ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ನಲ್ಲಿ ಭವಿಷ್ಯವಿಲ್ಲ ಎಂದು ರಾಜೀನಾಮೆ; ಸಿ.ಟಿ. ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ಆನಂದ್ ಸಿಂಗ್ ರಾಜೀನಾಮೆ ಬಗ್ಗೆ ಜಿ.ಟಿ.ದೇವೇಗೌಡ ಹೀಗೆ ಹೇಳಿದ್ದೇಕೆ? | Oneindia Kannada

ಚಿಕ್ಕಮಗಳೂರು, ಜುಲೈ 1: ಈಗ ಕಾಂಗ್ರೆಸ್ ಹತಾಶೆಯಲ್ಲಿದೆ. ಕಾಂಗ್ರೆಸ್ ನಲ್ಲಿ ರಾಜಕೀಯ ಭವಿಷ್ಯ ಇಲ್ಲ ಅನಿಸಿ ಆನಂದ್ ಸಿಂಗ್ ಈ ತೀರ್ಮಾನ ತೆಗೆದುಕೊಂಡಿರಬಹುದು ಎಂದು ಚಿಕ್ಕಮಗಳೂರಿನಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ನಾಯಕರೇ ಯಾವುದೇ ಭವಿಷ್ಯ ಇಲ್ಲದೇ ಹತಾಶೆಯಲ್ಲಿದ್ದಾರೆ. ಹಾಗಾಗಿ ಬೇರೆ ನಾಯಕರಿಗೂ ಇಲ್ಲಿದ್ದರೆ ಉದ್ಧಾರ ಆಗಲ್ಲ ಎಂದು ಅನಿಸಿರಬಹುದು. ಹಾಗಾಗಿ ರಾಜೀನಾಮೆ ಕೊಡುತ್ತಿರಬಹುದು ಎಂದಿದ್ದಾರೆ.

ರಾಜೀನಾಮೆ ನಿರ್ಧಾರಕ್ಕೆ ಸ್ಪಷ್ಟ ಕಾರಣ ನೀಡಿದ ಆನಂದ್ ಸಿಂಗ್ರಾಜೀನಾಮೆ ನಿರ್ಧಾರಕ್ಕೆ ಸ್ಪಷ್ಟ ಕಾರಣ ನೀಡಿದ ಆನಂದ್ ಸಿಂಗ್

ಸರ್ಕಾರ ಜಿಂದಾಲ್ ಗೆ ಭೂಮಿ ಪರಭಾರೆ ಮಾಡಿರುವುದನ್ನು ಆನಂದ್ ಸಿಂಗ್ ವಿರೋಧಿಸಿದ್ದರು. ಈ ಕುರಿತು ಅಸಮಾಧಾನಗೊಂಡಿದ್ದರು. ಈ ವಿಷಯ ಅವರ ರಾಜೀನಾಮೆಗೆ ಕಾರಣವಿರಬಹುದು ಅಥವಾ ಇನ್ನಿತರ ರಾಜಕೀಯ ಕಾರಣವೂ ಇರಬಹುದು. ನನಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದರು.

ct ravi reacts on the resignation of ananda singh

ಬಿಜೆಪಿ, ಸಮ್ಮಿಶ್ರ ಸರ್ಕಾರ ಬೀಳಿಸುವ ಹಗಲುಗನಸು ಕಾಣ್ತಾ ಇದೆ ಎಂದು ಹೇಳಿದ್ದಾರೆ. ನಾವು ಹಗಲು ಕನಸು ಕಾಣೋ ಜನ ಅಲ್ಲ. ಕನಸನ್ನು ನನಸು ಮಾಡುವ ಜನ. ಸಿಎಂ ಸಾಂದರ್ಭಿಕ ಶಿಶು, ಹಾಗಾಗಿ ಅವರಿಗೆ ಕನಸು ಬೀಳುವುದಿಲ್ಲ ಎಂದು ವ್ಯಂಗ್ಯವಾಡಿದರು.

 ಜಿಂದಾಲ್ ವಿವಾದ : ಕರ್ನಾಟಕ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆಗಳು ಜಿಂದಾಲ್ ವಿವಾದ : ಕರ್ನಾಟಕ ಸರ್ಕಾರಕ್ಕೆ ಸಿ.ಟಿ.ರವಿ ಪ್ರಶ್ನೆಗಳು

ಸರ್ಕಾರ ಬೀಳಿಸುವುದು ನಮ್ಮ‌ ಕೆಲಸ ಅಲ್ಲ, ಆದರೆ ಸರ್ಕಾರ ಉಳಿಸಿಕೊಳ್ಳುವುದು ಅವರ ಕೆಲಸವಾಗಿದೆ. ಸರ್ಕಾರ ಯಾವಾಗ ಬೀಳುತ್ತದೆ ಎಂದು ನಾವು ಕಾಯುತ್ತಾ ಇದ್ದೇವೆ ಅಷ್ಟೇ ಎಂದು ಟಾಂಗ್ ನೀಡಿದರು.

English summary
Karnataka BJP general secretary C.T.Ravi reacts to the resignation of ananda singh. There is no future in congress party, So ananda singh resigned he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X