ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾತಿ, ಧರ್ಮಗಳನ್ನು ಒಡೆಯುವುದು ಬಿಜೆಪಿ ಕೆಲಸ: ಮಧು ಬಂಗಾರಪ್ಪ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್ 23: "ಬಿಜೆಪಿ ಜಾತಿ, ಧರ್ಮ, ಒಳಜಾತಿಗಳನ್ನು ಒಡೆಯುವ ಕೆಲಸವನ್ನು ಚುನಾವಣೆ ಸಂದರ್ಭದಲ್ಲಿ ಮಾಡುತ್ತಾರೆ. ಆದರೆ ಕಾಂಗ್ರೆಸ್ ತಮ್ಮ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ," ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.

ಚಿಕ್ಕಮಗಳೂರಿನಲ್ಲಿ ಸೌಹಾರ್ದತೆಯ ಅವಶ್ಯಕತೆ ಇದೆ. ಹಾಗೂ ಅಭಿವೃದ್ಧಿಯಲ್ಲಿ ಹಿಂದಿನ ನಗರಸಭೆ ಆಡಳಿತ ವಿಫಲವಾಗಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರ ನೀಡಬೇಕು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಮನವಿ ಮಾಡಿದರು.

ಚಿಕ್ಕಮಗಳೂರು ನಗರದ ಪ್ರೆಸ್‌ಕ್ಲಬ್‌ನ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಧು ಬಂಗಾರಪ್ಪ, "ಚಿಕ್ಕಮಗಳೂರು ನಗರಸಭೆ ಚುನಾವಣೆ ಎರಡು ವರ್ಷದ ಬಳಿಕ ನಡೆಯುತ್ತಿದ್ದು, ಆ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಇಡೀ ದಿನ ಪ್ರಚಾರ ನಡೆಸುವುದಾಗಿ ತಿಳಿಸಿದರು. ಹಲವು ವರ್ಷಗಳಿಂದ ನಗರಸಭೆಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು, ಅಭಿವೃದ್ಧಿ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಜನರು ಬದಲಾವಣೆಯನ್ನು ಮಾಡುತ್ತಾರೆ ಎಂಬ ವಿಶ್ವಾಸ ಕಂಡುಬರುತ್ತಿದೆ," ಎಂದರು.

Chikkamagaluru: Congress Leader Madhu Bangarappa Expressed Outrage Against BJP Government

"ದೇಶದಲ್ಲಿ ಹಾಗೂ ರಾಜ್ಯದಲ್ಲಿ ಆಡಳಿತಯಂತ್ರ ಸಂಪೂರ್ಣ ಸತ್ತುಹೋಗಿದೆ. ಇದಕ್ಕೆ ಇತ್ತೀಚೆಗೆ ನಡೆದ ಎಂಎಲ್‌ಸಿ ಚುನಾವಣೆಯ ಫಲಿತಾಂಶ ಹಾಗೂ ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ, ಇಡೀ ರಾಜ್ಯದ ಜನರ ಭಾವನೆ ಬದಲಾವಣೆಯತ್ತ ಸಾಗಿದೆ ಎಂಬುದು ಕಂಡುಬರುತ್ತಿದೆ," ಎಂದು ಹೇಳಿದರು.

"ಕಾಂಗ್ರೆಸ್ ಪಕ್ಷದ ಆಡಳಿತ ಸಂದರ್ಭದಲ್ಲಿ ಸರ್ಕಾರ ನೀಡಿದ ಕಾರ್ಯಕ್ರಮಗಳು ಹಾಗೂ ಯೋಜನೆಗಳು ಜನರಿಗೆ ತಲುಪುವ ವ್ಯವಸ್ಥೆ ಇತ್ತು. ಆದರೆ ಈ ಸರ್ಕಾರದಲ್ಲಿ ಆ ರೀತಿಯ ಯೋಜನೆಗಳು ಇಲ್ಲ ಈ ಹಿನ್ನೆಲೆಯಲ್ಲಿ ಜನರು ಬದಲಾವಣೆ ಬಯಸಿದ್ದಾರೆ," ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ದೇಶ ಹಾಗೂ ರಾಜ್ಯದಲ್ಲಿ ಕಾರ್ಯಕ್ರಮಗಳನ್ನು ನೀಡಿ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಭೂದಾನ, ರೈತರಿಗೆ ಉಚಿತ ವಿದ್ಯುತ್, ಅನ್ನಭಾಗ್ಯ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನೀಡಿದ ಕೀರ್ತಿ ಕಾಂಗ್ರೆಸ್‌ಗೆ ಸೇರುತ್ತದೆ. ಆದರೆ ಅನ್ನಭಾಗ್ಯಕ್ಕೂ ಕತ್ತರಿ ಹಾಕಿದ ಅಪಕೀರ್ತಿ ಬಿಜೆಪಿಯದ್ದು ಎಂದು ವ್ಯಂಗ್ಯವಾಡಿದರು.

