ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಗಿದದ್ದನ್ನು ಮತ್ತೆ ಬಾಯಿಗೆ ಹಾಕಿಕೊಂಡ ಸಿದ್ದರಾಮಯ್ಯ; ಸಿ. ಟಿ. ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್ 18: " ಸಿದ್ದರಾಮಯ್ಯ ತಮ್ಮ ಸೋಲಿಗೆ ಕಾರಣ ಹುಡುಕಿದ್ದಾರೆ. ಅವರ ಸರ್ಕಾರ ಅಧಿಕಾರ ಕಳೆದುಕೊಂಡಿದ್ದಕ್ಕೆ ಕಾರಣ ಹುಡುಕಬೇಕಿತ್ತು" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿದರು.

ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ನನ್ನ ಸೋಲಿಗೆ ನಮ್ಮವರೇ ಕಾರಣ" ಎಂದು ನೀಡಿರುವ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ. ಚಿಕ್ಕಮಗಳೂರಿನಲ್ಲಿ ಸಿ. ಟಿ. ರವಿ ಈ ಕುರಿತು ಪ್ರತಿಕ್ರಿಯೆ ನೀಡಿದರು. "ಎರಡೂವರೇ ವರ್ಷದ ಬಳಿಕ ಸಿದ್ದರಾಮಯ್ಯ ಸೋಲಿಗೆ ಕಾರಣ ಹುಡುಕುತ್ತಿದ್ದಾರೆ" ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಹೇಳಿಕೆಗೆ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ ಸಿದ್ದರಾಮಯ್ಯ ಹೇಳಿಕೆಗೆ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯೆ

"ಯಾರೂ ಉಗಿದದ್ದನ್ನ ಮತ್ತೆ ಬಾಯಿಗೆ ಹಾಕಿಕೊಳ್ಳುವುದಿಲ್ಲ. ಸೋಲಿನ ಕಾರಣ ಗೊತ್ತಿದ್ದರೂ ಮತ್ತೇಕೆ ಜೆಡಿಎಸ್ ಜೊತೆ ಸರ್ಕಾರ ಮಾಡಿದಿರಿ. ನಮಗೆ ಜನಾಭಿಪ್ರಾಯವಿಲ್ಲ, ವಿರೋಧ ಪಕ್ಷದಲ್ಲಿ ಕೂರುತ್ತೇವೆ ಎಂದು ಹೇಳಬೇಕಿತ್ತು. ರಾಜ ಮರ್ಯಾದೆಯ ರಾಜ ಗೌರವ ಹುಡುಕಬೇಕಿತ್ತು. ಯಾಕೆ ಜೆಡಿಎಸ್ ಜೊತೆ ಸರ್ಕಾರ ಮಾಡಿದರು?" ಎಂದು ಸಿ. ಟಿ. ರವಿ ಪ್ರಶ್ನೆ ಮಾಡಿದರು.

ಮುಂದಿನ ಚುನಾವಣೆಗೆ ಸ್ಪರ್ಧೆ; ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ! ಮುಂದಿನ ಚುನಾವಣೆಗೆ ಸ್ಪರ್ಧೆ; ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ!

"ತನ್ನನ್ನು ಸೋಲಿಸಿದವರ ಜೊತೆ ನೇರ ಸರ್ಕಾರ ಮಾಡುತ್ತಾರಾ?. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂದು ಒಟ್ಟಿಗೆ ಆಗಿದ್ದರು. ಯಾವ ಮುಖ ಇಟ್ಟುಕೊಂಡು ಒಪ್ಪಿಕೊಂಡರು ಸಿದ್ದರಾಮಯ್ಯ?. ಅವರದ್ದು ಯಾವ ನೈತಿಕ ರಾಜಕಾರಣ?" ಎಂದು ಸಿ. ಟಿ. ರವಿ ವಾಗ್ದಾಳಿ ನಡೆಸಿದರು.

ಮತ್ತೆ ಚಾಮುಂಡೇಶ್ವರಿ ಕ್ಷೇತ್ರದತ್ತ ಸಿದ್ದರಾಮಯ್ಯ ಒಲವು!ಮತ್ತೆ ಚಾಮುಂಡೇಶ್ವರಿ ಕ್ಷೇತ್ರದತ್ತ ಸಿದ್ದರಾಮಯ್ಯ ಒಲವು!

