ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮಗೆ ಯಾರೂ ಉದಾರತೆ ಪಾಠ ಹೇಳುವುದು ಬೇಡ; ಸಿ. ಟಿ. ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮಾರ್ಚ್ 23; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸುತ್ತಿರುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಈ ಕುರಿತು ಪ್ರತಿಕ್ರಿಯೆ ನೀಡಿದರು.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರುತ್ತದೆ. ಗಂಗೊಳ್ಳಿಯಲ್ಲಿ ಮೀನು ತೆಗೆದುಕೊಳ್ಳಬೇಡಿ ಅಂತ ಫರ್ಮಾನ್ ಹೊರಡಿಸಿದರು. ನಾವು ಹಿಂದೂಗಳು ಮಟನ್ ಸ್ಟಾಲ್ ಇಟ್ಟರೆ ಅಲ್ಲಿ ಮುಸ್ಲಿಂಮರು ಬಂದು ಮಟನ್ ತೆಗೆದುಕೊಳ್ತಾರಾ?" ಎಂದು ಸಿ. ಟಿ. ರವಿ ಕೇಳಿದರು.

 ಮುಸ್ಲಿಮರಿಗೆ ವ್ಯಾಪಾರ ನಿಷೇಧ ಸರಿಯಲ್ಲ, ಎಲ್ಲರೂ ಭಕ್ತರೇ; ಬಪ್ಪನಾಡು ಮಂಡಳಿ ಸ್ಪಷ್ಟನೆ ಮುಸ್ಲಿಮರಿಗೆ ವ್ಯಾಪಾರ ನಿಷೇಧ ಸರಿಯಲ್ಲ, ಎಲ್ಲರೂ ಭಕ್ತರೇ; ಬಪ್ಪನಾಡು ಮಂಡಳಿ ಸ್ಪಷ್ಟನೆ

"ನಮ್ಮ ದೇವರಿಗೆ ಆಗಲ್ಲ ಎನ್ನುವುದಿಲ್ಲವೇ?. ಅವರ ದೇವರಿಗೆ ಹಿಂದೂ ಮಟನ್ ಸ್ಟಾಲ್ ಇಟ್ಟರೆ ಆಗಲ್ಲ ಆದರೆ ಅವರ ದೇವರಿಗೆ ಒಪ್ಪಿಸಿದ್ದನ್ನು ನಮ್ಮ ದೇವರು ಒಪ್ಪಿಕೊಳ್ಳುತ್ತಾ?. ನಮಗೆ ಉದಾರತೆ ಪಾಠ ಯಾರು ಹೇಳುವುದುದ ಬೇಡ" ಎಂದರು.

ಕಾಪು ಮಾರಿಗುಡಿ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿ; ಮುಸ್ಲಿಂ ವ್ಯಾಪಾರಿಗಳ ಒತ್ತಾಯಕಾಪು ಮಾರಿಗುಡಿ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿ; ಮುಸ್ಲಿಂ ವ್ಯಾಪಾರಿಗಳ ಒತ್ತಾಯ

CT Ravi Reaction On The Issue Of Ban On Muslim Traders

"ಹಿಂದೂಗಳ ಭಜನೆಯಲ್ಲಿ ಈಶ್ವರ ಅಲ್ಲ ತೇರೆನಾಮ್ ಅಂತ ನಮ್ಮ ಎಲ್ಲ ದೇವಸ್ಥಾನದಲ್ಲಿಯೂ ಭಜನೆಯಲ್ಲಿ ಹೇಳುತ್ತೇವೆ. ಯಾವುದಾದರೂ ಒಂದು ಮಸೀದಿಯಲ್ಲಿ ಹೇಳಿರೋದು ಕೇಳಿದ್ದೀರಾ?. ಒಬ್ಬ ಮುಸ್ಲಿಂ ಧರ್ಮಗುರು ದೇವ ಒಬ್ಬ ನಾಮ ಹಲವು ಅಂತಾ ಹೇಳಿರೋದು ಕೇಳಿದ್ದೀರಾ?" ಎಂದು ಪ್ರಶ್ನಿಸಿದರು.

ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ: ಹಿಂದೂ ಧಾರ್ಮಿಕ ದತ್ತಿ ಕಾನೂನು ಏನು ಹೇಳುತ್ತದೆ?ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ: ಹಿಂದೂ ಧಾರ್ಮಿಕ ದತ್ತಿ ಕಾನೂನು ಏನು ಹೇಳುತ್ತದೆ?

