• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ ಮಾಫಿಯಾ; ಹೋಂ ಸ್ಟೇಗಳಿಗೆ ಪ್ರವೀಣ್ ಸೂದ್ ವಾರ್ನಿಂಗ್

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಸೆಪ್ಟೆಂಬರ್ 14: ರಾಜ್ಯದಲ್ಲಿ ಡ್ರಗ್ ಮಾಫಿಯಾ ಹೆಚ್ಚು ಸುದ್ದಿಯಾಗಿದ್ದು, ಎಲ್ಲೆಲ್ಲೂ ಡ್ರಗ್ ಜಾಲದ ಬಗ್ಗೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಈ ಕುರಿತು ತೀವ್ರ ನಿಗಾ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಎಚ್ಚರಿಕೆ ನೀಡಿದ್ದಾರೆ.

ಕಾಫಿನಾಡು ಚಿಕ್ಕಮಗಳೂರು ಪ್ರವಾಸಿ ತಾಣವಾಗಿದ್ದು, ಪ್ರತಿನಿತ್ಯ ಜಿಲ್ಲೆಗೆ ನೂರಾರು ಜನ ಬಂದು ಹೋಗುತ್ತಿರುತ್ತಾರೆ. ಹೀಗಾಗಿ ಜನರು ಉಳಿದುಕೊಳ್ಳುವ ಹೋಂ ಸ್ಟೇ, ರೆಸಾರ್ಟ್ ಗಳ ಮಾಲೀಕರು ಎಚ್ಚರಿಕೆಯಿಂದಿರುವಂತೆ ಸೂಚಿಸಿದ್ದಾರೆ.

ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಕೇವಲ ಬೆಂಗಳೂರಿಗೆ ಸೀಮಿತವಲ್ಲ: ಡಿಜಿಪಿ

ಹೋಂ ಸ್ಟೇಗಳಲ್ಲಿ ಮಾದಕ ದ್ರವ್ಯದ ಪ್ರಕರಣ ಕಂಡುಬಂದರೆ ಆ ರೆಸಾರ್ಟ್ ಅಥವಾ ಹೋಂ ಸ್ಟೇ ಮಾಲೀಕರೇ ಹೊಣೆಯಾಗುತ್ತಾರೆ ಎಂದು ವಾರ್ನ್ ಮಾಡಿದ್ದಾರೆ. ಇಲ್ಲವೇ ಅದರ ಮಾಹಿತಿಯನ್ನು ಕೊಟ್ಟರೆ ಅವರಿಗೆ ಬಹುಮಾನ ನೀಡುತ್ತೇವೆ, ಒಂದು ವೇಳೆ ಪ್ರಕರಣ ಮುಚ್ಚಿ ಹಾಕಿದರೆ ಹೋಂ ಸ್ಟೇ ಮಾಲಿಕರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ ಪ್ರವೀಣ್ ಸೂದ್.

   ಪ್ರಧಾನಿ ಕಚೇರಿಗೆ ಹೊಸ ಸೇರ್ಪಡೆ Amrapali IAS | Oneindia Kannada

   ಡ್ರಗ್ ನಿಯಂತ್ರಣ ಮಾಡುವ ಕೆಲಸ ಪ್ರತಿಯೊಂದು ಠಾಣೆಯದ್ದಾಗಿದೆ. ಯಾವುದೇ ಸರಹದ್ದಿನಲ್ಲೂ ಮಾದಕ ದ್ರವ್ಯದ ಹಾವಳಿ ಇರಬಾರದು ಎಂದು ಹೇಳಿದ್ದಾರೆ. ಇದೇ ಸಂದರ್ಭ ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾ ಪೊಲೀಸರ ಕಾರ್ಯವನ್ನೂ ಶ್ಲಾಘಿಸಿದರು. ಅವರಿಗೆಲ್ಲ ಅಭಿನಂದನೆ ಹೇಳಲು ಚಿಕ್ಕಮಗಳೂರಿಗೆ ಬಂದಿದ್ದೇನೆ ಎಂದರು.

   English summary
   DGP Praveen Sood has warned homestay owners in Chikkamagaluru district to be vigilant about drug issues
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X