• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿಕ್ಕಮಗಳೂರಿನಲ್ಲಿ ಖೋಟಾ ನೋಟು: 5 ಲಕ್ಷ ರೂ. ಮೌಲ್ಯದ ನಕಲಿ ನೋಟು ವಶ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಅಕ್ಟೋಬರ್ 13: ಅಕ್ರಮವಾಗಿ 500 ರೂ. ಮುಖಬೆಲೆಯ ರೂ. 5 ಲಕ್ಷದ 5 ಸಾವಿರ ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಕಾರಿನಲ್ಲಿ ಸಾಗಿಸುತ್ತಿದ್ದಾಗ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಖೋಟಾ ನೋಟು ವಶಪಡಿಸಿಕೊಂಡು, ಇಬ್ಬರನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್, ಉಜಿರೆಯಿಂದ ಚಿಕ್ಕಮಗಳೂರಿಗೆ ಬರುವ ಮಾರ್ಗ ಮೂಡಿಗೆರೆ ಹಾಂದಿ ಹೋಬಳಿ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು, 5 ಲಕ್ಷದ 5 ಸಾವಿರ ರೂ. ಖೋಟಾ ನೋಟು ವಶಕ್ಕೆ ಪಡೆದಿದ್ದಾರೆ. ಇಬ್ಬರು ಸ್ಥಳದಿಂದ ಪರಾರಿಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಿದ್ದಾರೆ.

ರಿಯಾಜ್, ನಜೀರ್, ದುಬೇದ್, ಸಂತೋಷ್ ಬಂಧಿತ ಆರೋಪಿಗಳಾಗಿದ್ದು, ರಿಯಾಜ್ ಮತ್ತು ಜುಬೇದ್ ಪೊಲೀಸರಿಂದ ತಪ್ಪಿಸಿಕೊಂಡಿದ್ದಾರೆ. ಅವರ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಂ ಅಕ್ಷಯ್ ತಿಳಿಸಿದ್ದಾರೆ.

ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯಿಂದ ಚಿಕ್ಕಮಗಳೂರು ಮಾರ್ಗವಾಗಿ ಮೂಡಿಗೆರೆ ಹಾಂದಿ ಸಮೀಪ ಬರುತ್ತಿದ್ದ ಸಿಫ್ಟ್ ಕಾರು ಮತ್ತು ಆಲ್ಟೋ ಕಾರು ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸಿಫ್ಟ್ ಕಾರಿನಲ್ಲಿ ಬರುತ್ತಿದ್ದ ಜುಬೇದ್ ಮತ್ತು ರಿಯಾಜ್ ಕಾರು ನಿಲ್ಲಿಸಿ ಸ್ಥಳದಿಂದ ಪರಾರಿಯಾಗಿದ್ದು, ಆಲ್ಟೋ ಕಾರಿನಲ್ಲಿ ನಜೀರ್ ಮತ್ತು ಸಂತೋಷ ಆರೋಪಿಗಳನ್ನು ಬಂಧಿಸಲಾಗಿದೆ. 489 ಎ, ಬಿ, ಸಿ ಪ್ರಕರಣ ದಾಖಲಿಸಲಾಗಿದೆ. ತಪ್ಪಿಸಿಕೊಂಡ ಆರೋಪಿಗಳ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದರು.

ಈ ನೋಟುಗಳನ್ನು ಎ4 ಹಾಳೆಯಲ್ಲಿ ಕಲರ್ ಝೆರಾಕ್ಸ್ ತೆಗೆದಿರಬಹುದೆಂದು ಮೇಲ್‍ನೋಟಕ್ಕೆ ಕಂಡು ಬರುತ್ತಿದೆ. ಸುರತ್ಕಲ್ ನಜೀರ್ ಮನೆಯಲ್ಲಿ ತಪಾಸಣೆ ನಡೆಸಿದಾಗ 50 ಸಾವಿರ ರೂ. ಇದೇ ರೀತಿ ಯ ನೋಟುಗಳು ಪತ್ತೆಯಾಗಿವೆ. ಈ ನೋಟುಗಳನ್ನು ಜುಬೇದ್ ಸಂಗ್ರಹಿಸುತ್ತಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದ್ದು, ಅತನಿಗೆ ಎಲ್ಲೀಂದ ಬರುತ್ತಿತ್ತು ಎಂಬುದು ಜುಬೇರ್ ಬಂಧನದ ನಂತರ ತಿಳಿಯಬೇಕಿದೆ ಎಂದು ಮಾಹಿತಿ ನೀಡಿದರು.

   Muniratna ಅವರಿಗೆ Ticket ಸಿಗುವ ಮುನ್ನವೇ Supreme Court ಕ್ಲೀನ್ ಚಿಟ್ | Oneindia Kannada

   ಅದೇ ರೀತಿ ಮೂಡಿಗೆರೆ ಪ್ರಮೋದ್ ಎಂಬುವವರ ಪೇಪರ್ ಗೋಡೋನ್ ನಲ್ಲಿ ಖೋಟಾ ನೋಟು ಪತ್ತೆಯಾಗಿದ್ದು, ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ 350 ಝರಾಕ್ಸ್ ಶೀಟ್ ಸಿಕ್ಕಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

   English summary
   Chikkamagaluru police have succeeded in seizing the forged note and arresting the two, who were allegedly carrying out counterfeit notes.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X