ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾನೂನೇ ಸುಪ್ರೀಂ; ಡಿಕೆಶಿಗೆ ಕಾನೂನು ಪಾಠ ಹೇಳಿದ ಸಿ.ಟಿ.ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 31: "ಕಾನೂನು ಎಲ್ಲರಿಗಿಂತ ಸುಪ್ರೀಂ. ಕಾನೂನಿಗೆ ಪ್ರತಿಯೊಬ್ಬರೂ ತಲೆಬಾಗಲೇಬೇಕು. ತಪ್ಪು ಮಾಡಿದ್ದರೆ ಕಾನೂನಿನ ಕ್ರಮ ಎದುರಿಸಲೇಬೇಕು. ತಪ್ಪಾಗಿಲ್ಲದಿದ್ರೆ ಯಾವುದೇ ಸಮಸ್ಯೆ ಆಗಲ್ಲ" ಎಂದು ಡಿ.ಕೆ.ಶಿವಕುಮಾರ್ ಗೆ ಕಾನೂನು ಪಾಠ ಹೇಳಿದ್ದಾರೆ ಸಚಿವ ಸಿ.ಟಿ.ರವಿ.

ಅಮಿತ್ ಶಾ ಡಿಕೆಶಿ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ; ಲಿಂಗಪ್ಪಅಮಿತ್ ಶಾ ಡಿಕೆಶಿ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ; ಲಿಂಗಪ್ಪ

ಡಿ.ಕೆ ಶಿವಕುಮಾರ್ ಗೆ ಇಡಿ ವಿಚಾರಣೆ ಹಿನ್ನೆಲೆಯಲ್ಲಿ, ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಸಿ.ಟಿ.ರವಿ, "ಜನಾರ್ದನ ರೆಡ್ಡಿ ಬಂಧಿಸಿದಾಗ ನಾವು ಅವರನ್ನು ಸಮರ್ಥನೆ ಮಾಡಿಕೊಂಡಿರಲಿಲ್ಲ. ಅವರು ಬಿಜೆಪಿಯವರು ಹೌದು. ಹಾಗೆಂದು ತಪ್ಪನ್ನು ಸಮರ್ಥನೆ ಮಾಡಿಕೊಳ್ಳಲಿಲ್ಲ. ಅವರನ್ನು ಬಂಧಿಸಲಾಗಿತ್ತು. ಜೈಲುವಾಸವನ್ನೂ ಅನುಭವಿಸಿದರು. ಡಿ.ಕೆ.ಶಿವಕುಮಾರ್ ತಪ್ಪೇ ಮಾಡಿಲ್ಲ ಅಂದ್ರೆ ಹೆದರುವ ಅವಶ್ಯಕತೆಯೇ ಇಲ್ಲ" ಎಂದಿದ್ದಾರೆ.

CT Ravi Reacts To The DK Shivakumar Ed Investigation

"ಬಿಜೆಪಿ ಯಾವುದನ್ನೂ ರಾಜಕೀಯ ದೃಷ್ಟಿಯಿಂದ ನೋಡುವುದಿಲ್ಲ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹೀಗೆ ಪ್ರತಿ ಪಕ್ಷಕ್ಕೂ ಒಂದೊಂದು ಕಾನೂನು ಅಂತ ಇಲ್ಲ. ಕಾನೂನಿನ ಮುಂದೆ ಎಲ್ಲರೂ ಒಂದೇ" ಎಂದು ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ.

English summary
"Law is supreme. Everyone has to bow down to law. If someone did mistake, he has to face legal action. If not, no need to worry" said minister ct ravi regarding dk shivakumar ed investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X