಸ್ಥಳಗಳಲ್ಲಿ ಇವರಿಬ್ಬರು ಖಡಕ್ ಆಗಿ ಇದ್ದವರು. ಕಾನೂನು ಚೌಕಟ್ಟು ವಿಚಾರದಲ್ಲಿ ಯಾವತ್ತು ರಾಜಿಯಾದವರಲ್ಲ ಎಂಬ ಹೆಸರನ್ನು ಉಳಿಸಿಕೊಂಡಿದ್ದಾರೆ. ಅಲ್ಲದೇ ಒಂದೇ ಜಿಲ್ಲೆಯಲ್ಲಿದ್ದುಕೊಂಡು ಉತ್ತಮ ಅಧಿಕಾರ ನೀಡಿದ್ದಾರೆ.

6 ತಿಂಗಳಲ್ಲಿ 13 ಲಕ್ಷ ಟನ್ ಕಸ ಸ್ವಚ್ಛಗೊಳಿಸಿದ ಐಎಎಸ್ ಅಧಿಕಾರಿ

ಕಳೆದ ನಾಲ್ಕು ವರ್ಷಗಳಿಂದಲೂ ಪ್ರೀತಿ ಇದ್ದರೂ ಅದನ್ನು ಎಲ್ಲಿಯೂ ತೋರಿಸಿಕೊಂಡಿರಲಿಲ್ಲ. ಇಬ್ಬರು ಕೂಡ ಉತ್ತಮ ಹುದ್ದೆಯಲ್ಲಿ ಇದ್ದಿದ್ದರಿಂದ ಈ ವಿಚಾರ ಬಹಿರಂಗಪಡಿಸುವ ಗೋಜಿಗೆ ಹೋಗಿರಲಿಲ್ಲ ಎನ್ನಲಾಗಿದೆ. ಮುಂದೆ ಓದಿ...

 ಸಣ್ಣ ಅನುಮಾನವೂ ಬಂದಿರಲಿಲ್ಲ

ಸಣ್ಣ ಅನುಮಾನವೂ ಬಂದಿರಲಿಲ್ಲ

ಅಲ್ಲದೇ, ಗೌತಮ್ ಮತ್ತು ಅಶ್ವತಿ ಒಂದೇ ವೇದಿಕೆಯಲ್ಲಿ ಇದ್ದಾಗಲೂ ಮದುವೆ ನಿಶ್ಚಯವಾಗುವವರೆಗೆ ಇವರಿಬ್ಬರು ಪ್ರೇಮಿಗಳು ಎಂಬ ಸಣ್ಣ ಅನುಮಾನ ಯಾರಿಗೂ ಬಂದಿರಲಿಲ್ಲ. ಹಾಗೆಯೇ ತಮ್ಮ ಕಾರ್ಯವನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

 ಒಳ್ಳೆಯ ಹೆಸರು ಗಳಿಸಿದ್ದರು

ಒಳ್ಳೆಯ ಹೆಸರು ಗಳಿಸಿದ್ದರು

ಇನ್ನು ದಾವಣಗೆರೆ ಜಿಲ್ಲೆಗೆ ಮೊದಲು ಆಗಮಿಸಿದ್ದ ಸಿಇಒ ಅಶ್ವತಿ ಬಯಲು ಶೌಚಾಲಯ ಮುಕ್ತಿಗಾಗಿ ಪಣತೊಟ್ಟು ಕೆಲಸ ನಿರ್ವಹಿಸಿದ್ದರು. ಉತ್ತಮ ಆಡಳಿತದಿಂದ ದಾವಣಗೆರೆ ಜಿಲ್ಲೆಯಲ್ಲಿ ಒಳ್ಳೆಯ ಹೆಸರು ಗಳಿಸಿದ್ದರು.

ಸರ್ಕಾರಿ ಶಾಲೆಯೇ ಸಾಕು: ಮಾದರಿಯಾದರು ಈ ಮಹಿಳಾ ಜಿಲ್ಲಾಧಿಕಾರಿ

 ಬಹಳ ದಿನಗಳಿಂದಲೇ ಪ್ರೀತಿ ಇತ್ತು

ಬಹಳ ದಿನಗಳಿಂದಲೇ ಪ್ರೀತಿ ಇತ್ತು

ಉತ್ತಮ ಆಡಳಿತದ ಮೂಲಕ ಹೆಸರು ಗಳಿಸಿದ್ದ ಅಶ್ವತಿಯವರಿಗೂ ಹಾಗೂ ಗೌತಮ್ ಅವರಿಗೂ ಬಹಳ ದಿನಗಳಿಂದಲೇ ಪ್ರೀತಿ ಇತ್ತು ಎಂದು ಹೇಳಲಾಗಿದೆ. ಹೀಗಾಗಿಯೇ ಗೌತಮ್ ಬಗಾದಿಯವರು ಪ್ರೀತಿ ಹುಡುಕಿ ದಾವಣಗೆರೆ ಬಂದರು ಎಂಬ ಮಾತು ಹರಿದಾಡುತ್ತಿದೆ.

 ಮೆಚ್ಚುಗೆ ಗಳಿಸಿಕೊಂಡಿದ್ದರು

ಮೆಚ್ಚುಗೆ ಗಳಿಸಿಕೊಂಡಿದ್ದರು

ದಾವಣಗೆರೆಗೆ ಜಿಲ್ಲಾಧಿಕಾರಿಯಾಗಿ ಬಂದ ನಂತರ ಗೌತಮ್ ಬಗಾದಿಯವರು ಕೂಡ ಉತ್ತಮ ಆಡಳಿತ ನಡೆಸಿದ್ದರು. ಪ್ರತಿ ಸೋಮವಾರ ಜನಸ್ಪಂದನ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಗಳಿಸಿಕೊಂಡಿದ್ದರು.

 ಚಿಕ್ಕಮಗಳೂರಿಗೆ ವರ್ಗಾವಣೆ

ಚಿಕ್ಕಮಗಳೂರಿಗೆ ವರ್ಗಾವಣೆ

ಒಟ್ಟಾರೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹತ್ತು ದಿನಗಳ‌ ಒಳಗಾಗಿಯೇ ದಂಪತಿಗಳು ಮಲೆನಾಡು ಚಿಕ್ಕಮಗಳೂರಿಗೆ ವರ್ಗಾವಣೆಯಾಗಿದ್ದಾರೆ. ದಾವಣಗೆರೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಈ ಇಬ್ಬರೂ ಅಧಿಕಾರಿಗಳು ಚಿಕ್ಕಮಗಳೂರಿನಲ್ಲಿಯೂ ಸಹ ಅದೇ ರೀತಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿ ಎಂಬುದು ಸ್ಥಳೀಯರ ಆಶಯವಾಗಿದೆ.

English summary
Davanagere DC Gautam Bagadi and CEO Ashwathi are now transferred to Chikmagalur district. The state government has issued a transfer to Chikmagalur. Gautam Bagadi and Ashwathi married on February 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X