• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಖರ್ಗೆಗೆ ನ್ಯಾಯಾಲಯದ ತೀರ್ಪಿಗಿಂತ ಮತಬ್ಯಾಂಕ್ ಮುಖ್ಯ: ಸಿಟಿ ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮೇ.12: ಕಾಂಗ್ರೆಸ್ ಆಝಾನ್ ಪರವಾಗಿದೆ ಎಂದು ಹೇಳಿಕ ನೀಡಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ರಾಜ್ಯಸಭೆಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ತಿರುಗೇಟು ನೀಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ಮಾತುಗಳು ನ್ಯಾಯಾಲಯದ ತೀರ್ಪುಗಿಂತ ಮತಬ್ಯಾಂಕ್ ರಾಜಕಾರಣವೇ ಮುಖ್ಯ ಎನ್ನುವಂತಿದೆ. ಇದು ಮತೀಯವಾದದ ಓಲೈಕೆ ಅಲ್ಲದೆ ಮತ್ತೇನು..? ಕಾಂಗ್ರೆಸ್ ಮುಸಲ್ಮಾನರ ಪರವಾಗಿದ್ದಕ್ಕೆ ದೇಶ ವಿಭಜನೆಯಾಯ್ತು. ದೇಶದ ಪರವಾಗಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ. ಎಂದು ತಿರುಗೇಟು ನೀಡಿದರು.

ಅಂಬೇಡ್ಕರ್ ಸಂವಿಧಾನ ಮತೀಯವಾದದ ತಾರತಮ್ಯ ಮಾಡುವುದನ್ನು ಸಮರ್ಥಿಸಿಲ್ಲ ವಿರೋಧಿಸಿದೆ. ಅಂಬೇಡ್ಕರ್ ಹೆಸರಿನಲ್ಲಿ ರಾಜಕಾರಣ ಮಾಡುವ ಮಹಾನುಭಾವರು ಇವರು ನ್ಯಾಯಾಲಯ ಸಂವಿಧಾನದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.

 ct ravi react on Mallikarjuna karge statement

ಆಝಾನ್ ವಿಚಾರದಲ್ಲಿ ಕೋರ್ಟ್ ಆದೇಶ ಮಾಡಿದೆ ಆದರೆ ಕಾಂಗ್ರೆಸ್ ಪಕ್ಷದವರು ಸಂವಿದಾನ ವಿರೋಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇವರೆಲ್ಲರೂ ಅಂಬೇಡ್ಕರ್ ಹೆಸರಿನಲ್ಲಿ ರಾಜಕಾರಣ ಮಾಡುವವರು. ದೇವರ ಹೆಸರಿನಲ್ಲಿ ಭಜನೆ ಮಾಡುವ ಹಿಂದೂ ಧರ್ಮದ ಜನರು ಇವರ ಕಣ್ಣಿಗೆ ಭಯೋತ್ಪಾದಕರಂತೆ ಕಾಣುತ್ತಾರೆ. ಅವರದ್ದೇ ಪಕ್ಷದ ಶಾಸಕರ ಮನೆ ಬೆಂಕಿ ಇಟ್ಟವರು ಇವರ ಕಣ್ಣಿಗೆ ಸಹೋದರರ ತರ ಕಾಣ್ತಾರೆ. ದೇಶದ ಜನರು ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಮುಂದೆಯೂ ಕೊಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

English summary
ct ravi react congress leader mallikarjuna karge azan statement, Congress party has never been pro-Hindus, Kharge a politician in the name of Ambedkar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X