ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಪಿಎಸ್‌ಐ ಜಾಮೀನು ಅರ್ಜಿ ವಜಾ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್ 8: ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ದಲಿತ ಯುವಕನಿಗೆ ಠಾಣಾಧಿಕಾರಿ ಮೂತ್ರ ಕುಡಿಸಿದ ಪ್ರಕರಣ ಸಂಬಂಧ, ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಪಿಎಸ್‌ಐ ಅರ್ಜುನ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಚಿಕ್ಕಮಗಳೂರು 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಗೋಣಿಬೀಡು ಠಾಣೆಯ ಪಿಎಸ್‌ಐ ಆಗಿದ್ದ ಅರ್ಜುನ್ ಎಂಬುವರು ಅದೇ ಠಾಣಾ ವ್ಯಾಪ್ತಿಯ ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ಎಂಬುವರನ್ನು ಪೊಲೀಸ್ ಠಾಣೆಗೆ ವಿಚಾರಣೆ ನೆಪದಲ್ಲಿ ಕರೆಸಿಕೊಂಡು ಮೂತ್ರ ಕುಡಿಸಿದ ಪ್ರಕರಣದಲ್ಲಿ ಹುದ್ದೆಯಿಂದ ಅಮಾನತುಗೊಂಡಿದ್ದ ಆರೋಪಿ ಪಿಎಸ್‌ಐ ಅರ್ಜುನ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ತಲೆಮರೆಸಿಕೊಂಡಿದ್ದರು.

ಮೂತ್ರ ಕುಡಿಸಿದ ಕೇಸ್; ಪಿಎಸ್‌ಐಗೆ 14 ದಿನ ನ್ಯಾಯಾಂಗ ಬಂಧನಮೂತ್ರ ಕುಡಿಸಿದ ಕೇಸ್; ಪಿಎಸ್‌ಐಗೆ 14 ದಿನ ನ್ಯಾಯಾಂಗ ಬಂಧನ

ಕರ್ನಾಟಕ ಹೈಕೋರ್ಟ್‌ಲ್ಲಿ ಜಾಮೀನು ವಜಾ ಆಗುತ್ತಿದ್ದಂತೆ ತನಿಖೆ ನಡೆಸುತ್ತಿದ್ದ ಸಿಐಡಿ ಪೊಲೀಸರ ತಂಡ ಆರೋಪಿ ಅಅರ್ಜುನ್‌ರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದರು. ಬಳಿಕ ಸಿಐಡಿ ಪೊಲೀಸರು ಆರೋಪಿಯನ್ನು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

 Chikkamagaluru: Dalit Youth Drink Urine Case: Court Dismisses PSI Arjun Bail Applcation

ಈ ವೇಳೆ ಆರೋಪಿಯ ವಿಚಾರಣೆಗಾಗಿ ಅರ್ಜುನ್‌ರನ್ನು ತಮ್ಮ ವಶಕ್ಕೆ ನೀಡಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಒಂದು ದಿನದ ಮಟ್ಟಿಗೆ ಆರೋಪಿಯನ್ನು ಸಿಐಡಿ ಪೊಲೀಸರ ವಶಕ್ಕೆ ನೀಡಿದ್ದರು.

1 ದಿನದ ವಿಚಾರಣೆ ಬಳಿಕ ಸಿಐಡಿಯವರು ಆರೋಪಿಯನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಮಧ್ಯೆ ಆರೋಪಿ ಅರ್ಜುನ್ ಮಧ್ಯಂತರ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಶುಕ್ರವಾರ ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಅರ್ಜಿಯ ತೀರ್ಪನ್ನು ಮಂಗಳವಾರ ಕಾಯ್ದಿರಿಸಿತ್ತು.

ಮಂಗಳವಾರ ಆರೋಪಿ ಅರ್ಜುನ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ ತೀರ್ಪು ನೀಡಿದೆ. ಜಾಮೀನು ಅರ್ಜಿ ವಿಚಾರಣೆ ವೇಳೆ ಸಂತ್ರಸ್ತ ದಲಿತ ಯುವಕ ಪುನೀತ್ ಪರವಾಗಿ ಸರಕಾರಿ ಅಭಿಯೋಜಕಿ ಭಾವನಾ ಹಾಗೂ ಖಾಸಗಿ ವಕೀಲ ಪರಮೇಶ್ವರ್ ವಾದ ಮಂಡಿಸಿದ್ದರು.

 Chikkamagaluru: Dalit Youth Drink Urine Case: Court Dismisses PSI Arjun Bail Applcation

ದೂರು ಇಲ್ಲದೇ ವಿಚಾರಣೆ
ಮೂಡಿಗೆರೆ ತಾಲೂಕಿನ ಕಿರಗುಂದದಲ್ಲಿ ಮಹಿಳೆಯ ಮನೆಯಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಯುವಕ ಕೆ. ಎಲ್. ಪುನೀತ್‌ ಮೇಲೆ ಗೋಣಿಬೀಡು ಠಾಣೆಯಲ್ಲಿ ದೌರ್ಜನ್ಯ ಎಸಗಲಾಗಿತ್ತು.

ಆದರೆ ಮಹಿಳೆ ದೂರು ನೀಡದಿದ್ದರೂ ಪುನೀತ್‌ರನ್ನು ಠಾಣೆಗೆ ಕರೆತಂದಿದ್ದ ಪಿಎಸ್‌ಐ ಅರ್ಜುನ್ ದೌರ್ಜನ್ಯ ನಡೆಸಿದ್ದರು. ಠಾಣೆಯಲ್ಲಿ ತಲೆಕೆಳಗಾಗಿ ನೇತು ಹಾಕಿ ಪುನೀತ್ ಮೇಲೆ ಹಲ್ಲೆ ಮಾಡಲಾಗಿತ್ತು. ನೀರು ಕೇಳಿದಾಗ ಮೂತ್ರ ಕುಡಿಸಲು ಪ್ರಯತ್ನ ನಡೆಸಲಾಗಿತ್ತು. ನೆಲದಲ್ಲಿ ಬಿದ್ದಿದ್ದ ಮೂತ್ರ ನೆಕ್ಕುವಂತೆ ಒತ್ತಾಯಿಸಲಾಗಿತ್ತು.

Recommended Video

ಹಬ್ಬ ಹೇಗೆ ಮಾಡಬೇಕು ಅಂತ ತಿಳಿ ಹೇಳಿದ ಬಿಬಿಎಂಪಿ ಕಮಿಷನರ್!! | Oneindia Kannada

ಈ ಕುರಿತು ಪುನೀತ್ ಪೊಲೀಸರಿಗೆ ದೂರು ನೀಡಿದ್ದರು. ಘಟನೆ ಬೆಳಕಿಗೆ ಬಂದ ಬಳಿಕ ಚಿಕ್ಕಮಗಳೂರು ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಗೋಣಿಬೀಡು ಠಾಣೆಗೆ ಭೇಟಿ ನೀಡಿದ್ದರು. ಯುವಕ ಪುನೀತ್ ಭೇಟಿಯಾಗಿ ಆರೋಪದ ಬಗ್ಗೆ ಮಾತುಕತೆ ನಡೆಸಿದ್ದರು. ಅರ್ಜುನ್ ವಿರುದ್ಧ ದೂರು ಸಹ ದಾಖಲಾಗಿತ್ತು.

English summary
Dalit Youth Drink Urine Case: The interim bail application filed by the accused PSI Arjun has been dismissed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X