ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು; ಗ್ರಹಣದ ಟೈಮಲ್ಲಿ ಏನಿದು ಒನಕೆ ಪವಾಡ?

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ಚಿಕ್ಕಮಗಳೂರಿನಲ್ಲಿ ಗ್ರಹಣದ ಟೈಮಲ್ಲಿ ಒನಕೆ ಪವಾಡ | SOLAR ECLIPSE | INDIA | CHIKMAGALURU | ONEINDA KANNADA

ಚಿಕ್ಕಮಗಳೂರು, ಡಿಸೆಂಬರ್ 26: ಅಪರೂಪದ ನಭೋಮಂಡಲದ ವೈಶಿಷ್ಟವನ್ನು ನೋಡಲು ಇಂದು ಜಗತ್ತೇ ಕಾತುರದಿಂದ ಕಾದು ಕುಳಿತಿತ್ತು. ಆದರೆ ಮಲೆನಾಡಿಗರು ಈ ಗ್ರಾಮದಲ್ಲಿ ಗ್ರಹಣದ ಪ್ರಾರಂಭ ಹಾಗೂ ಅಂತ್ಯದ ಲೆಕ್ಕಾಚಾರವನ್ನು ಒನಕೆ ಮೂಲಕ ನೋಡುತ್ತಿದ್ದಾರೆ. ಚಿಕ್ಕಮಗಳೂರಿನ ದೊಡ್ಡಮಾಗರಹಳ್ಳಿ ಗ್ರಾಮದಲ್ಲಿ ಒನಕೆಯನ್ನು ಇಟ್ಟು ಗ್ರಹಣದ ಲೆಕ್ಕಾಚಾರವನ್ನು ತಿಳಿಯುವುದು ದಶಕಗಳಿಂದಲೂ ನಡೆದುಕೊಂಡ ಪದ್ಧತಿಯಾಗಿದೆ.

ನಾಳೆ ಅಪರೂಪದ ಕಂಕಣ ಸೂರ್ಯಗ್ರಹಣ; ನೋಡಬೇಕೋ? ಬೇಡವೋ?ನಾಳೆ ಅಪರೂಪದ ಕಂಕಣ ಸೂರ್ಯಗ್ರಹಣ; ನೋಡಬೇಕೋ? ಬೇಡವೋ?

ಏನಿದು ಒನಕೆ ಪವಾಡ?
ಗ್ರಹಣ ಪ್ರಾರಂಭವಾದ ಸರಿಯಾದ ಕಾಲಕ್ಕೆ ಮನೆಯ ಬಾಗಿಲಿನ ಮುಂದಿನ‌ ತುಳಸಿಕಟ್ಟೆಯ ಮುಂಭಾಗ ನೆಲವನ್ನು ಸಾರಿಸಿ ರಂಗೋಲಿ ಬಿಟ್ಟು ತಟ್ಟೆಯಲ್ಲಿ ಸಗಣಿ ನೀರನ್ನು ಹಾಕಿ ವಿಶೇಷವಾಗಿ ಪೂಜೆ ಮಾಡಿ ಒನಕೆಯನ್ನು ಅದರಲ್ಲಿ ಇಡಲಾಗುತ್ತದೆ.‌ ಈ ವೇಳೆ ಸರಿಯಾಗಿ ಗ್ರಹಣ ಪ್ರಾರಂಭವಾದ ಕಾಲಕ್ಕೆ ತಟ್ಟೆಯಲ್ಲಿ ಅಲುಗಾಡದೇ ನಿಂತುಕೊಳ್ಳುವ ಒನಕೆ ಗ್ರಹಣ ಮುಕ್ತಾಯವಾದ ಕೂಡಲೇ ತಟ್ಟೆಯಿಂದ ತಾನಾಗಿಯೇ ಬೀಳುತ್ತದೆ. ಒನಕೆ‌ ಬಿದ್ದ ಕೂಡಲೇ ಗ್ರಹಣ ಮುಕ್ತಾಯವಾಗುತ್ತದೆ ಎಂಬುದು ಮಲೆನಾಡಿಗರ ನಂಬಿಕೆ. ಇಂದಿಗೂ ಈ ಆಚರಣೆ ಮುಂದುವರೆದುಕೊಂಡು ಬಂದಿದೆ.

Different Tradition In Chikkamagaluru In The Time Of Solar eclipse

ಚಿಕ್ಕಮಗಳೂರು, ಆಲ್ದೂರು ಭಾಗದ ಮಲೆನಾಡಿಗರು ದಶಕಗಳಿಂದಲೂ ಗ್ರಹಣದ ಲೆಕ್ಕಾಚಾರವನ್ನು ಒನಕೆಯ ಮೂಲಕವೇ ತಿಳಿದುಕೊಳ್ಳುತ್ತಿದ್ದಾರೆ. ಪ್ರತಿ ಬಾರಿಯೂ ಚಂದ್ರಗ್ರಹಣ, ಸೂರ್ಯಗ್ರಹಣಗಳ ಸಂದರ್ಭದಲ್ಲಿ ಗ್ರಹಣ ಕಾಲ ತಿಳಿಯಲು ಒನಕೆ ಪವಾಡ ಮಾಡಲಾಗುತ್ತಿದೆ. ಈ ವಿಶಿಷ್ಟ ಆಚರಣೆ ನೋಡಲು ಸುತ್ತಮುತ್ತಲ ಗ್ರಾಮಸ್ಥರು ದೊಡ್ಡಮಾಗರಹಳ್ಳಿಗೆ ಬರುತ್ತಾರೆ.

English summary
Whole world today is anxiously waiting to see a solar eclipse. But in chikkamagaluru people are looking at the beginning and end of the eclipse in this village through Onake,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X