ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆ ಹೊರಟ ಶ್ವಾನ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ನವೆಂಬರ್ 17: ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಶ್ವಾನ ಪಾದಯಾತ್ರೆ ಹೊರಟಿದೆ.

ಅಯ್ಯಪ್ಪ ಸ್ವಾಮಿಯನ್ನು ನೋಡಲು ಕೇವಲ ಮನುಷ್ಯರು ಮಾತ್ರವಲ್ಲ ಪ್ರಾಣಿಗಳೂ ಕೂಡ ಹೋಗುತ್ತಿವೆ. ಹೌದು ಮಾಲಾಧಾರಿಗಳ ಜೊತೆಗೆ ತಿರುಪತಿಯಿಂದ ಶಬರಿಮಲೆಗೆ ಶ್ವಾನ ಕೂಡ ಹೊರಟು ಅಚ್ಚರಿ ಮೂಡಿಸಿದೆ.

ಬಾಗಿಲು ತೆರೆದ ಶಬರಿಮಲೆ: ಅಯ್ಯಪ್ಪನ ದರ್ಶನ ಪಡೆಯಲು ಹೊರಟ ತೃಪ್ತಿ ದೇಸಾಯಿಬಾಗಿಲು ತೆರೆದ ಶಬರಿಮಲೆ: ಅಯ್ಯಪ್ಪನ ದರ್ಶನ ಪಡೆಯಲು ಹೊರಟ ತೃಪ್ತಿ ದೇಸಾಯಿ

ಮಾಲಾಧಾರಿಗಳೊಂದಿಗೆ ಪಾದಯಾತ್ರೆ ಹೊರಟ ಶ್ವಾನ ಈಗಾಗಲೇ ನೂರಾರು ಕಿ.ಮೀ ಕ್ರಮಿಸಿದೆ. ತಿರುಪತಿಯಿಂದ ಅಯ್ಯಪ್ಪ ಮಾಲಾಧಾರಿಗಳೊಂದಿಗೆ ನಾಯಿ ಆಗಮಿಸಿದೆ. ಅಕ್ಟೋಬರ್ 31ರಿಂದ ಶ್ವಾನ ಮಾಲಾಧಾರಿಗಳ ಜೊತೆಯಲ್ಲಿ ಪಾದಯಾತ್ರೆಯಲ್ಲಿದೆ.

Dogs Padayatra To Sabarimala

16 ದಿನಗಳ ಕಾಲ ಅಯ್ಯಪ್ಪ ಮಾಲಾಧಾರಿಗಳ ಜೊತೆ ಇದೆ. ಶ್ವಾನದ ಕಾಲಿಗೆ ಎರಡು ಬಾರಿ ಚಿಕಿತ್ಸೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತೋಡಾರು ಗ್ರಾಮದ ಆರು ಮಂದಿ ಮಾಲಾಧಾರಿಗಳ ತಂಡ ತಿರುಪತಿಯಿಂದ ಶಬರಿಮಲೆಗೆ ಪಾದಯಾತ್ರೆ ಹೊರಟಿತ್ತು.

ಶಬರಮಲೆ ದೇಗುಲ ಶನಿವಾರದಿಂದ ತೆರೆದಿರುವ ಹಿನ್ನೆಲೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ.

ಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿ ಕುರಿತು ಸುಪ್ರೀಂಕೋರ್ಟ್​ ನ.14ರಂದು ತನ್ನ ತೀರ್ಮಾನ ಪ್ರಕಟಿಸಿತ್ತು. ಈ ಪ್ರಕರಣವನ್ನು ಏಳು ಸದಸ್ಯರ ಪೀಠಕ್ಕೆ ವರ್ಗಾವಣೆ ಮಾಡಿ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿತ್ತು.

Dogs Padayatra To Sabarimala

ದೇಗುಲವನ್ನು 5 ವರ್ಷದಿಂದ 50 ವರ್ಷ ವಯಸ್ಸಿನವರೆಗಿನ ಮಹಿಳೆಯರು ಪ್ರವೇಶಿಸಬಾರದು ಎಂಬ ನಿಯಮವನ್ನು ಸುಪ್ರೀಂಕೋರ್ಟ್​ 2018ರ ಸೆಪ್ಟೆಂಬರ್ 28ರಂದು ರದ್ದುಪಡಿಸಿತ್ತು.

ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಮತ್ತು ನ್ಯಾ.ರೋಹಿಂಟನ್ ನಾರಿಮನ್, ನ್ಯಾ.ಎ.ಎಂ.ಖಾನ್ ವಿಲ್ಕರ್, ನ್ಯಾ.ಡಿ.ವೈ.ಚಂದ್ರಚೂಡರ್ ಮತ್ತು ನ್ಯಾ.ಇಂದು ಮಲ್ಹೋತ್ರಾ ಅವರಿದ್ದ ನ್ಯಾಯಪೀಠ ಬಹುಮತದ ತೀರ್ಪು ನೀಡಿತ್ತು.

English summary
When a dog walked along with a Sabarimala devotee, Dog Walked More than 600 km.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X