ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭೀತಿ: ಬಂದ್ ಆಯ್ತು ಮೂಡಿಗೆರೆ ದೇವರಮನೆ ಗುಡ್ಡ

|
Google Oneindia Kannada News

ಚಿಕ್ಕಮಗಳೂರು, ಜುಲೈ 4: ಒಂದು ಕಡೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ, ಮತ್ತೊಂದು ಕಡೆ ಜನರ ನಿರ್ಲಕ್ಷಾ ಕೂಡ ಮುಂದುವರೆದಿದೆ. ಹೀಗಾಗಿ, ಮೂಡಿಗೆರೆ ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ಆಗಮನಕ್ಕೆ ನಿರ್ಬಂಧ ಹೇರಲಾಗಿದೆ.

Recommended Video

DK Shivakumar should have been more responsible says AAP | Congress | Oneindia Kannada

ಕೊರೊನಾದಿಂದ ಶಾಲೆ ಕಾಲೇಜುಗಳು ಪ್ರಾರಂಭವಾಗಿಲ್ಲ. ಅನೇಕ ಆಫೀಸ್‌ಗಳಿಗೆ ರಜೆ ನೀಡಲಾಗಿದೆ. ಆದರೆ, ಸೋಂಕು ಹರಡುತ್ತಿರುವ ಸಮಯದಲ್ಲಿ ಜನರು ಮನೆಯಲ್ಲಿ ಇರದೇ ಪ್ರವಾಸಕ್ಕೆ ಬರುತ್ತಿದ್ದಾರೆ. ಇದರಿಂದ ಮೂಡಿಗೆರೆ ದೇವರಮನೆ ಗುಡ್ಡದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಕಡಿವಾಣ ಹಾಕಲು ಕಾರಣವಾಗಿದೆ.

ಕೊಡಗಿನ ರೆಸಾರ್ಟ್ ಗಳತ್ತ ಬರುವ ಪ್ರವಾಸಿಗರಿಗೆ ಎಚ್ಚರಿಕೆ!ಕೊಡಗಿನ ರೆಸಾರ್ಟ್ ಗಳತ್ತ ಬರುವ ಪ್ರವಾಸಿಗರಿಗೆ ಎಚ್ಚರಿಕೆ!

ಬೇರೆ ಬೇರೆ ಜಿಲ್ಲೆಗಳಿಂದ ಜನರು ಬರುತ್ತಿದ್ದು, ಸೊಂಕು ಹರಡುವ ಸಾಧ್ಯತೆ ಹೆಚ್ಚಿದೆ. ಪ್ರವಾಸಕ್ಕೆ ಬರುವ ಅನೇಕರು ಕೊರೊನಾ ಸುರಕ್ಷತ ಕ್ರಮಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಮಾಸ್ಕ್‌ ಧರಿಸದೇ, ಸಾಮಾಜಿಕ ಅಂತರ ಕಾಪಾಡದೆ ಓಡಾಡುತ್ತಿದ್ದಾರೆ.

District Administration Restricted Tourists To Visit Devara Mane Hill

ಮೋಜು ಮಸ್ತಿಗಾಗಿ ಬರುವ ಜನರು ಎಲ್ಲ ಬೇಕೆಂದರಲ್ಲಿ ಕಾರು ನಿಲ್ಲಿಸಿಕೊಂಡು ನೃತ್ಯ ಮಾಡುವುದು. ಬಾಟಲಿ, ಪ್ಲಾಸ್ಟಿಕ್‌ ಎಸೆಯುವುದು, ಸ್ವಚ್ಚತೆ ಕಾಪಾಡದೆ ಇರುವುದು ಕಂಡು ಬಂದಿದೆ. ಸ್ಥಳೀಯರ ರಕ್ಷಣೆಯ ದೃಷ್ಠಿಯಿಂದ ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ.

English summary
District administration restricted tourists to visit Devara Mane hill Chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X