ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿನಯ್ ಗುರೂಜಿ ಮೊರೆ ಹೋದ ಸಿಎಂ; ಯಡಿಯೂರಪ್ಪ ಕಟ್ಟಿಕೊಂಡಿದ್ದ ಹರಕೆ ಏನು?

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ವಿನಯ್ ಗುರೂಜಿ ಮೊರೆ ಹೋದ ಸಿಎಂ; ಯಡಿಯೂರಪ್ಪ ಕಟ್ಟಿಕೊಂಡಿದ್ದ ಹರಕೆ ಏನು? | Oneindia Kannada

ಚಿಕ್ಕಮಗಳೂರು, ಸೆಪ್ಟೆಂಬರ್ 11: ಒಂದೆಡೆ‌ ನೆರೆಯಿಂದ ಕಂಗೆಟ್ಟಿರುವ ಉತ್ತರದ ಜನತೆ. ಮತ್ತೊಂದೆಡೆ ಭಾರೀ ಮಳೆಯಿಂದ ತತ್ತರಿಸಿರುವ ದಕ್ಷಿಣದ ಜನ. ಮೇಲ್ನೋಟಕ್ಕೆ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಅನ್ನಿಸಿದ್ರು, ಒಳಗೊಳಗೆ ಹೊಗೆಯಾಡುತ್ತಿರುವ ಅಸಮಾಧಾನ. ಇದರಿಮದ ಸಂಪೂರ್ಣವಾಗಿ ಟೇಕಾಫ್ ಆಗದ ಸರ್ಕಾರವನ್ನು ಸರಿದಿಕ್ಕಿನಲ್ಲಿ ಮುನ್ನಡೆಸಬೇಕಾದ ಸವಾಲು ಮತ್ತೊಂದೆಡೆ.

ಹೀಗಾಗಿ ಎದುರಾಗಲಿರುವ ಸಂಕಷ್ಟಗಳಿಂದ ಪಾರು ಮಾಡೆಂದು ಸಿಎಂ ಯಡಿಯೂರಪ್ಪ ಟೆಂಪಲ್ ರನ್ ಶುರು ಮಾಡಿದ್ದಾರೆ. ಇಂದು ಶೃಂಗೇರಿಗೆ ತೆರಳಿ ಶಾರದಾಂಬೆ ದರ್ಶನ ಪಡೆದಿರುವ ಬಿಎಸ್ ವೈ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಾರದಾಂಬೆ ದರ್ಶನದ ಬಳಿಕ ಕೊಪ್ಪ ತಾಲೂಕಿನ ಗೌರಿಗದ್ದೆ ದತ್ತಾಶ್ರಮಕ್ಕೆ ಭೇಟಿ ನೀಡಿ ಅವಧೂತ ವಿನಯ್ ಗುರೂಜಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ಲಿದಾರೆ.

ವಿನಯ್‌ ಗುರೂಜಿನೂ ಬಿಡದ 'ಏಕಾಂತ ಸೇವೆ' ಆರೋಪ: ಹರಿದಾಡುತ್ತಿರುವ ಸುದ್ದಿಯ ಸತ್ಯಾಸತ್ಯತೆ ಏನು?ವಿನಯ್‌ ಗುರೂಜಿನೂ ಬಿಡದ 'ಏಕಾಂತ ಸೇವೆ' ಆರೋಪ: ಹರಿದಾಡುತ್ತಿರುವ ಸುದ್ದಿಯ ಸತ್ಯಾಸತ್ಯತೆ ಏನು?

ಅಷ್ಟಕ್ಕೂ ವಿನಯ್ ಗುರೂಜಿ ಅವರ ಆಶ್ರಮಕ್ಕೆ ಸಿಎಂ ಭೇಟಿ ನೀಡಿರುವ ಕಾರಣವಾದರೂ ಏನು? ಪೂರ್ಣಾವಧಿಯ ಅಧಿಕಾರಕ್ಕಾಗಿ ‌ಸಿಎಂ ಯಡಿಯೂರಪ್ಪನವರಿಂದ ಹೋಮ, ಹವನಗಳು ನಡೆಯುತ್ತಿದ್ದು, ಈ ಯಾಗವು ಗೌರಿಗೆದ್ದೆಯ ವಿನಯ್ ಗುರೂಜಿ ಆಶ್ರಯದಲ್ಲಿ ಕಳೆದ 6 ದಿನಗಳಿಂದಲೂ ನಡೆಯುತ್ತಿದೆಯಂತೆ. ತಾವು ಸಿಎಂ ಆದರೆ ಶತರುದ್ರ ಯಾಗ, ಗಣಪತಿ ಹೋಮ ನಡೆಸುವುದಾಗಿ ಸಿಎಂ ಹರಕ ಹೊತ್ತಿದ್ದರು ಎಂದು ತಿಳಿದುಬಂದಿದೆ.

CM Yediyurappa Visiting Vinay Guruji Ashrama In Gowrigadde


ಅಧಿಕಾರಕ್ಕೂ ಮುನ್ನ ಹಲವು ಭಾರೀ ಬಿಎಸ್ ವೈ ಆಶ್ರಮಕ್ಕೆ ಭೇಟಿ ನೀಡಿದ್ದರು. ಇದೀಗ ಸಿಎಂ ಆಗುವ ಮೊದಲು ಹೊತ್ತಿದ್ದ ಹರಕೆ ತೀರಿಸಲು ಚಿಕ್ಕಮಗಳೂರಿಗೆ ಬಂದಿದ್ದಾರೆ ಎನ್ನಲಾಗಿದೆ. ಸ್ವರ್ಣ ಪೀಠೀಕೇಶ್ವರಿ ಸನ್ನಿಧಿಯಲ್ಲಿ ಗೌಪ್ಯ ಹೋಮ ನಡೆಸಿದ್ದು, ನೂರಾರು ಜನ ಪುರೋಹಿತರ ನೇತೃತ್ವದಲ್ಲಿ ಹೋಮದ ಪೂರ್ಣಾಹುತಿ ನಡೆದಿದೆ. ಈ ಸಂದರ್ಭದಲ್ಲಿ ಸಚಿವ ಸಿ.ಟಿ ರವಿ, ಸಂಸದೆ ಶೋಭಾ ಕರಂದ್ಲಾಜೆ ಭಾಗಿಯಾಗಿದ್ದರು.

ಸಿದ್ದಾರ್ಥ ಬಗ್ಗೆ ಕೇಳಿದಾಗ 'ನೀರು ಕಾಣಿಸುತ್ತಿದೆ' ಎಂದಿದ್ದ ವಿನಯ್ ಗುರೂಜಿಸಿದ್ದಾರ್ಥ ಬಗ್ಗೆ ಕೇಳಿದಾಗ 'ನೀರು ಕಾಣಿಸುತ್ತಿದೆ' ಎಂದಿದ್ದ ವಿನಯ್ ಗುರೂಜಿ

ಆದರೆ ಮಾಧ್ಯಮಗಳಿಗೆ ನೆರೆ ಪೀಡಿತ ಪ್ರದೇಶ, ಮಳೆ‌ ಕಡಿಮೆಯಾಗಲಿ ಎಂದು ಹೋಮ ನಡೆಸುತ್ತಿರುವ ಮಾಹಿತಿ ನೀಡಲಾಗಿದೆ.

English summary
CM to visit Vinay Guruji's ashram today. The homa and havana will be held by CM Yeddyurappa for full time power, has been since last 6 days under Vinay Guruji in Gowrigadde of chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X