Chikkamagaluru: Congress Leader Madhu Bangarappa Expressed Outrage Against BJP Government

ಎಲ್ಲಾ ಜಾತಿ, ಧರ್ಮ ಪ್ರೀತಿಸುವವನೇ ಹಿಂದೂ
ಎಲ್ಲಾ ಜಾತಿ, ಧರ್ಮ ಪ್ರೀತಿಸುವನೇ ಮಾಡುವವನೇ ನಿಜವಾದ ಹಿಂದೂ. ಜಾತಿ, ಧರ್ಮಗಳನ್ನು ಕಟ್ಟುವಾಗ ಯಾವುದೇ ಮತ್ತೊಂದು ಜಾತಿ, ಧರ್ಮದ ವಿರುದ್ಧ ಕಟ್ಟುವುದಿಲ್ಲ. ಎಲ್ಲರನ್ನು ಪ್ರೀತಿ ಮಾಡಬೇಕು ಎಂಬ ನಿಟ್ಟಿನಲ್ಲಿ ಕಟ್ಟಲಾಗುತ್ತದೆ. ಯಾವುದೇ ಜಾತಿ, ಧರ್ಮ ಅಂದರೆ ಅದು ತಾಯಿ ಇದ್ದಂತೆ. ಆಯಾಯ ಧರ್ಮದವರಿಗೆ ಅವರ ಧರ್ಮ, ಜಾತಿಯೇ ತಾಯಿ. ಇದು ಬಿಜೆಪಿಯವರಿಗೆ ಅರ್ಥವಾಗಬೇಕು ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ಹರಿಹಾಯ್ದರು.

ಮತಾಂತರ ಕಾಯ್ದೆಯ ಕಡತಕ್ಕೆ ಸಿದ್ಧರಾಮಯ್ಯ ಈ ಹಿಂದೆ ಸಹಿ ಹಾಕಿದ್ದರು ಎಂಬ ಚರ್ಚೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಕಾನೂನು ತರುವಂತಹ ಸಂದರ್ಭದಲ್ಲಿ ಅದು ಜನರಿಗೆ ತೊಂದರೆಯಾಗದ ರೀತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಕಾನೂನು ತರಬೇಕಾಗುತ್ತದೆ. ಬಿಜೆಪಿಯವರು ಇರುವ ಕಾನೂನನ್ನು ಬಿಗಿ ಮಾಡುವ ಅಗತ್ಯ ಇದೆ. ಆದರೆ ಮೂರೂವರೆ ವರ್ಷಗಳ ಕಾಲ ಸುಮ್ಮನಿದ್ದು, ಈಗ ಮತಾಂತರ ಕಾಯ್ದೆ ತರಲು ಹೊರಟಿರುವ ಹಿಂದೆ ದುರುದ್ದೇಶ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Chikkamagaluru: Congress Leader Madhu Bangarappa Expressed Outrage Against BJP Government

ಈ ಹಿಂದೆ ಸಿದ್ಧರಾಮಯ್ಯ ಕಡತಕ್ಕೆ ಸಹಿ ಹಾಕಿದ್ದರು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರು ಸಹಿ ಹಾಕಿದ್ದರೆ ಅದರಲ್ಲಿ ಜನರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಯೋಚಿಸಿರುವುದಿಲ್ಲ. ಬಿಜೆಪಿಯವರು ವಿಧಾನಸೌಧದಲ್ಲಿ ಬಾಯಿ ಬಡಿದುಕೊಳ್ಳಬೇಕು ಅಷ್ಟೇ. ಆದರೆ ವಿಷಯ ಏನು ಎಂಬುದನ್ನು ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು. ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಬಿಜೆಪಿಯವರು ಸಿದ್ಧರಾಮಯ್ಯ ಅವರನ್ನು ನೆಪವಾಗಿ ಇಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಮಧು ಬಂಗಾರಪ್ಪ ಟೀಕಿಸಿದರು.

ಇದೇ ವೇಳೆ ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಬಿಜೆಪಿಯವರದ್ದು ತಾನು ಕಳ್ಳ ಪರರ ನಂಬ ಎಂಬಂತಾಗಿದೆ. ಈ ಸರ್ಕಾರ ಭ್ರಷ್ಟಾಚಾರ ಮಾಡುತ್ತಿರುವುದಕ್ಕೆ ಕಂಟ್ರಾಕ್ಟರ್ ಅಸೋಸಿಯೇಷನ್ ಪ್ರಧಾನಮಂತ್ರಿ ಮೋದಿಗೆ ಪತ್ರ ಬರೆದಿರುವುದೇ ಸಾಕ್ಷಿಯಾಗಿದ್ದು, ಇದು ಪರ್ಸೆಂಟೇಜ್ ಸರ್ಕಾರ ಎಂದು ಕಿಡಿಕಾರಿದರು.

ಕಪ್ಪು ಹಣ ತರುತ್ತೇನೆ, ಬೆಲೆ ಏರಿಕೆ ತಪ್ಪಿಸಲಾಗುತ್ತದೆ, ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ನಾಟಕ ಜನರಿಗೆ ಈಗ ತಿಳಿದಿದೆ. ಜನರು ಪರಿವರ್ತನೆಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಹೆಚ್ಚು ಮತವನ್ನು ನೀಡಿ ಗೆಲ್ಲಿಸಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಕಾಂಗ್ರೆಸ್ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡ ಬಿ.ಎಚ್. ಹರೀಶ್, ಪುಷ್ಪಲತಾ, ಪ್ರಸಾದ್ ಅಮೀನ್, ಸಂದೇಶ್ ಇದ್ದರು.

Recommended Video

Virat ಟೈಮ್ ಮುಗೀತು ಈಗ Ganguly ಟೈಮ್ ಅಂತಾ ರವಿ ಶಾಸ್ತ್ರಿ ಹೇಳಿದ್ಯಾಕೆ? | Oneindia Kannada

English summary
Congress leader Madhu Bangarappa outrage against that BJP had failed in the development of Chikkamagaluru municipality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X