ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೀಳುತ್ತಿದ್ದ ಮನೆಯಿಂದ ಓಡಿಬಂದು ಜೀವ ಉಳಿಸಿಕೊಂಡರು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 14: ಮಹಾಮಳೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜನರ ಬದುಕನ್ನೇ ನಾಶ ಮಾಡಿದೆ. ಮಳೆಗೆ ಹತ್ತಾರು ಹಳ್ಳಿಗಳಲ್ಲಿ ಭೂಮಿ, ತೋಟಗಳು ಕೊಚ್ಚಿಕೊಂಡು ಹೋಗಿವೆ. ಎಲ್ಲೆಲ್ಲೂ ಮನೆ ಕುಸಿದು ಸಾವು ನೋವುಗಳೂ ಸಂಭವಿಸುತ್ತಿವೆ.

ಮೂಡಿಗೆರೆ ತಾಲ್ಲೂಕಿನ ಹಿರೇಬೈಲು ಗ್ರಾಮದಲ್ಲಿಯೂ ಮನೆಯೊಂದು ಬೀಳುತ್ತಿದ್ದ ಸಮಯ, ಮನೆಯಲ್ಲಿದ್ದ ವೃದ್ಧ ದಂಪತಿ ಮನೆಯಿಂದ ಹೊರಗೆ ಬಂದು ಪವಾಡದ ರೀತಿ ಬದುಕಿದ್ದಾರೆ.

 ಮಲಗಿದ್ದಾಗ ಗೋಡೆ ಕುಸಿದು ತಾಯಿ, ಒಂದು ವರ್ಷದ ಮಗು ಸಾವು ಮಲಗಿದ್ದಾಗ ಗೋಡೆ ಕುಸಿದು ತಾಯಿ, ಒಂದು ವರ್ಷದ ಮಗು ಸಾವು

ಹಿರೇಬೈಲು ಗ್ರಾಮದ ವೃದ್ಧ ದಂಪತಿ ಡಿನ್ನಿ ಫ್ರಾನ್ಸಿಸ್ ಮತ್ತು ಮೇರಿ ಫ್ರಾನ್ಸಿಸ್ ಮನೆ ಬೀಳುವಂತಿತ್ತು. ಈ ಸೂಚನೆ ದೊರೆಯುತ್ತಿದ್ದಂತೆ ದಂಪತಿ ಹೊರಗೆ ಹೋಗಲು ಮುಂದಾಗಿದ್ದಾರೆ. ಆದರೆ ಡಿನ್ನಿ ಫ್ರಾನ್ಸಿಸ್ ಅನ್ಯಾರೋಗಕ್ಕೆ ತುತ್ತಾಗಿದ್ದು, ನಡೆಯಲೂ ಆಗುತ್ತಿರಲಿಲ್ಲ. ಆಗ ಪತ್ನಿ ಮೇರಿ ಫ್ರಾನ್ಸಿಸ್ ಸಾಹಸ ಮಾಡಿ, ಸ್ಥಳೀಯ ಯುವಕರ ಸಹಾಯದಿಂದ ಡಿನ್ನಿ ಫ್ರಾನ್ಸಿಸ್ ಅವರನ್ನು ಮನೆಯಿಂದ ಹೊರಗೆ ಕರೆತಂದಿದ್ದಾರೆ. ನೋಡನೋಡುತ್ತಿದ್ದಂತೆ ಕಣ್ಣೆದುರೇ ಮನೆ ನೆಲಸಮವಾಗಿದೆ.

Elder Couple Escaped From Home Collapse In Mudigere

ಮನೆ ಇತ್ತು ಎನ್ನುವುದಕ್ಕೆ ಯಾವುದೇ ಗುರುತೂ ಉಳಿಯದಂತೆ ಕೊಚ್ಚಿ ಹೋಗಿದೆ. ಆದರೆ ವೃದ್ಧ ದಂಪತಿಯ ಜೀವ ಉಳಿದಿದ್ದು ನಿಟ್ಟುಸಿರುಬಿಡುವಂತಾಗಿದೆ. ಈಗ ಹಿರೇಬೈಲು ಗ್ರಾಮದ ಲೈನ್ಸ್ ಪರ್ನ್ಡೀಸ್ ಮನೆಯಲ್ಲಿ ಈ ದಂಪತಿ ಆಶ್ರಯ ಪಡೆದಿದ್ದಾರೆ.

English summary
The elder couple escaped from the house which was collapsing and survived miracle. It happened in a village of Hirebailu in Mudigere Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X