ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾತಿ ಗಣತಿಯನ್ನು ಕಸ ಡಬ್ಬಿಗೆ ಹಾಕಿದ್ದರು: ಸಿ.ಟಿ.ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಅಕ್ಟೋಬರ್ 02: ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಮಾಡಿದ್ದ ಜಾತಿ ಗಣತಿಯನ್ನು ತಿರಸ್ಕರಿಸಲು ಯಡಿಯೂರಪ್ಪ ಸರ್ಕಾರ ಯೋಜಿಸಿದೆ.

ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ ಅವರು, ಜಾತಿ ಗಣತಿಯನ್ನು ಆಗಿನ ಸರ್ಕಾರವೇ ಮಂಡನೆ ಮಾಡಲಿಲ್ಲ, ಇನ್ನೊಂದು ಸರ್ಕಾರದ ಬಗ್ಗೆ ನಿರೀಕ್ಷೆ ಮಾಡುವುದು ಹೇಗೆ ಸಾಧ್ಯ ಎಂದು ಹೇಳಿದರು.

ಎಚ್ ಡಿಕೆ-ಸಿದ್ದು ನಡುವಿನ ವಾಗ್ವಾದಕ್ಕೆ ಸಿ.ಟಿ. ರವಿ ಹೇಳಿದ್ದೇನು?ಎಚ್ ಡಿಕೆ-ಸಿದ್ದು ನಡುವಿನ ವಾಗ್ವಾದಕ್ಕೆ ಸಿ.ಟಿ. ರವಿ ಹೇಳಿದ್ದೇನು?

ಕೊಟ್ಯಾಂತರ ರೂಪಾಯಿ‌ ಖರ್ಚು ಮಾಡಿ ತಯಾರಿಸಿದ ವರದಿ ಅದು ಈ ಮೂರು ವರ್ಷ ಆ ವರದಿ ಎಲ್ಲಿತ್ತು ಎಂಬುದು ಮೊದು ನೋಡಬೇಕು, ಕಸ ಇಡುವ ಜಾಗದಲ್ಲಿ ವರದಿಯನ್ನು ಇಟ್ಟು ನಮ್ಮ ಸರ್ಕಾರವನ್ನು ಟೀಕಿಸುವುದು ತರವಲ್ಲ ಎಂದು ಸಿಟಿ ರವಿ ಹೇಳಿದರು.

Caste Census Report Kept In Dustbin By Siddaramaiah Government: CT Ravi

'ಅವರೇ ತಯಾರಿಸದ ವರದಿ ಮೇಲೆ ಅವರಿಗೆ ವಿಶ್ವಾಸವಿರಲಿಲ್ಲ, ಹಾಗಿದ್ದ ಮೇಲೆ ಇನ್ನೊಂದು ಸರ್ಕಾರದಿಂದ ವರದಿ ಮಂಡನೆ ನಿರೀಕ್ಷೆ ಮಾಡುವುದು ಹೇಗೆ ಸಾಧ್ಯ ಎಂದು ರವಿ ಹೇಳಿದರು.

ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಜಾತಿ ಗಣತಿ, ಹಿಂದುಳಿದ ವರ್ಗದ ಆಯೋಗದಿಂದ ಸುಮಾರು 190 ಕೋಟಿ ರೂ ವೆಚ್ಚದಲ್ಲಿ ಜಾತಿ ಗಣತಿ ನಡೆಸಲಾಗಿತ್ತು. ಆದರೆ ಜಾತಿ ಗಣತಿ ವರದಿ ಬಿಡುಗಡೆ ಇದುವರೆಗೂ ಸಾಧ್ಯವಾಗಿಲ್ಲ.

ಸಿದ್ದರಾಮಯ್ಯ ಸೋಲನ್ನು ಕೆದಕಿದ ಸಿ.ಟಿ.ರವಿ ಹೇಳಿದ್ದು ಹೀಗೆಸಿದ್ದರಾಮಯ್ಯ ಸೋಲನ್ನು ಕೆದಕಿದ ಸಿ.ಟಿ.ರವಿ ಹೇಳಿದ್ದು ಹೀಗೆ

ಜಾತಿ ಗಣತಿ ವರದಿ ತಿರಸ್ಕರಿಸಲು ಸಿಎಂ ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹಿಂದುಳಿದ ವರ್ಗದ ಆಯೋಗದಿಂದ ಸುಮಾರು 190 ಕೋಟಿ ರೂ ವೆಚ್ಚದಲ್ಲಿ ಜಾತಿ ಗಣತಿ ನಡೆಸಲಾಗಿತ್ತು. ಆದರೆ ಜಾತಿ ಗಣತಿ ವರದಿ ಬಿಡುಗಡೆ ಇದುವರೆಗೂ ಸಾಧ್ಯವಾಗಿಲ್ಲ.

English summary
Minister CT Ravi said, Caste census done by Siddaramaiah government was thrown in to the dustbin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X