• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಡ್ರಗ್ಸ್ ಪ್ರಕರಣದಲ್ಲಿ ಶಾಸಕ ಜಮೀರ್ ಪಾತ್ರ ತನಿಖೆ ಬಳಿಕ ಗೊತ್ತಾಗಬೇಕು'

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಸೆಪ್ಟೆಂಬರ್ 7: ಡ್ರಗ್ಸ್ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಪಾತ್ರ ತನಿಖೆಯ ನಂತರ ಗೊತ್ತಾಗುತ್ತದೆ ಎಂದು ಸಚಿವ ಸಿ.ಟಿ ರವಿ ಹೇಳಿದರು.

   ಕಣ್ಣೀರಿಡುತ್ತ Zameer Ahmedರನ್ನು ಬೇಡಿಕೊಂಡರ Sanjjanaa Galrani | Oneindia Kannada

   ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರದಲ್ಲಿ ಮಾತನಾಡಿದ ಸಚಿವ ಸಿ.ಟಿ ರವಿ, ಕೆ.ಜಿ ಹಾಗೂ ಡಿ.ಜೆ ಹಳ್ಳಿ ಪ್ರಕರಣದಲ್ಲಿ ಅಪರಾಧಿಗಳ ಪರ ನಿಂತ ನಿಲುವು ಅವರು ಸಮಾಜಘಾತುಕ ಶಕ್ತಿಗಳಿಗೆ ಬೆಂಬಲಿಸುವ ರೀತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.

   ರಾಗಿಣಿಗೆ ಡ್ರಗ್ಸ್ ನಂಟು ಇದೆ ಎಂದು ಗೊತ್ತಿರಲಿಲ್ಲ; ಸಚಿವ ನಾರಾಯಣಗೌಡ ರಾಗಿಣಿಗೆ ಡ್ರಗ್ಸ್ ನಂಟು ಇದೆ ಎಂದು ಗೊತ್ತಿರಲಿಲ್ಲ; ಸಚಿವ ನಾರಾಯಣಗೌಡ

   ಅಪರಾಧಿಗಳ ಪರ ನಿಲ್ಲುವ ಜಮೀರ್ ಅಹ್ಮದ್ ಅವರ ಮನೋಭಾವನೆ ಹಾಗೂ ಅವರದ್ದೇ ಕ್ಷೇತ್ರದ ಕೊರೊನಾ ವಾರಿಯರ್ ಮೇಲೆ ಹಲ್ಲೆ ಮಾಡಿದವರಿಗೆ ಬೆಂಬಲಿಸಿ, ಸನ್ಮಾನ ಮಾಡಿದ್ದೆಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಕಾದ ವಿಷಯ ಎಂದು ತಿಳಿಸಿದರು.

   ಸಾರ್ವಜನಿಕ ಬದುಕಿನಲ್ಲಿರುವವರು ಸೌಹಾರ್ದತೆಗೆ ಒತ್ತು ನೀಡಬೇಕು, ಅಪರಾಧಿಗಳ ಪರ ನಿಲ್ಲುವುದು ತಾತ್ಕಾಲಿಕವಾಗಿ ಶ್ರೇಯಸ್ಸು ತರಬಹುದು ಆದರೆ ಅದು ಕಳ್ಳ ನಾಯಕನಾಗಿ ಉಳಿಯಲು ಕಾರಣವಾಗುತ್ತದೆ ಎಂದು ಎಚ್ಚರಿಸಿದರು.

   ಶಾಸಕ ಜಮೀರ್ ಏನೆಂದೂ ಅವರೇ ಯೋಚಿಸಲಿ ಎಂದು ಚಿಕ್ಕಮಗಳೂರು ಜಿಲ್ಲೆ ಎನ್. ಆರ್ ಪುರ ತಾಲೂಕಿನಲ್ಲಿ ಸಚಿವ ಸಿ.ಟಿ ರವಿ ವಾಗ್ದಾಳಿ ನಡೆಸಿದರು.

   English summary
   "The role of Congress MLA Jameer Ahmed in the Drugs case will be revealed after the investigation," Minister CT Ravi said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X