ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂತ್ರ ಕುಡಿಸಿದ ಕೇಸ್; ಪಿಎಸ್‌ಐಗೆ 14 ದಿನ ನ್ಯಾಯಾಂಗ ಬಂಧನ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್ 02; ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣದಲ್ಲಿ ಬಂಧಿಸಲಾಗಿರುವ ಪಿಎಸ್ಐ ಅರ್ಜುನ್‌ರನ್ನು ಸಿಐಡಿ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿರು. ಆರೋಪಿಯನ್ನು ಚಿಕ್ಕಮಗಳೂರು ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.

ಪೊಲೀಸ್ ಕಸ್ಟಡಿಯಲ್ಲಿದ್ದ ಪರಿಶಿಷ್ಟ ಸಮುದಾಯದ ಯುವಕ ಪುನೀತ್ ಮೇಲೆ ದೌರ್ಜನ್ಯ ನಡೆಸಿದ, ಮೂತ್ರ ಕುಡಿಸಿದ ಆರೋಪ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಐಯಾಗಿದ್ದ ಅರ್ಜುನ್ ಮೇಲಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಬುಧವಾರ ರಾತ್ರಿ ಬೆಂಗಳೂರಿನಲ್ಲಿ ಅರ್ಜುನ್ ಬಂಧಿಸಿದ್ದರು.

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪಿಎಸ್‌ಐ ವಿರುದ್ಧ ಎಫ್‌ಐಆರ್ ದಲಿತ ಯುವಕನಿಗೆ ಮೂತ್ರ ಕುಡಿಸಿದ ಪಿಎಸ್‌ಐ ವಿರುದ್ಧ ಎಫ್‌ಐಆರ್

ಗುರುವಾರ ಬೆಳಗ್ಗೆ ಆರೋಪಿ ಅರ್ಜುನ್‌ರನ್ನು ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕರೆತಂದ ಸಿಐಡಿ ಪೊಲೀಸರ ತಂಡ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಮೊದಲನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪುಷ್ಪಲತಾ ಆರೋಪಿ ಅರ್ಜುನ್‌ರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.

Breaking; ವಿಜಯಪುರದಲ್ಲಿ ಲಾಕ್‌ಅಪ್ ಡೆತ್; ಸಿಐಡಿ ತನಿಖೆBreaking; ವಿಜಯಪುರದಲ್ಲಿ ಲಾಕ್‌ಅಪ್ ಡೆತ್; ಸಿಐಡಿ ತನಿಖೆ

Chikkamagaluru Court Ordered For 14 Days Judicial Custody For PSI Arjun

ಮೇ 10ರಂದು ಪರಿಶಿಷ್ಟ ಸಮುದಾಯದ ಯುವಕನ ಮೇಲೆ ದೌರ್ಜನ್ಯ ನಡೆಸಲಾಗಿತ್ತು, ಮೂತ್ರ ನೆಕ್ಕಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಪಿಎಸ್‌ಐ ಅರ್ಜುನ್ ವಿರುದ್ಧ ಮೇ 22ರಂದು ದೂರು ದಾಖಲಾಗಿತ್ತು. ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಪಿಎಸ್‌ಐ ಅರ್ಜುನ್ ತಲೆಮರೆಸಿಕೊಂಡಿದ್ದರು.

ದಲಿತ ಯುವಕನಿಗೆ ಮೂತ್ರ ಕುಡಿಸಿದ್ದ ಪಿಎಸ್ಐ ಅರ್ಜುನ್ ಕೈಗೆ ಕೋಳ! ದಲಿತ ಯುವಕನಿಗೆ ಮೂತ್ರ ಕುಡಿಸಿದ್ದ ಪಿಎಸ್ಐ ಅರ್ಜುನ್ ಕೈಗೆ ಕೋಳ!

ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಚಿಕ್ಕಮಗಳೂರಿನ ಒಂದನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಬುಧವಾರ ಬೆಂಗಳೂರಿನಲ್ಲಿ ಸಿಐಡಿ ಪೊಲೀಸರು ಅರ್ಜುನ್ ಬಂಧಿಸಿದ್ದರು.

ಮೂಡಿಗೆರೆ ತಾಲೂಕಿನ ಕಿರಗುಂದದ ಯುವಕ ಕೆ. ಎಲ್. ಪುನೀತ್‌ ಮೇಲೆ ಗೋಣಿಬೀಡು ಠಾಣೆಯಲ್ಲಿ ದೌರ್ಜನ್ಯ ಎಸಗಲಾಗಿತ್ತು. ಮಹಿಳೆಗೆ ಕರೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪುನೀತ್‌ನನ್ನು ವಿಚಾರಣೆಗಾಗಿ ಠಾಣೆಗೆ ಅರ್ಜುನ್ ಕರೆದುಕೊಂಡು ಹೋಗಿದ್ದರು.

