ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋಣದ ಹಾವಳಿಗೆ ತರೀಕೆರೆ ಜನರು ಹೈರಾಣ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಫೆಬ್ರುವರಿ 02: ಕೋಣವೊಂದು ಸಿಕ್ಕ ಸಿಕ್ಕ ಬೈಕ್ ಹಾಗೂ ಕಾರುಗಳು ಸೇರಿದಂತೆ ಜನರ ಮೇಲೆ ಎರಗಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಕೋಡಿಕ್ಯಾಂಪ್ ನ ರಾಜ್ ನರ್ಸಿಂಗ್ ಹೋಂ ಎದುರು ನಡೆದಿದೆ.

ಇದ್ದಕ್ಕಿದ್ದಂತೆ ಕಟ್ಟಿದ್ದ ಹಗ್ಗವನ್ನು ಕಿತ್ತುಕೊಂಡು ರಸ್ತೆಗೆ ಬಂದ ಕೋಣ ರಾಷ್ಟ್ರೀಯ ಹೆದ್ದಾರಿ 208 ರಲ್ಲಿ ಸಾಗುತ್ತಿದ್ದ ಬೈಕ್ ಗಳಿಗೆ ಗುದ್ದಿದೆ. ಇದರಿಂದ ಸುಮಾರು 15 ಬೈಕ್ ಗಳು ಜಖಂಗೊಂಡಿವೆ.

ಚಿಕ್ಕಮಗಳೂರು; ದನದ ಕೊಟ್ಟಿಗೆಯಲ್ಲಿ ಸೆರೆಸಿಕ್ಕ ಭಾರೀ ಗಾತ್ರದ ಕಾಳಿಂಗಚಿಕ್ಕಮಗಳೂರು; ದನದ ಕೊಟ್ಟಿಗೆಯಲ್ಲಿ ಸೆರೆಸಿಕ್ಕ ಭಾರೀ ಗಾತ್ರದ ಕಾಳಿಂಗ

ಇನ್ನು ಬೈಕ್ ನಲ್ಲಿ ಸಾಗುತ್ತಿದ್ದ ಓರ್ವ ದಂಪತಿಗಳ ಬೈಕ್ ಗೂ ಕೋಣ ಗುದ್ದಿದ ಪರಿಣಾಮ ದಂಪತಿಗಳಿಬ್ಬರು ಗಾಯಗೊಂಡಿದ್ದಾರೆ. ಇನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಕಾರ್ ಗಳಿಗೂ ಕೋಣ ಗುದ್ದಿದ್ದು, ವಾಹನ ಸವಾರರು ಸುಮಾರು ಅರ್ಧಗಂಟೆಗಳ ಕಾಲ ಪರಿತಪಿಸುವಂತಾಯಿತು.

buffallo Attack On People In Tarikere

ಲಕ್ಕವಳ್ಳಿ ಬಳಿ ಕಾರ್ಮಿಕರಿದ್ದ ಲಾರಿ ಮೇಲೆ ದಾಳಿ ಮಾಡಿದ ಒಂಟಿ ಸಲಗಲಕ್ಕವಳ್ಳಿ ಬಳಿ ಕಾರ್ಮಿಕರಿದ್ದ ಲಾರಿ ಮೇಲೆ ದಾಳಿ ಮಾಡಿದ ಒಂಟಿ ಸಲಗ

ಇನ್ನು ಬೈಕ್ ಗಳಿಗೆ ಹಾನಿ ಮಾಡುವ ಸಂದರ್ಭದಲ್ಲಿ ಕೋಣವನ್ನು ಓಡಿಸಲು ಹೋದಾಗ ಸಾರ್ವಜನಿಕರ ಮೇಲೂ ಕೋಣ ಎರಗಿದ್ದು, ಕೆಲಕಾಲ ಆತಂಕ ಉಂಟಾಗಿತ್ತು. ಇನ್ನು ಅರ್ಧಗಂಟೆಗಳ ನಂತರ ಸ್ಥಳೀಯರು ಹರಸಾಹಸ ಪಟ್ಟು ಕೋಣವನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ.

English summary
A Buffallo Attack on people in front of Raj Nursing home of Kodikamp in Tarikere town, Chikkamagaluru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X