ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡಿಗರು ಪ್ರಧಾನಿಯಾಗುವ ಪರಿಸ್ಥಿತಿ ಸದ್ಯಕ್ಕಿಲ್ಲ : ದೇವೇಗೌಡ

|
Google Oneindia Kannada News

Recommended Video

Lok Sabha Elections 2019 : ಕನ್ನಡಿಗರು ಪ್ರಧಾನಿಯಾಗುವ ಪರಿಸ್ಥಿತಿ ಸದ್ಯಕ್ಕಿಲ್ಲ : ದೇವೇಗೌಡ | Oneindia Kannada

ಚಿಕ್ಕಮಗಳೂರು, ಮಾರ್ಚ್ 01: "ಕನ್ನಡಿಗರು ಪ್ರಯತ್ನಿಸಿದರೆ ಮತ್ತೊಮ್ಮೆ ಕನ್ನಡದ ವ್ಯಕ್ತಿಯೇ ಪ್ರಧಾನಿಯಾಗುವುದಕ್ಕೆ ಸಾಧ್ಯವಿದೆ" ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆಯನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ನೀಡಿದ್ದಾರೆ.

ಕಡೂರಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ದೇವೇಗೌಡ ಅವರು, 'ಕನ್ನಡಿಗರೊಬ್ಬರು ಪ್ರಧಾನಿಯಾಗುವ ಅವಕಾಶವಿದೆ' ಎಂಬ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದರು

ಮತ್ತೊಮ್ಮೆ ಕನ್ನಡಿಗ ಪ್ರಧಾನಿ...! ಕುಮಾರಸ್ವಾಮಿ ಮಾತಿನ ಅರ್ಥವೇನು?ಮತ್ತೊಮ್ಮೆ ಕನ್ನಡಿಗ ಪ್ರಧಾನಿ...! ಕುಮಾರಸ್ವಾಮಿ ಮಾತಿನ ಅರ್ಥವೇನು?

.ನಾನು ಪ್ರಧಾನಿಯಾಗಿದ್ದ ಕಾಲಕ್ಕೂ ಪ್ರಸ್ತುತ ದಿನದ ರಾಜಕೀಯ ಪರಿಸ್ಥಿತಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

Chances of Kannadiga becoming PM is slim : HD Deve Gowda

"ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕನ್ನಡಿಗರು ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ತಮ್ಮ ಆಶೀರ್ವಾದ ನೀಡಿದರೆ ಕನ್ನಡಿಗರೇ ಮತ್ತೊಮ್ಮೆ ಪ್ರಧಾನಿಯಾಗುವುದಕ್ಕೆ ಸಾಧ್ಯವಿದೆ" ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಜೆಡಿಎಸ್ ಸಭೆಯಲ್ಲಿ ಕಣ್ಣೀರಿಟ್ಟ ವಿಧಾನಪರಿಷತ್ ಉಪ ಸಭಾಪತಿ ಧರ್ಮೇಗೌಡ ಜೆಡಿಎಸ್ ಸಭೆಯಲ್ಲಿ ಕಣ್ಣೀರಿಟ್ಟ ವಿಧಾನಪರಿಷತ್ ಉಪ ಸಭಾಪತಿ ಧರ್ಮೇಗೌಡ

"1996 ರಲ್ಲಿ ಕನ್ನಡಿಗರ ಆಶೀರ್ವಾದದಿಂದ 18 ಲೋಕಸಭಾ ಸೀಟುಗಳನ್ನು ಪಡೆದು ಕನ್ನಡಿಗರಾದ ಎಚ್ ಡಿ ದೇವೇಗೌಡರು ಪ್ರಧಾನಿಯಾಗಿದ್ದರು. ಇದೀಗ ಮತ್ತೆ 20-22 ಕ್ಷೇತ್ರಗಳನ್ನು ಗೆಲ್ಲುವಂತೆ ನಮಗೆ ಆಶೀರ್ವದಿಸಿದರೆ, ಮತ್ತೊಮ್ಮೆ ಕನ್ನಡಿಗರು ಪ್ರಧಾನಿಯಾಗುವುದಕ್ಕೆ ಸಾಧ್ಯ" ಎಂದು ಕುಮಾರಸ್ವಾಮಿ ಹೇಳಿದ್ದರು.

ಮಾರ್ಚ್ 08ರಿಂದ ಜೆಪಿ ಭವನದಲ್ಲಿ ವಿಧಾನಸಭಾ ಕ್ಷೇತ್ರವಾರು ಸರಣಿ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಗಮನ ಹರಿಸಬೇಕಿದೆ ಎಂದು ದೇವೇಗೌಡರು ಹೇಳಿದರು.

English summary
Chances of Kannadiga becoming PM is slim and I won't agree with Karnataka CM HD Kumaraswamy's statement said Former PM HD Deve Gowda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X