ಪೊಲೀಸ್ ಕಸ್ಟಡಿಯಲ್ಲಿ ಇರುವಾಗ ಪುನೀತ್ ಕುಡಿಯಲು ನೀರು ಕೇಳಿದಾಗ ಬಾಯಿಗೆ ಮೂತ್ರವನ್ನು ಹೊಯ್ಯಿಸಿದರು ಎಂಬುದು ಆರೋಪ. ಈ ಕುರಿತು ಪುನೀತ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.

ಪಿಎಸ್ಐ ಆಗಿದ್ದ ಅರ್ಜುನ್ ವಿರುದ್ಧ ಜಾತಿ ನಿಂದನೆ ಸೇರಿದಂತೆ ವಿವಿಧ ಪ್ರಕರಣ ದಾಖಲು ಮಾಡಲಾಗಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಕರ್ನಾಟಕ ಸರ್ಕಾರ ಅರ್ಜುನ್ ಅಮಾನತು ಮಾಡಿ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಈಗ ಅರ್ಜುನ್ ಬಂಧನದ ಬಳಿಕ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.

ದೂರು ಇಲ್ಲದೇ ವಿಚಾರಣೆ; ಮೂಡಿಗೆರೆ ತಾಲೂಕಿನ ಕಿರಗುಂದದಲ್ಲಿ ಮಹಿಳೆಯ ಮನೆಯಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಯುವಕ ಕೆ. ಎಲ್. ಪುನೀತ್‌ ಮೇಲೆ ಗೋಣಿಬೀಡು ಠಾಣೆಯಲ್ಲಿ ದೌರ್ಜನ್ಯ ಎಸಗಲಾಗಿತ್ತು. ಆದರೆ ಮಹಿಳೆ ದೂರು ನೀಡದಿದ್ದರೂ ಪುನೀತ್‌ರನ್ನು ಠಾಣೆಗೆ ಕರೆತಂದಿದ್ದ ಪಿಎಸ್‌ಐ ಅರ್ಜುನ್ ದೌರ್ಜನ್ಯ ನಡೆಸಿದ್ದರು.

ಠಾಣೆಯಲ್ಲಿ ತಲೆಕೆಳಗಾಗಿ ನೇತು ಹಾಕಿ ಪುನೀತ್ ಮೇಲೆ ಹಲ್ಲೆ ಮಾಡಲಾಗಿತ್ತು. ನೀರು ಕೇಳಿದಾಗ ಮೂತ್ರ ಕುಡಿಸಲು ಪ್ರಯತ್ನ ನಡೆಸಲಾಗಿತ್ತು. ನೆಲದಲ್ಲಿ ಬಿದ್ದಿದ್ದ ಮೂತ್ರ ನೆಕ್ಕುವಂತೆ ಒತ್ತಾಯಿಸಲಾಗಿತ್ತು. ಈ ಕುರಿತು ಪುನೀತ್ ಪೊಲೀಸರಿಗೆ ದೂರು ನೀಡಿದ್ದರು.

ಘಟನೆ ಬೆಳಕಿಗೆ ಬಂದ ಬಳಿಕ ಚಿಕ್ಕಮಗಳೂರು ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಗೋಣಿಬೀಡು ಠಾಣೆಗೆ ಭೇಟಿ ನೀಡಿದ್ದರು. ಯುವಕ ಪುನೀತ್ ಭೇಟಿಯಾಗಿ ಆರೋಪದ ಬಗ್ಗೆ ಮಾತುಕತೆ ನಡೆಸಿದ್ದರು. ಅರ್ಜುನ್ ವಿರುದ್ಧ ದೂರು ಸಹ ದಾಖಲಾಗಿತ್ತು.

Recommended Video

ಈ ಮೂವರ ನಡುವಿನ ರೋಚಕ ಫೈಟ್ ನೋಡೋದೇ ಸಖತ್ ಮಜಾ | Oneindia Kannada

ಪಿಎಸ್‌ಐ ಅರ್ಜುನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿತ್ತು. ಪ್ರಕರಣದ ಗಂಭೀರತೆ ಅರಿತ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಆದರೆ ಅರ್ಜುನ್ ತಲೆಮರೆಸಿಕೊಂಡಿದ್ದರು. ಈಗ ಅರ್ಜುನ್ ಬಂಧನವಾಗಿದೆ. ತನಿಖೆಯನ್ನು ಪೊಲೀಸರು ಮುಂದುವರೆಸಲಿದ್ದಾರೆ.

English summary
Karnataka CID police arrested PIS Arjun who working in Gonibeedu police station, Chikkamagaluru district. Arjun allegedly forced a scheduled castes youth to drink urine in his custody recently. Court ordered for 14 days judicial custody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X