ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರಿನಲ್ಲಿ ಹೆಚ್ಚಿದ ಕಾಡ್ಗಿಚ್ಚು, 300 ಎಕರೆ ಸಸ್ಯ ಸಂಪತ್ತು ಬೆಂಕಿಗಾಹುತಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ 26: ಎನ್.ಆರ್ ಪುರ ತಾಲೂಕಿನ ಗುಬ್ಬಿಗಾ ಗ್ರಾ.ಪಂ.ವ್ಯಾಪ್ತಿಯ ನೇತ್ಕಲ್ ಅರಣ್ಯ ಪ್ರದೇಶದಲ್ಲಿ ಸೋಮವಾರ (ಫೆ.25) ಕಾಡ್ಗಿಚ್ಚಿನಿಂದ ಬೆಲೆ ಬಾಳುವ ಮರಗಳು ಅರಣ್ಯದಲ್ಲಿ ಸಂಪೂರ್ಣ ಸುಟ್ಟು ಕರುಕಲಾಗಿದ್ದವು.

ಇದೀಗ ಚಿಕ್ಕಮಗಳೂರಿನಲ್ಲಿ ಕಾಡ್ಗಿಚ್ಚು ಮತ್ತಷ್ಟು ಹೆಚ್ಚಾಗಿದ್ದು, ಕೊಪ್ಪ ತಾಲೂಕಿನ ಗುಂಡಿಕ್ಕಿ ಅರಣ್ಯ ಸಂಪೂರ್ಣ ಸುಟ್ಟು ಕರಕಲಾಗಿದೆ. ರಾತ್ರಿಯಿಡೀ ಕಾಡು ಧಗ ಧಗನೆ ಹೊತ್ತಿ ಉರಿದಿದ್ದು,
ಸುಮಾರು 300 ಎಕರೆ ಸಸ್ಯ ಸಂಪತ್ತು ಬೆಂಕಿಗಾಹುತಿಯಾಗಿದೆ.

Forest fire increased at Chikmagalur

ಕಾಡ್ಗಿಚ್ಚಿಗೆ ಸುಟ್ಟು ಕರುಕಲಾದ ಚಿಕ್ಕಮಗಳೂರಿನ ನೇತ್ಕಲ್ ಅರಣ್ಯ ಪ್ರದೇಶಕಾಡ್ಗಿಚ್ಚಿಗೆ ಸುಟ್ಟು ಕರುಕಲಾದ ಚಿಕ್ಕಮಗಳೂರಿನ ನೇತ್ಕಲ್ ಅರಣ್ಯ ಪ್ರದೇಶ

ಗಾಳಿ ಹೆಚ್ಚಾದಂತೆ ಜ್ವಾಲೆ ಮತ್ತಷ್ಟು ತೀರ್ವಗೊಳ್ಳುತ್ತಿದ್ದು, ದಟ್ಟಾರಣ್ಯಕ್ಕೆ ದಾರಿ ಇಲ್ಲದೆ ಬೆಂಕಿ ನಂದಿಸೋ ಕಾರ್ಯಕ್ಕೆ ಹಿನ್ನಡೆಯಾಗಿದೆ. ಹಾಗೆಯೇ ಸೀಗೋಡಿನ ಕಾಫಿ ಸಂಶೋಧನಾ ಕೇಂದ್ರದ ಬಳಿಯೂ ಬೆಂಕಿ ಆವರಿಸೋ ಭೀತಿ ಎದುರಾಗಿದೆ.

Forest fire increased at Chikmagalur

ಹೊತ್ತಿ ಉರಿದ ಬಂಡೀಪುರ: ಬೆಂಕಿಯಲ್ಲಿ ಬೆಂದ ಪ್ರಾಣಿಗಳು, 2500 ಎಕರೆ ಅರಣ್ಯ ಪ್ರದೇಶ ನಾಶ

ಹೇರೂರು, ಗುಂಡಿಕ್ಕಿ ಗ್ರಾಮಗಳ ಜನರಲ್ಲಿ ತೀವ್ರ ಆತಂಕವುಂಟಾಗಿದ್ದು, ಮಾಲೀಕರು ರಾತ್ರಿಯಿಡೀ ನಿದ್ದೆ ಮಾಡದೇ ಕಾಫಿ ತೋಟ ಕಾಯ್ದಿದ್ದಾರೆ.

English summary
Forest fire increased at Gundikki, Chikmagalur. 300 acres of plants are destroyed. That's why people are scared in Heruru, Gundikki villages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X