ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುತ್ತೋಡಿಯಲ್ಲಿ ಸಫಾರಿಗೆ ಹೋದವರಿಗೆ ಹಿಂಡುಹಿಂಡಾಗಿ ಎದುರಾದ ಗಜಪಡೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 20: ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯದಲ್ಲಿ ಸಫಾರಿಗೆ ಹೋದ ಪ್ರವಾಸಿಗರಿಗೆ ಗಜಪಡೆಯ ಇಡೀ ಕುಟುಂಬವೇ ದರ್ಶನ ಕೊಟ್ಟಿವೆ.

ಒಲ್ಲದ ಮನಸ್ಸಿನಿಂದ ಹೊರಟ ಆನೆಗಳು; ಅರಮನೆ ಮುಂದೊಂದು ಭಾವನಾತ್ಮಕ ಕ್ಷಣಒಲ್ಲದ ಮನಸ್ಸಿನಿಂದ ಹೊರಟ ಆನೆಗಳು; ಅರಮನೆ ಮುಂದೊಂದು ಭಾವನಾತ್ಮಕ ಕ್ಷಣ

ಗಜಪಡೆಯ ಈ ಫ್ಯಾಮಿಲಿಯನ್ನು ಕಂಡು ಪ್ರವಾಸಿಗರೂ ಖುಷಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ ಪ್ರವಾಸಿಗರನ್ನು ಸಫಾರಿಗೆ ಕರೆದುಕೊಂಡು ಹೋದ ಟ್ಯಾಕ್ಸಿ ಚಾಲಕರ ಮೊಬೈಲ್ ನಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದೆ. ಸಫಾರಿಗೆ ಹೋದವರಿಗೆ ನಾಲ್ಕೈದು ಆನೆಗಳು ಸಾಕಷ್ಟು ಬಾರಿ ಕಂಡಿದ್ದವು. ಅವುಗಳನ್ನು ನೋಡಿಯೇ ಅವರು ಖುಷಿಪಟ್ಟಿದ್ದರು.

Oneindia Kannada on Twitter

ಮುತ್ತೋಡಿಯಲ್ಲಿ ಸಫಾರಿಗೆ ಹೋದವರಿಗೆ ಹಿಂಡುಹಿಂಡಾಗಿ ಎದುರಾದ ಗಜಪಡೆ #Chikmagalur https://t.co/RiWBlKPhNW

Elephants Family Appeared In Mutthodi Safari Today

ಆದರೆ, ನಿನ್ನೆ ಚಿಕ್ಕ ಮರಿ ಆನೆಯಿಂದ ಹಿಡಿದು ದೊಡ್ಡ ಆನೆಗಳೆಲ್ಲವೂ ಒಟ್ಟಿಗೆ ರಸ್ತೆ ದಾಟುತ್ತಿರುವುದನ್ನು ಕಂಡು ಪ್ರವಾಸಿಗರು ಮತ್ತಷ್ಟು ಹಿರಿಹಿರಿ ಹಿಗ್ಗಿದ್ದಾರೆ. ಎಷ್ಟೋ ಸಂದರ್ಭ, ಸಫಾರಿಗೆ ಹೋದವರಿಗೆ ನೋಡಲು ಯಾವ ಪ್ರಾಣಿಯೂ ಸಿಗುವುದಿಲ್ಲ. ಕಾಡಿನಲ್ಲಿ ಸುಮ್ಮನೆ ತಿರುಗಿ ಬರುತ್ತಾರೆ. ಆದರೆ, ನಿನ್ನೆ ಒಂದೇ ಜಾಗದಲ್ಲಿ ಇಷ್ಟೊಂದು ಆನೆಗಳು ಒಟ್ಟಿಗೇ ಕಂಡಿವೆ.

English summary
The entire family of elephant has appeared in safari in the Mutthodi forest in Chikkamagaluru. Tourists are happy to see this elephants,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X