ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿಗೆ ಬೆದರಿಕೆ ಪತ್ರ; ಸಿ.ಟಿ.ರವಿ ಆಡಿದ "ಪಾಸಿಟಿವ್" ಮಾತು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 26: "ಜನರ ನಡುವೆ ಇರೋದಕ್ಕೆ ತುಂಬಾ ಪಾಸಿಟಿವ್ ಸಂಗತಿಗಳಿವೆ. ಅದನ್ನು ಇಟ್ಟುಕೊಂಡು ಜನರ ನಡುವೆ ಸಕ್ರಿಯವಾಗಿ ಇರಬಹುದು. ಈ ಮೂಲಕ ಸುದ್ದಿಯಲ್ಲಿ ಇರಬೇಕು ಅನಿಸಿದ್ರೆ ಅದು ಅವರ ಬಯಕೆ" ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಬಂದ ಬೆದರಿಕೆ ಪತ್ರದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ ಸಚಿವ ಸಿ.ಟಿ. ರವಿ.

"ಸಂಘ ಪರಿವಾರದ ಮೇಲೆ ಆರೋಪ ಮಾಡೋದು ಈಗೀಗ ಪ್ಯಾಷನ್ ಆಗಿದೆ. ಯಾರ ಮೂಲಕ ಬೆದರಿಕೆ ಬಂದಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಬೇಕು. ಮಾಜಿ ಮುಖ್ಯಮಂತ್ರಿ ಹಾಗೂ ಆಡಳಿತ ವ್ಯವಸ್ಥೆಯ ಮುಖ್ಯಸ್ಥರಾಗಿದ್ದವರು ಈ ರೀತಿ ಸುಳ್ಳು ಆರೋಪ ಮಾಡಬಾರದು" ಎಂದರು.

ಸಚಿವ ಸಿ. ಟಿ. ರವಿ ಟ್ವೀಟ್‌ನಲ್ಲಿ ಬೀಫ್; ಬಿಸಿ-ಬಿಸಿ ಚರ್ಚೆ!ಸಚಿವ ಸಿ. ಟಿ. ರವಿ ಟ್ವೀಟ್‌ನಲ್ಲಿ ಬೀಫ್; ಬಿಸಿ-ಬಿಸಿ ಚರ್ಚೆ!

ಮಂಗಳೂರು ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, "ಭಯೋತ್ಪಾದಕರು ಯಾರೇ ಇದ್ದರು ಅವರಿಗೆ ಶಿಕ್ಷೆ ಆಗಬೇಕು. ಭಯೋತ್ಪಾದಕರು ನಮ್ಮವರು ಎಂದು ಹೇಳಿಕೊಳ್ಳುವ ಹೀನ ಸಂಸ್ಕೃತಿಗೆ ಸೇರಿದವನು ನಾನಲ್ಲ. ಆರೋಪಿಯನ್ನು ಧರ್ಮ, ಜಾತಿಯ ಆಧಾರದಲ್ಲಿ ನಾವು ನೋಡಲ್ಲ. ಭಯೋತ್ಪಾದಕ ಭಯೋತ್ಪಾದಕನೇ. ಬೇರೆಯವರು ಧಾರ್ಮಿಕವಾಗಿ ಭಯೋತ್ಪಾದನೆಯನ್ನು ಹುಟ್ಟು ಹಾಕಿರಬಹುದು. ಭಯೋತ್ಪಾದನೆ ಮಾಡಿದವರು ನಮ್ಮವರು ಅಂತಾ ಹೇಳಿಕೊಳ್ಳಲು ಇದು ಪಾಕಿಸ್ತಾನ ಅಲ್ಲ" ಎಂದು ತಮ್ಮನ್ನು ಟೀಕಿಸಿದವರ ಮೇಲೆ ಹರಿಹಾಯ್ದರು.

Ct Ravi Reacted To Threatening Letter To HD Kumaraswamy

ಮಾಜಿ ಸಿಎಂ ರನ್ನು ಮಾಜಿ ಸಿಎಂ ರನ್ನು "ಯೂಟರ್ನ್ ಸ್ವಾಮಿ' ಎಂದ ಸಿ.ಟಿ.ರವಿ

ಮಂತ್ರಿ ಮಂಡಲದ ವಿಸ್ತರಣೆ ವಿಚಾರ ಮಾತನಾಡಿ, "ಅದು ಸಿಎಂ ಹಾಗೂ ನಮ್ಮ ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನಿಸಬೇಕಾದ ಸಂಗತಿ. ಮಂತ್ರಿ ಮಂಡಲದ ವಿಸ್ತರಣರ ವಿಳಂಬಕ್ಕೆ ಬೇರೆ ಬೇರೆ ಕಾರಣ ಇದೆ. ನಾನು ಆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ಆದರೆ ರಾಜ್ಯದ ಅಭಿವೃದ್ಧಿಯಲ್ಲಿ ನಾವು ಹಿಂದೆ ಬಿದ್ದಿಲ್ಲ. ಟೀಕೆ ಮಾಡುವವರು ಮಾತನಾಡಲು ಬಂದರೆ ಚರ್ಚೆಗೆ ಸಿದ್ಧ" ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಸವಾಲು ಎಸೆದರು.

English summary
"There is so much positive things to live among the people. But if they like to become news by this way, its their desire" said CT Ravi in chikkamagaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X