ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೃಂಗೇರಿ ಸಾಹಿತ್ಯ ಜಾತ್ರೆಯಲ್ಲಿ ಕನ್ನಡದ ಬಗ್ಗೆ ಸಮ್ಮೇಳನಾಧ್ಯಕ್ಷರ ಭಾವುಕ ನುಡಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 10: ಶೃಂಗೇರಿಯಲ್ಲಿ ಗೊಂದಲದ ನಡುವೆಯೇ ಚಿಕ್ಕಮಗಳೂರು ಜಿಲ್ಲಾ ನುಡಿಹಬ್ಬ ಆರಂಭವಾಗಿದೆ. ಬಿಜಿಎಸ್ ಸಮುದಾಯ ಭವನದ ಆವರಣದಲ್ಲಿ ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾದ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಸಾಹಿತಿ ಕುಂ. ವೀರಭದ್ರಪ್ಪ ಅವರು ಉದ್ಘಾಟಿಸಿದರು. ಸಮ್ಮೇಳನ ಪ್ರಾರಂಭವಾದ ನಂತರವೂ ವಿರೋಧ ವ್ಯಕ್ತವಾಯಿತು.

ಈ ನಡುವೆ ಸಮ್ಮೇಳನವನ್ನು ಉದ್ದೇಶಿಸಿ ಜಿಲ್ಲಾ ಸಮ್ಮೇಳನಾಧ್ಯಕ್ಷರಾದ ಕಲ್ಕುಳಿ ವಿಠಲ ಹೆಗ್ಡೆ ಅವರು ಭಾವುಕ ನುಡಿಗಳನ್ನು ಆಡಿದ್ದಾರೆ.

ನೂರೆಂಟು ವಿಘ್ನಗಳ ನಡುವೆಯೇ ಆರಂಭವಾಯ್ತು ಶೃಂಗೇರಿ ಸಾಹಿತ್ಯ ಸಮ್ಮೇಳನನೂರೆಂಟು ವಿಘ್ನಗಳ ನಡುವೆಯೇ ಆರಂಭವಾಯ್ತು ಶೃಂಗೇರಿ ಸಾಹಿತ್ಯ ಸಮ್ಮೇಳನ

ಸಮ್ಮೇಳನದಲ್ಲಿ ಮಾತನಾಡಿದ ಅವರು, "ಇಂದು ಜಾತಿವಾದಿಗಳು ಗೆದ್ದಿಲ್ಲ, ಕೋಮುವಾದಿಗಳು ಗೆದ್ದಿಲ್ಲ, ಕನ್ನಡ ಗೆದ್ದಿದೆ. ನಾವು ಆಹ್ವಾನಿಸಿದ ಜನರು ಬಂದಿಲ್ಲ. ಆದರೆ ಕನ್ನಡದ ಅಭಿಮಾನಿಗಳು ಬಂದಿದ್ದಾರೆ. ಇದೊಂದು ಸವಾಲಿನ ಸಮ್ಮೇಳನ. ಯಶಸ್ವಿಯಾಗಿದೆ. ಇದೇ ಕನ್ನಡದ ಶಕ್ತಿ" ಎಂದು ಭಾವುಕವಾಗಿ ಮಾತನಾಡಿದರು.

Emotional Speech Of Kalkuli Vittala Hegde In Sringeri literature Fest

"ಕನ್ನಡಿಗರಾಗಿ ಕೆಲವರು ಪ್ರತಿಭಟಿಸಿದ್ದು ಅಕ್ಷಮ್ಯ ಅಪರಾಧ. ಇದು ಯಾವ ವ್ಯಕ್ತಿಯ ಹಬ್ಬವೂ ಅಲ್ಲ. ಕನ್ನಡದ ಹಬ್ಬ, ಸಾಹಿತ್ಯದ ಹಬ್ಬ. ಕೆಲವರು ಕಿರುಕುಳ ನೀಡುವಂತೆ ಪ್ರತಿಭಟನೆ ನಡೆಸಿದ್ದಾರೆ. ಆದರೆ ಪ್ರತಿಭಟನೆ ನಡೆಸಿದವರಿಗೆ ಅದೇ ತಿರುಗುಬಾಣವಾಗಲಿದೆ" ಎಂದು ಹೇಳಿದರು.

ಶೃಂಗೇರಿ ಸಾಹಿತ್ಯ ಸಮ್ಮೇಳನ; ಇದು ಅಫ್ಘಾನಿಸ್ತಾನದ ತಾಲಿಬಾನ್ ಧೋರಣೆ ಎಂದ ಸಾಹಿತಿ ಕುಂ ವೀರಭದ್ರಪ್ಪಶೃಂಗೇರಿ ಸಾಹಿತ್ಯ ಸಮ್ಮೇಳನ; ಇದು ಅಫ್ಘಾನಿಸ್ತಾನದ ತಾಲಿಬಾನ್ ಧೋರಣೆ ಎಂದ ಸಾಹಿತಿ ಕುಂ ವೀರಭದ್ರಪ್ಪ

"ಸಮ್ಮೇಳನದಲ್ಲಿ ವಿನಾಕಾರಣ ಗೊಂದಲ ಸೃಷ್ಟಿ ಮಾಡಬೇಡಿ" ಎಂದು ಬೇಸರ ವ್ಯಕ್ತಪಡಿಸಿದರು.

English summary
Amidst the confusions, district literature festival has started in sringeri. In the meantime, Kalkuli Vittala Hegde addressed the conference with emotional words
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X