ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಚಿಕ್ಕಮಗಳೂರಿಗೆ ಸಿಎಂ; ಪ್ರವಾಹಪೀಡಿತ ಸ್ಥಳಗಳ ಪರಿಶೀಲನೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 27: ಇಂದು ಚಿಕ್ಕಮಗಳೂರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಲಿದ್ದು, ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಲಿದ್ದಾರೆ.

ಮೂಡಿಗೆರೆ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿರುವ ಅವರು, ಮಲೆಮನೆ, ಮಧುಗುಂಡಿ ಸೇರಿದಂತೆ ಪ್ರವಾಹ ಪೀಡಿತ ಗ್ರಾಮಗಳನ್ನು ವೀಕ್ಷಿಸಲಿದ್ದಾರೆ. ಬಳಿಕ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರ ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ.

 ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ; ಗಾಯದ ಮೇಲೆ ಬರೆ? ಚಿಕ್ಕಮಗಳೂರಿನಲ್ಲಿ ಮತ್ತೆ ಮಳೆ; ಗಾಯದ ಮೇಲೆ ಬರೆ?

ಮಧ್ಯಾಹ್ನ 1 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ಮೂಡಿಗೆರೆ ಪಟ್ಟಣಕ್ಕೆ ಆಗಮಿಸಲಿದ್ದು, ಅಲ್ಲಿಂದ ರಸ್ತೆ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಲಿದ್ದಾರೆ.

CM Visit Chikkamagaluru Flood Prone Villages Today

ನೆರೆ ಸಂತ್ರಸ್ತರ ಪ್ರತಿಭಟನೆ: ಸಂತ್ರಸ್ತರೆಡೆಗೆ ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ನಗರದ ಆಜಾದ್ ಪಾರ್ಕ್ ನಲ್ಲಿ ನಿನ್ನೆ ನೆರೆ ಸಂತ್ರಸ್ತರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಪ್ರತಿಭಟನೆಯಲ್ಲಿ ನೂರಾರು ನಿರಾಶ್ರಿತರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಭಾಗಿಯಾಗಿದ್ದು, ಮಳೆ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಒತ್ತಾಯಿಸಿದರು.

ಪಶ್ಚಿಮ ಘಟ್ಟಗಳ ಸಂರಕ್ಷಣೆ: ಹೊಸ ಸರ್ಕಾರದಿಂದ ನಿರೀಕ್ಷೆಗಳೇನು? ಪಶ್ಚಿಮ ಘಟ್ಟಗಳ ಸಂರಕ್ಷಣೆ: ಹೊಸ ಸರ್ಕಾರದಿಂದ ನಿರೀಕ್ಷೆಗಳೇನು?

ಮನೆ, ಜಮೀನು ಕಳೆದುಕೊಂಡ ಸಂತ್ರಸ್ತರಿಗೆ ಬೇರೆಡೆ ಜಮೀನು, ಮನೆ ನೀಡುವಂತೆ ಸರ್ಕಾರಕ್ಕೆ ಮೂಡಿಗೆರೆ ತಾಲೂಕಿನ ಮಧುಗುಂಡಿ, ಅಲೇಖಾನ್ ಹೊರಟ್ಟಿ, ದುರ್ಗದ ಹಳ್ಳಿ, ಚನ್ನಹಡ್ಲು, ಕಳಸ ಭಾಗದ ನಿರಾಶ್ರಿತರು ಆಗ್ರಹಿಸಿದರು.

ಭೀಕರ ಪ್ರವಾಹ : 4 ದಿನ ರಾಜ್ಯದಲ್ಲಿ ಕೇಂದ್ರ ತಂಡದ ಪ್ರವಾಸಭೀಕರ ಪ್ರವಾಹ : 4 ದಿನ ರಾಜ್ಯದಲ್ಲಿ ಕೇಂದ್ರ ತಂಡದ ಪ್ರವಾಸ

ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಕುಮಾರ್ ಭೇಟಿ ನೀಡಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದರು.

English summary
Chief Minister BS Yeddyurappa will visit Chikkamagaluru today to review the flood affected areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X