ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಅಪಘಾತ: ಗಾಯಾಳುವಿಗೆ 1.25 ಲಕ್ಷ ರೂ. ಹಣ ಹಿಂದಿರುಗಿಸಿದ ಅಗ್ನಿಶಾಮಕ ಸಿಬ್ಬಂದಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜೂನ್ 3: ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಅಗ್ನಿಶಾಮಕ ಸಿಬ್ಬಂದಿಗಳು ಇಬ್ಬರನ್ನೂ ಅಗ್ನಿಶಾಮಕ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

ಚಿಕ್ಕಮಗಳೂರು ನಗರದ ಜಿಲ್ಲಾ ಪಂಚಾಯಿತಿ ಮುಂಭಾಗ ಕಾರು-ಬೈಕ್ ಮುಖಾಮುಖಿ ಡಿಕ್ಕಿಯಾಗಿತ್ತು. ತಕ್ಷಣ ಬೈಕಿನಲ್ಲಿದ್ದ ಕುಮಾರ್ ಹಾಗೂ ಮಹೇಶ್ ರಸ್ತೆ ಮಧ್ಯೆಯೇ ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ಅವರಲ್ಲಿ ಒಬ್ಬರ ತಲೆಗೆ ತೀವ್ರ ಪೆಟ್ಟಾಗಿತ್ತು.

ಅಪಘಾತವಾದ ಜಾಗದ ಪಕ್ಕದಲ್ಲೇ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಅಪಘಾತವನ್ನು ಗಮನಿಸಿ ಕೂಡಲೇ ಸ್ಥಳಕ್ಕೆ ಬಂದು ಬೈಕಿನಿಂದ ಬಿದ್ದು ನರಳಾಡುತ್ತಿದ್ದವರನ್ನು ಅಗ್ನಿಶಾಮಕ ವಾಹನದಲ್ಲೇ ಆಸ್ಪತ್ರೆಗೆ ದಾಖಲಿಸಿದರು. ಒಂದು ಗಾಡಿಯಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರು. ತದನಂತರ ಮೊತ್ತೊಬ್ಬ ಬೈಕ್ ಸವಾರನನ್ನೂ ಮತ್ತೊಂದು ಗಾಡಿಯಲ್ಲಿ ಆಸ್ಪತ್ರೆಗೆ ದಾಖಲಿಸಿದರು.

Chikkamagaluru: Car-Bike Accident: Firefighters Returned Rs 1.5L To Accident Victim

ಹಣ ಹಿಂದಿರುಗಿಸಿದ ಅಗ್ನಿಶಾಮಕ ಸಿಬ್ಬಂದಿ

ಅವರ ಜೇಬಲ್ಲಿ ಸುಮಾರು ಒಂದು ಲಕ್ಷದ ಇಪ್ಪತ್ತೈದು ಸಾವಿರ ಹಣವಿತ್ತು. ಅದನ್ನು ಅಗ್ನಿಶಾಮಕ ಸಿಬ್ಬಂದಿಗಳು ಗಾಯಾಳುಗಳ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ.

Chikkamagaluru: Car-Bike Accident: Firefighters Returned Rs 1.5L To Accident Victim

Recommended Video

AB de Villiers ತನ್ನ ಪತ್ನಿ ಜೊತೆ ಹಾಡಿದ ವಿಡಿಯೋ ಫುಲ್ ವೈರಲ್ | Oneindia Kannada

ಬೈಕಿನಲ್ಲಿ ಬಿದ್ದವರು ಕಂಟ್ರಾಕ್ಟ್ ಕೆಲಸಗಾರರು. ಕೆಲಸದ ನಿಮಿತ್ತ ಹಣ ಪಡೆದುಕೊಂಡು ಬರುವಾಗ ಅಪಘಾತವಾಗಿ ಬಿದ್ದಿದ್ದಾರೆ. ಬೈಕಿನಿಂದ ಬಿದ್ದಾಗ ಅವರ ಜೇಬಲ್ಲಿದ್ದ ಒಂದು ಲಕ್ಷದ ಇಪ್ಪತ್ತೈದು ಸಾವಿರ ಹಣ ಅಪಘಾತವಾದಾಗ ಅದನ್ನು ತೆಗೆದುಕೊಂಡ ಅಗ್ನಿಶಾಮಕ ಸಿಬ್ಬಂದಿ, ಗಾಯಾಳುಗಳು ಯಾರಿಗೆ ಹೇಳಿದರೋ ಅವರ ಕೈಗೆ ಹಣ ಹಾಗೂ ಮೊಬೈಲ್ ನೀಡಿ ಮಾನವೀಯತೆ ಮೆರೆದಿದ್ದಾರೆ.

English summary
Bike rider seriously injured in a car-bike collision in Chikkamagaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X