ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಕ್ಸಲ್ ನೆಲೆಯ ಮೊದಲ ಸುಳಿವು ನೀಡಿದ್ದ ಚೀರಮ್ಮ ನಿಧನ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜೂನ್ 19: ಮಲೆನಾಡು ಭಾಗದಲ್ಲಿ ನಕ್ಸಲ್ ನೆಲೆಯ ಕುರಿತು ಮೊದಲ ಸುಳಿವು ನೀಡಿದ್ದ ಚೀರಮ್ಮ ಕೊಪ್ಪ ತಾಲ್ಲೂಕಿನ ಮೆಣಸಿನ ಹಾಡ್ಯದಲ್ಲಿ ಸೋಮವಾರ ನಿಧನರಾಗಿದ್ದಾರೆ. ಚೀರಮ್ಮನಿಗೆ ನೂರು ವರ್ಷ ವಯಸ್ಸಾಗಿತ್ತು.

ಜಾರ್ಖಂಡ್‌ನಲ್ಲಿ ಸುಧಾರಿತ ಬಾಂಬ್ ಸ್ಫೋಟ 11 ಮಂದಿಗೆ ಗಾಯಜಾರ್ಖಂಡ್‌ನಲ್ಲಿ ಸುಧಾರಿತ ಬಾಂಬ್ ಸ್ಫೋಟ 11 ಮಂದಿಗೆ ಗಾಯ

ಮಲೆನಾಡಿನಲ್ಲಿ ನಕ್ಸಲ್ ಬೇರು ಬಿಡುತ್ತಿರುವುದು ಗೊತ್ತಾಗಿದ್ದೇ ಈಕೆಯಿಂದ. 2002ರ ಫೆಬ್ರುವರಿ 10ರಂದು ಚೀರಮ್ಮ ಸೌದೆ ತರಲು ಹೋಗಿದ್ದ ವೇಳೆ ತರಬೇತಿ ಪಡೆಯುತ್ತಿದ್ದ ನಕ್ಸಲರು ಹಾರಿಸಿದ ಗುಂಡು ಆಕಸ್ಮಿಕವಾಗಿ ಈಕೆಯ ಕಾಲಿಗೆ ತಗುಲಿತ್ತು. ಕೂಳೆ ಚುಚ್ಚಿದೆ ಎಂದು ಚೀರಮ್ಮ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಚಿಕಿತ್ಸೆ ನೀಡಿದ ನಂತರ ಇದು ಗುಂಡೇಟು ಎಂದು ಖಾತ್ರಿ ಮಾಡಿದ್ದರು. ಈ ಮೂಲಕ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆಯ ಸುಳಿವು ಪೊಲೀಸರಿಗೆ ದೊರಕಿತ್ತು. ಮೊದಲ ನಕ್ಸಲ್ ಪ್ರಕರಣ ಜಯಪುರ ಠಾಣೆಯಲ್ಲಿ ದಾಖಲಾಗಿತ್ತು.

first witness to naxalism in malenadu cheeramma is no more

ಚೀರಮ್ಮ ಅವರಿಗೆ ಮೂವರು ಪುತ್ರಿಯರು, ಮೂವರು ಪುತ್ರರು ಇದ್ದಾರೆ. ಮಂಗಳವಾರ ಅಂತ್ಯಕ್ರಿಯೆ ನೆರವೇರಿದೆ.

English summary
The first witness of naxal activities in Malenadu cheeramma is no more. She died on monday. In 2002, naxal trainers shot cheeramma leg accidentaly, she was admitted to hospital and at that time police got the clue of naxal activities in koppa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X