ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು : ಚೆಕ್‌ಪೋಸ್ಟ್‌ ಮೇಲೆ ಪೆಟ್ರೋಲ್ ಬಾಂಬ್ ಎಸೆತ

|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ 17 : ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ನಡೆದ ಈ ಘಟನೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬಸರೀಕಲ್‌ನಲ್ಲಿ ಈ ಘಟನೆ ನಡೆದಿದೆ. ಭಾನುವಾರ ಬೆಳಗ್ಗೆ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ದಾಳಿಯಿಂದ ಚೆಕ್‌ಪೋಸ್ಟ್‌ಗೆ ಹಾನಿಯಾಗಿದೆ.

ಈ ಇಬ್ಬರು ನಕ್ಸಲರ ತಲೆಗೆ 2 ಲಕ್ಷ ರೂ.ಇನಾಮು ಘೋಷಿಸಿದ ಎನ್.ಐ.ಎ.ಈ ಇಬ್ಬರು ನಕ್ಸಲರ ತಲೆಗೆ 2 ಲಕ್ಷ ರೂ.ಇನಾಮು ಘೋಷಿಸಿದ ಎನ್.ಐ.ಎ.

ನಕ್ಸಲ್ ಪೀಡಿತ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕತ್ತಲಿನಲ್ಲಿದ್ದ ದುಷ್ಕರ್ಮಿಗಳು 6 ಪೆಟ್ರೋಲ್ ಬಾಂಬ್‌ಗಳನ್ನು ಚೆಕ್‌ಪೋಸ್ಟ್‌ನತ್ತ ಎಸೆದಿದ್ದಾರೆ. ಒಂದು ಬಾಂಬ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಕೆಲವು ಕಾಗದ ಪತ್ರಗಳು ಬೆಂಕಿಗೆ ಆಹುತಿಯಾಗಿವೆ.

ಛತ್ತೀಸ್ ಗಢದಲ್ಲಿ ಮತ್ತೊಮ್ಮೆ ನಕ್ಸಲರಿಂದ ಬಾಂಬ್ ಸ್ಫೋಟಛತ್ತೀಸ್ ಗಢದಲ್ಲಿ ಮತ್ತೊಮ್ಮೆ ನಕ್ಸಲರಿಂದ ಬಾಂಬ್ ಸ್ಫೋಟ

Forest department check post damaged in petrol bomb attack

ಬಾಟಲಿ ಎಸೆದ ಶಬ್ದ ಕೇಳಿ ಸಿಬ್ಬಂದಿ ಚೆಕ್‌ಪೋಸ್ಟ್‌ನಿಂದ ಹೊರ ಬಂದಿದ್ದಾರೆ. ಆದರೆ, ಬಾಂಬ್ ಎಸೆದವರು ಯಾರು? ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಎನ್‌ಎಫ್ ಭೇಟಿ : ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ ಸ್ಥಳಕ್ಕೆ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ಭೇಟಿದರು. ನಕ್ಸಲರು ಕೃತ್ಯವನ್ನು ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಈ ಕುರಿತು ಎಎನ್‌ಎಫ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

English summary
Forest department check post in Kudremukh National Park, Chikkamagaluru damaged after petrol bomb attack by miscreants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X