ಒಳ ಒಪ್ಪಂದ ಮಾಡಿಕೊಂಡಿಲ್ಲ

ಒಳ ಒಪ್ಪಂದ ಮಾಡಿಕೊಂಡಿಲ್ಲ

"ಸಿದ್ದರಾಮಯ್ಯನವರು ಅವರ ಸೋಲಿಗೆ ಕಾರಣ ಹುಡುಕಿದ್ದಾರೆ. ಅವರ ಸರ್ಕಾರ ಅಧಿಕಾರ ಕಳೆದುಕೊಂಡಿದ್ದಕ್ಕೆ ಕಾರಣ ಹುಡುಕಬೇಕಿತ್ತು. ದುರಹಂಕಾರ, ಭ್ರಷ್ಟಾಚಾರ, ಕೆಟ್ಟ ಆಡಳಿತದಿಂದಲೇ ಸೋತಿದ್ದಾರೆ. ನಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ" ಎಂದು ಸಿ. ಟಿ. ರವಿ ಸ್ಪಷ್ಟಪಡಿಸಿದರು.

ಬಾದಾಮಿಯಲ್ಲೂ ಸೋಲಬೇಕಿತ್ತು

ಬಾದಾಮಿಯಲ್ಲೂ ಸೋಲಬೇಕಿತ್ತು

"ಒಂದು ವೇಳೆ ಬಿಜೆಪಿ ಮತ್ತು ಜೆಡಿಎಸ್ ಬಾದಾಮಿಯಲ್ಲೂ ಒಳ ಒಪ್ಪಂದ ಮಾಡಿಕೊಂಡಿದ್ದರೆ ನೀವು ಅಲ್ಲಿಯೂ ಸೋಲ ಬೇಕಿತ್ತು. ನೀವು ಅಲ್ಲಿ ಗೆದ್ದಿದ್ದು ಕೇವಲ ಸಾವಿರ ಚಿಲ್ಲರೆ ವೋಟಿನಲ್ಲಿ. ಅದು ಮುಖ್ಯಮಂತ್ರಿ ಆದವರಿಗೆ ಗೌರವ ತರುವ ಗೆಲುವೇ ಅಲ್ಲ" ಎಂದು ಸಿ. ಟಿ. ರವಿ ಟೀಕಿಸಿದರು.

ತಾಜ್ ವೆಸ್ಟ್‌ ಎಂಡ್ ಕಥೆ

ತಾಜ್ ವೆಸ್ಟ್‌ ಎಂಡ್ ಕಥೆ

"ಸಿದ್ದರಾಮಯ್ಯ ಈಗ ಏಕೆ ತಾಜ್ ವೆಸ್ಟ್ ಎಂಡ್ ಕಥೆ ತೆಗೆಯುತ್ತಾರೆ?. ವೆಸ್ಟ್ ಎಂಡ್ ಅಡ್ರೆಸ್ ಗೊತ್ತಾದ ಮೇಲೆ ತಾನೆ ಲೋಕಸಭೆ ಎಲೆಕ್ಷನ್ ಒಟ್ಟಿಗೆ ಮಾಡಿದ್ದು. ಅಧಿಕಾರಿ ಹಂಚಿಕೊಂಡು, ತನ್ನವರನ್ನು ಮಂತ್ರಿ ಮಾಡುವಾಗ ವೆಸ್ಟ್ ಎಂಡ್ ಅಡ್ರೆಸ್ ಗೊತ್ತಿರಲಿಲ್ವಾ?" ಎಂದು ಸಿಟಿ ರವಿ ಪ್ರಶ್ನಿಸಿದರು.

Recommended Video

ದೀದಿಗೆ ಶಾಕ್ ಮೇಲೆ ಶಾಕ್! | Didi | west bengal | Oneindia Kannada
ಬೆಂಬಲ ನೀಡುವವರು ಯಾರು?

ಬೆಂಬಲ ನೀಡುವವರು ಯಾರು?

"ನಿಮ್ಮ ಹಳೇ ಮಾತಿಗೂ ಈಗಿನ ಮಾತಿಗೂ ವ್ಯತ್ಯಾಸವೇಕೆ?. ಅರುಳು-ಮರುಳಾ?, ಘಳಿಗೆಗೊಮ್ಮೆ ಬಣ್ಣ ಬದಲಿಸಿದರೆ ಗೋಸುಂಬೆ ಅಂತಾರೆ. ಸಿದ್ದರಾಮಯ್ಯ ಗೋಸುಂಬೆ ತರ ಆಡಬಾರದು. ನಾವು ಸ್ಪಷ್ಟವಿದ್ದೇವೆ, ಎಂದಿಗೂ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಅವತ್ತು ಜೆಡಿಎಸ್ ಜೊತೆ ನಿಂತು ಬೆಂಬಲ ನೀಡಿದವರು ಯಾರು?" ಎಂದು ಸಿ. ಟಿ. ರವಿ ಪ್ರಶ್ನಿಸಿದರು.

English summary
Siddaramaiah statement on defeat at Chamundeshwari. BJP general secretary C. T. Ravi comment for Siddaramaiah statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X