ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು; ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮೇ 31: ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಚಿಕ್ಕಮಗಳೂರಿನಲ್ಲಿ ನಾಲ್ಕು ಪಟ್ಟಣ ಪಂಚಾಯಿತಿ, ಒಂದು ಪುರಸಭೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ. 44 ವಾರ್ಡ್ ಪಟ್ಟಣ ಪಂಚಾಯಿತಿ, 23 ವಾರ್ಡ್ ಪುರಸಭೆಯ ಅಭ್ಯರ್ಥಿಗಳ ಭವಿಷ್ಯವೂ ಈ ಮೂಲಕ ನಿರ್ಧಾರಗೊಳ್ಳಲಿದೆ.

ಮಿನಿ ಮಹಾಸಮರ: ಮೇ 29 ಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಮಿನಿ ಮಹಾಸಮರ: ಮೇ 29 ಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆ

ಬೆಳಿಗ್ಗೆ 8 ಗಂಟೆಗೆ ಮತ ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕಿಯೆ ಆರಂಭವಾಗಿದ್ದು, ಮತಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಮೂಡಿಗೆರೆ ಪಟ್ಟಣ ಪಂಚಾಯಿತಿ 11 ವಾರ್ಡ್ ಗಳಲ್ಲಿ ಬಿಜೆಪಿಗೆ 6, ಕಾಂಗ್ರೆಸ್ ಗೆ 4 ಹಾಗೂ ಜೆಡಿಎಸ್ ಗೆ 1 ಸ್ಥಾನ ದೊರಕುವ ಮೂಲಕ ಬಿಜೆಪಿ ತೆಕ್ಕೆಗೆ ಅಧಿಕಾರ ಸಿಕ್ಕಿದೆ. ಕೊಪ್ಪ ಪಟ್ಟಣ ಪಂಚಾಯಿತಿ 11 ವಾರ್ಡ್ ಗಳಲ್ಲಿ ಬಿಜೆಪಿ - 6, ಕಾಂಗ್ರೆಸ್ - 4, ಜೆಡಿಎಸ್ -೦ ಹಾಗೂ ಪಕ್ಷೇತರ - 1 ಮತಗಳು ದೊರೆತಿದ್ದು, ಬಿಜೆಪಿ ಅಗ್ರಸ್ಥಾನದಲ್ಲಿದೆ. ಎನ್.ಆರ್.ಪುರ ಪಟ್ಟಣ ಪಂಚಾಯಿತಿ 11 ವಾರ್ಡ್ ಗಳಲ್ಲಿ ಬಿಜೆಪಿ ಗೆ 2 ಹಾಗೂ ಕಾಂಗ್ರೆಸ್ ಗೆ 9 ಸ್ಥಾನಗಳು ದೊರಕಿದ್ದು, ಕಾಂಗ್ರೆಸ್ ತೆಕ್ಕೆಗೆ ಅಧಿಕಾರ ದೊರೆತಿದೆ. ಶೃಂಗೇರಿ ಪಟ್ಟಣ ಪಂಚಾಯಿತಿ 11ರಲ್ಲಿ ಬಿಜೆಪಿಗೆ 7, ಕಾಂಗ್ರೆಸ್ ಗೆ 3, ಜೆಡಿಎಸ್ ೦ ಹಾಗೂ ಪಕ್ಷೇತರಕ್ಕೆ ಒಂದು ಮತ ದೊರೆತಿದೆ.

ನಗರಸಭೆ ಚುನಾವಣೆಯಲ್ಲೂ ನೋಟಾ ಬಳಕೆಗೆ ಸಂಪುಟದ ಒಪ್ಪಿಗೆನಗರಸಭೆ ಚುನಾವಣೆಯಲ್ಲೂ ನೋಟಾ ಬಳಕೆಗೆ ಸಂಪುಟದ ಒಪ್ಪಿಗೆ

chikkamagaluru local body election result

ಈ ಮೂಲಕ ಬಿಜೆಪಿ ಇಲ್ಲೂ ಮೇಲುಗೈ ಸಾಧಿಸಿದೆ. ಕಡೂರು ಪುರಸಭೆ 23 ವಾರ್ಡ್ ಗಳಲ್ಲಿ ಬಿಜೆಪಿಗೆ 6, ಕಾಂಗ್ರೆಸ್ - 7, ಜೆಡಿಎಸ್ - 6 ಪಕ್ಷೇತರ - 4 ಮತಗಳಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಅಧಿಕಾರ ನಡೆಸುವ ಸಾಧ್ಯತೆ ವ್ಯಕ್ತವಾಗಿದೆ.

English summary
The results of the Local Body elections came out. In Chikmagalur, four town panchayats and one municipal vote count have been completed, with the BJP leading the way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X