ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿ ಸೋಲು ಮುಂದಿನ ಚುನಾವಣಾ ದಿಕ್ಸೂಚಿ ಅಲ್ಲ ಎಂದ ಸಿ.ಟಿ.ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ 11: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಭಾರತೀಯ ಜನತಾ ಪಕ್ಷಕ್ಕೆ ಭಾರೀ ಆಘಾತವಾದ ಹಿನ್ನೆಲೆಯಲ್ಲಿ ಸಚಿವ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಟಿ.ರವಿ, ಚುನಾವಣೆಯಲ್ಲಿ ಗೆಲುವು ಸೋಲುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಸೋತ ತಕ್ಷಣ ಮೋದಿ ವಿರೋಧಿ ಮತ, ಗೆದ್ದ ತಕ್ಷಣ ಮುಂಬರುವ ಚುನಾವಣೆಯ ದಿಕ್ಸೂಚಿ ಎನ್ನುವ ಮನಸ್ಥಿತಿ ಬೇಡ ಎಂದು ಹೇಳಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಉತ್ಸವಕ್ಕೆ ಕಾಂಗ್ರೆಸ್, ಜೆಡಿಎಸ್ ವಿರೋಧಚಿಕ್ಕಮಗಳೂರು ಜಿಲ್ಲಾ ಉತ್ಸವಕ್ಕೆ ಕಾಂಗ್ರೆಸ್, ಜೆಡಿಎಸ್ ವಿರೋಧ

ಕಾಂಗ್ರೆಸ್‌ ಪಕ್ಷದ ಪರಿಸ್ಥಿತಿ ಹೇಗಿದೆ ಎಂದರೆ, ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟಿರುವುದನ್ನೇ ಸಂಭ್ರಮ ಪಡುವಂತಾಗಿದ್ದು, ಅದರ ಸಾಧನೆ ಶೂನ್ಯ ಎಂದು ಟೀಕಿಸಿದರು.

CT Ravi Says Delhi Election Result Is Not Decisive To Next Election

ಸ್ವಾತಂತ್ರ್ಯಾ ನಂತರ ಬಹು ವರ್ಷಗಳ ಕಾಲ ದೆಹಲಿಯನ್ನು ಆಳಿದ ಕಾಂಗ್ರೆಸ್ ಪಕ್ಷದ್ದು ಶ್ಯೂನ ಸಂಪಾದನೆ, ಒಂದು ಸ್ಥಾನವನ್ನು ಗೆಲ್ಲದ ಕಾಂಗ್ರೆಸ್ ಅನ್ನು ಜನ ಯಾವ ರೀತಿ ನೋಡಿದ್ದಾರೆ ಎಂಬುದು ಈ ಮೂಲಕ ವ್ಯಕ್ತವಾಗಿದೆ ಎಂದರು.

ಸಿ.ಟಿ.ರವಿ, ಸಿ.ಎಂ.ಇಬ್ರಾಹಿಂ ಅವರೇ ದೇವದಾಸಿಯರ ವಿಚಾರ ನಿಮಗ್ಯಾಕೆ? ಶೇಮ್ ಸಿ.ಟಿ.ರವಿ, ಸಿ.ಎಂ.ಇಬ್ರಾಹಿಂ ಅವರೇ ದೇವದಾಸಿಯರ ವಿಚಾರ ನಿಮಗ್ಯಾಕೆ? ಶೇಮ್

ಸದ್ಯದ ಫಲಿತಾಂಶ ಪ್ರಕಾರ ಆಮ್ ಆದ್ಮಿ ಪಕ್ಷ ಅಧಿಕಾರ ಹಿಡಿಯುವ ಮುನ್ಸೂಚನೆ ಇದೆ. ಬಿಜೆಪಿ ಸಿಂಗಲ್ ಡಿಸಿಟ್ ನಿಂದ ಡಬಲ್ ಡಿಸಿಟ್ ಗೆ ಬಂದಿದೆ. ಇದು ಪ್ರಧಾನಿ ನರೇಂದ್ರ ಮೋದಿ ವಿರುದ್ದದ ಜನಾದೇಶ ಅಲ್ಲ ಎಂದು ತಿಳಿಸಿದರು.

ಎಲ್ಲಾ ಕಡೆ ನಮ್ಮ ಮ್ಯಾಜಿಕ್ ವರ್ಕ್ ಆಗುವುದಿಲ್ಲ, ಕೆಲವೊಮ್ಮ ಸ್ಥಳೀಯ ಅಂಶಗಳು ಪ್ರಮುಖ ಆಗುತ್ತವೆ ಎಂದು ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ ರವಿ ಹೇಳಿದ್ದಾರೆ.

English summary
"we have to Recieve victory and Depeat in a same manner reacted Minister CT Ravi On Delhi elections."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X