ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು; ಹನುಮಾನ್ ಚಾಲೀಸಾ ಹೇಳಿ ದಾಖಲೆ ಬರೆದ ಹುಡುಗಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 06: ಚಿಕ್ಕಮಗಳೂರಿನ 13 ವರ್ಷದ ಜಿ. ತನ್ಮಯಿ ವಸಿಷ್ಟ ಎಂಬ ಹುಡುಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಭಾಜನರಾಗಿದ್ದಾರೆ. 1 ನಿಮಿಷ 10ಸೆಕೆಂಡ್‍ಗಳಲ್ಲಿ ವೇಗವಾಗಿ ಹನುಮಾನ್ ಚಾಲೀಸಾ ಹೇಳುವ ಮೂಲಕ ದಾಖಲೆ ಮಾಡಿದ್ದಾರೆ.

ಕೇಂದ್ರೀಯ ವಿದ್ಯಾಲಯದಲ್ಲಿ 8ನೇ ತರಗತಿ ಓದುತ್ತಿರುವ ಜಿ. ತನ್ಮಯಿ ವಸಿಷ್ಟ ವಿಜಯಪುರದ ಎಲ್. ವಿ. ಗಿರೀಶ್ ಮತ್ತು ಕೃಪಾ ದಂಪತಿಗಳ ಪುತ್ರಿ. ಶ್ಲೋಕ ಹೇಳುವುದು, ಹಾಡು ಹೇಳುವುದು, ಕವನ ರಚಿಸುವುದು ಇತ್ಯಾದಿ ಹವ್ಯಾಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಮಥುರಾದ ಈದ್ಗಾ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಣ: ನಾಲ್ವರ ಬಂಧನ ಮಥುರಾದ ಈದ್ಗಾ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಣ: ನಾಲ್ವರ ಬಂಧನ

1 ನಿಮಿಷ 10ಸೆಕೆಂಡ್‍ಗಳಲ್ಲಿ ವೇಗವಾಗಿ ಹನುಮಾನ್ ಚಾಲೀಸಾ ಹೇಳುವ ತನ್ಮಯಿ ಅವರ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಸೇರಿದೆ. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿಯೇ ತನ್ಮಯಿ ಅಭ್ಯಾಸ ನಡೆಸುತ್ತಿದ್ದರು.

''ಹನುಮಾನ್ ಚಾಲೀಸಾ ಪಠಣ ಮಾಡಿ, ವೈರಸ್ ಮುಕ್ತರಾಗಿ'' ''ಹನುಮಾನ್ ಚಾಲೀಸಾ ಪಠಣ ಮಾಡಿ, ವೈರಸ್ ಮುಕ್ತರಾಗಿ''

Chikkamagaluru Girl Bagged India Book Of Record Title

ಅನೇಕ ಆನ್‍ಲೈನ್ ಸ್ಫರ್ಧೆಗಳಲ್ಲೂ ಸಹ ತನ್ಮಿಯಿ ಭಾಗವಹಿಸಿ ವಿಜೇತರಾಗಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಅವರು ಲಾಕ್‍ಡೌನ್ ಸಮಯದಲ್ಲಿ ನಡೆಸಿಕೊಟ್ಟ ನಚಿಕೇತ ಮತ್ತು ಸೀತಾ ಸಂಭ್ರಮ ಆನ್‍ಲೈನ್ ಸ್ಫರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ್ದಾರೆ.

Chikkamagaluru Girl Bagged India Book Of Record Title

ಚಿಕ್ಕಗಳೂರಿನ ಈ ವಿದ್ಯಾರ್ಥಿಯು ಇಂಡಿಯಾ ಬುಕ್ ಆಫ್ ರೇಕಾರ್ಡ್‍ನಲ್ಲಿ ದಾಖಲೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಜಿ. ತನ್ಮಯಿ ವಸಿಷ್ಟ ಸಾಧನೆಗೆ ಅನೇಕರು ಶುಭಾಶಯಗಳನ್ನು ಹೇಳಿದ್ದಾರೆ.

ಅರವಿಂದನ ಕೈ ಹಿಡಿದ ಭಜರಂಗಿ, ಏನಿದು ಹನುಮಾನ್ ಚಾಲೀಸಾ ಮಹಿಮೆ! ಅರವಿಂದನ ಕೈ ಹಿಡಿದ ಭಜರಂಗಿ, ಏನಿದು ಹನುಮಾನ್ ಚಾಲೀಸಾ ಮಹಿಮೆ!

ಪುಟಾಣಿಯ ಸಾಧನೆ : 2020ರ ಡಿಸೆಂಬರ್‌ನಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪರಸನಹಳ್ಳಿಯ ಶಾಂತಗೌಡ ಮತ್ತು ವಿದ್ಯಾಶ್ರೀ ದಂಪತಿ ಪುತ್ರಿ ಪ್ರತೀಕ್ಷಾ ಬಿರಾದಾರ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್‌ ಸೇರಿದ್ದಳು.

Recommended Video

IPL ಮಿನಿ ಹರಾಜು ಪ್ರಕ್ರಿಯೆಗೆ ಆಟಗಾರರು ಸಿದ್ದ | Oneindia Kannada

ಎರಡು ವರ್ಷ ಐದು ತಿಂಗಳ ಪ್ರತೀಕ್ಷಾ ಭಾರತದ ರಾಜಧಾನಿ, ರಾಷ್ಟ್ರಪತಿ, ಪ್ರಧಾನಮಂತ್ರಿ, ಜ್ಞಾನಪೀಠ ಪ್ರಶಸ್ತಿ ಪಡೆದವರ ಹೆಸರುಗಳನ್ನು ಪಟಪಟನೆ ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಳು.

English summary
13 year old Chikkamagaluru girl joined India book of record by saying hanuman chalisa in 1 minute and 10 second.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X