ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪಚುನಾವಣೆ ಅಭ್ಯರ್ಥಿ ಘೋಷಣೆ ಬಗ್ಗೆ ಕಾಂಗ್ರೆಸ್ ಗೆ ಕುಟುಕಿದ ಸಿ.ಟಿ.ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ನವೆಂಬರ್ 1: "ಅಭ್ಯರ್ಥಿಯೇ ಎಲ್ಲವನ್ನೂ ಮಾಡಿಕೊಳ್ಳಬೇಕಾದ ಸ್ಥಿತಿ ಕಾಂಗ್ರೆಸ್‍ನಲ್ಲಿದೆ. ಅದಕ್ಕೆ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ" ಎಂದು ಸಚಿವ ಸಿ.ಟಿ.ರವಿ ಕಾಂಗ್ರೆಸ್ ಗೆ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ಉಪ ಚುನಾವಣೆಗೆ ಅಭ್ಯರ್ಥಿಗಳ‌ ಘೋಷಣೆ ಮಾಡಿರುವ ಬಗ್ಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಅಮಾಯಕರನ್ನು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿಯಾದರೂ ಕೊಡಿ: ಸಿದ್ದರಾಮಯ್ಯ Vs ಸಿಟಿ ರವಿಅಮಾಯಕರನ್ನು ಕೊಂದವರಿಗೆ ರಾಜ್ಯೋತ್ಸವ ಪ್ರಶಸ್ತಿಯಾದರೂ ಕೊಡಿ: ಸಿದ್ದರಾಮಯ್ಯ Vs ಸಿಟಿ ರವಿ

ಚಿಕ್ಕಮಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, "ಚುನಾವಣೆ ಘೋಷಣೆಯೇ ಆಗಿಲ್ಲ. ಅದಿನ್ನು ಸುಪ್ರಿಂ ಕೋರ್ಟ್ ಅಂಗಳದಲ್ಲಿದೆ. ನಾಮಪತ್ರ ಸಲ್ಲಿಕೆಗೂ ಮುಂಚೆ ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ನಮ್ಮದು ಅಭ್ಯರ್ಥಿಗಳ ಮೇಲೆ ಚುನಾವಣೆ ನಡೆಸೋ ಪಕ್ಷವಲ್ಲ. ಸಂಘಟನೆ ಮೇಲೆ ಚುನಾವಣೆ ನಡೆಯುತ್ತದೆ. ಅಭ್ಯರ್ಥಿ ಅದಕ್ಕೆ ಸಹಾಯಕವಾಗ್ತಾನಷ್ಟೆ. ಒಳ್ಳೆ ಅಭ್ಯರ್ಥಿ ಹಾಕೋದು ಪೂರಕ ಅಂಶ. ಅಭ್ಯರ್ಥಿಯೇ ಎಲ್ಲಾ ಮಾಡಿಕೊಳ್ಳಬೇಕಾದ ಸ್ಥಿತಿ ಕಾಂಗ್ರೆಸ್‍ನಲ್ಲಿದೆ" ಎಂದು ಕಾಂಗ್ರೆಸ್ ಗೆ ಕುಟುಕಿದ್ದಾರೆ.

CT Ravi Speaks on Congress Over By Election Members Announcement

"ನಮ್ಮಲ್ಲಿ ಅಭ್ಯರ್ಥಿಯೇ ಎಲ್ಲವನ್ನೂ ಮಾಡಿಕೊಳ್ಳಬೇಕಾದ ಸ್ಥಿತಿ ಇಲ್ಲ. ಪಕ್ಷ ಬಹುತೇಕ ಎಲ್ಲಾ ಮಾಡುತ್ತೆ. ಸಂಘಟನೆಯಾಗಿ ಚುನಾವಣೆ ತಯಾರಿ ಕೆಲಸ ಮಾಡಿದ್ದೇವೆ" ಎಂದಿದ್ದಾರೆ. ಇದೇ ವೇಳೆ, ಕನ್ನಡ ರಾಜ್ಯೋತ್ಸವದಂದು ಕನ್ನಡ ಧ್ವಜಾರೋಹಣದ ಕುರಿತೂ ಮಾತನಾಡಿ, "ಹಿಂದೆಯೂ ಕನ್ನಡ ಧ್ವಜವನ್ನು ಹಾರಿಸಿರಲಿಲ್ಲ. ಹಾಗಾಗಿ, ಈ ವರ್ಷವೂ ಹಾರಿಸಿಲ್ಲ. ಸರ್ಕಾರ ನಾಡಧ್ವಜ ಹಾರಿಸುವುದು ಬೇಡವೆಂದು ಆದೇಶಿಸಿರುವುದು ನನಗೆ ಗೊತ್ತಿಲ್ಲ" ಎಂದು ಹೇಳಿದ್ದಾರೆ.

ಸಚಿವ ಸಿ. ಟಿ. ರವಿಗೆ ಕನ್ನಡ ಪಾಠ ಮಾಡಿದ ಸಿದ್ದರಾಮಯ್ಯ ಸಚಿವ ಸಿ. ಟಿ. ರವಿಗೆ ಕನ್ನಡ ಪಾಠ ಮಾಡಿದ ಸಿದ್ದರಾಮಯ್ಯ

ಇದೇ ಸಂದರ್ಭದಲ್ಲಿ, ಪ್ರವಾಸೋದ್ಯಮ ನೀತಿ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ಜನವರಿ ಅಂತ್ಯದಲ್ಲಿ ಯಾವುದೇ ಅನವಶ್ಯಕ ಘಟನೆ ನಡೆಯದಿದ್ದರೆ ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ತರುತ್ತೇವೆ" ಎಂದು ಉತ್ತರಿಸಿದ್ದಾರೆ. ಈ ಉತ್ತರ, ಸರ್ಕಾರದ ಅಳಿವು-ಉಳಿವಿನ ಬಗೆಗಿನ ಅವರ ನಂಬಿಕೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

English summary
"The Congress is in a position where the candidate has to do everything. so it has released the list of candidates early" said Minister CT Ravi in chikkamagaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X