"ಅವರು ಕೋಮುವಾದದ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಇಸ್ಲಾಂನಲ್ಲಿ ಜಾತ್ಯಾತೀತ ಪದಕ್ಕೆ ಅರ್ಥ ಇದೆಯಾ?. ಅರ್ಥ ಇದೆ ಎನ್ನುವುದಾದರೆ ಐದು ಸರಿ ನಮಾಝ್‌ನಲ್ಲಿ ಏನಂತ ಕೂಗುತ್ತಾರೆ?" ಎಂದು ಸಿ. ಟಿ. ರವಿ ಕೇಳಿದರು.

"ಅವರು ಹಿಂದೂಗಳ ಅಂಗಡಿಯಲ್ಲಿ ವ್ಯಾಪಾರ ಮಾಡಬಾರದು ಹಿಂದೂಗಳೆಲ್ಲರೂ ಅವರ ಅಂಗಡಿಯಲ್ಲಿ ವ್ಯಾಪಾರ ಮಾಡಬೇಕು. ನಮ್ಮ ಮೂಲ ನಂಬಿಕೆಯಲ್ಲಿ ದೇವನೊಬ್ಬ ನಾಮ ಹಲವು ಅನ್ನೋ ನಂಬಿಕೆ ಇದೆ. ಇಸ್ಲಾಂನಲ್ಲಿ ದೇವನೊಬ್ಬ‌ ನಾಮ ಹಲವು ಅಂತ ಇದ್ದಿದ್ದರೆ ಜಗಳನೇ ಇರುತ್ತಿರಲಿಲ್ಲ" ಎಂದರು.

"ಶೇ 90ರಷ್ಟು ಹಿಂದೂಗಳು ಶೇ 10ರಷ್ಟು ಮುಸ್ಲಿಂಮರು ಇರುವ ಕಡೆ ಮುಸ್ಲಿಂ ಸುರಕ್ಷಿತರಾಗಿದ್ದಾರೆ. ಶೇ 50ರಷ್ಟು ಹಿಂದೂಗಳು ಶೇ 50ರಷ್ಟು ಮುಸ್ಲಿಮರು ಇರುವ ಕಡೆ ಹಿಂದೂಗಳು ಸುರಕ್ಷಿತರಾಗಿದ್ದಾರಾ? ಎಂಬ ಸತ್ಯವನ್ನು ತಿಳಿಯದೆ ಕಾಂಗ್ರೆಸ್ ರಾಜಕಾರಣ ಮಾಡಬಹುದು. ನಾವು ಅಂತಹ ರಾಜಕಾರಣ ಮಾಡುವುದಿಲ್ಲ. ಅವರಿಗೆ ಪಾಕಿಸ್ತಾನ ಕೊಟ್ಟ ಮೇಲೆ ಕೂಡ ಇಲ್ಲಿ ಉಳಿಸಿಕೊಂಡಿದ್ದು ನಮ್ಮ ಔದಾರ್ಯ ತನ ಹೌದಲ್ವಾ?" ಎಂದು ಕೇಳಿದರು.

ವ್ಯಾಪಾರಿಗಳಿಗೆ ನಿಷೇಧ ಹೇರಿ; ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿ ಎಂಬ ಕೂಗು ಕೇಳಿ ಬಂದಿದೆ. ಶೃಂಗೇರಿ ತಾಲೂಕಿನ ಕಿಗ್ಗಾ ಜಾತ್ರೆಯಲ್ಲಿ ನಿಷೇಧಿಸುವಂತೆ ಮನವಿ ಮಾಡಲಾಗಿದೆ.

ಶ್ರೀ ಋಷ್ಯಶೃಂಗ ಸ್ವಾಮೀಯ ಜಾತ್ರಾ ಮಹೋತ್ಸವಕ್ಕೆ ಮುಸ್ಲಿಂಮರನ್ನು ನಿಷೇಧಿಸುವಂತೆ ಮರ್ಕಲ್ ಗ್ರಾಮ ಪಂಚಾಯಿತಿಗೆ ಸ್ಥಳೀಯರು ಮನವಿ ಮಾಡಿದ್ದಾರೆ. ಅನ್ಯ ಧರ್ಮೀಯರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಕೆ ಮಾಡಲಾಗಿದೆ.

Recommended Video

Dr Sudhakar ಆಯೋಜಿಸಿದ್ದ ಔಚಣಕ್ಕೆ BJPಯವರೇ ಇಲ್ವ | Oneindia Kannada

ಇನ್ನು ಶೃಂಗೇರಿ ತಾಲೂಕಿನ ಚಿತ್ರವಳ್ಳಿ ಜಾತ್ರೆ, ಅಡ್ಡಗದ್ದೆ ಗ್ರಾಮದ ವನ ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ಸಹ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸುವಂತೆ ಸ್ಥಳೀಯರಿಂದ ಮನವಿ ಸಲ್ಲಿಕೆಯಾಗಿದೆ.

English summary
Bharatiya Janata Party national general secretary C. T. Ravi reaction on ban on Muslim traders issue in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X