• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ಬಿಜೆಪಿ ಪಕ್ಷದ ಮಾಲೀಕನಲ್ಲ; ಸಿ.ಟಿ. ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜುಲೈ 17: "ನಾನು ಬಿಜೆಪಿ ಪಕ್ಷದ ಮಾಲೀಕನಲ್ಲ, ನಾನು ಪಕ್ಷದ ಕಾರ್ಯಕರ್ತ.‌ ನಾನು ಯಾವತ್ತೂ ಮಾಲೀಕನ ರೀತಿ ವರ್ತನೆ ಮಾಡಿಲ್ಲ,'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಸಕ ಸಿ.ಟಿ‌. ರವಿ ಮೂಗಿನ ನೇರಕ್ಕೆ ಎಲ್ಲವೂ ನೆಡೆಯುತ್ತಿದೆ ಎಂದು ನೇರವಾಗಿ ಆರೋಪ ಮಾಡಿದ್ದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿಕೆಗೆ ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿ ಓಪನ್ ಜಿಮ್ ಉದ್ಘಾಟನಾ ಸಂದರ್ಭದಲ್ಲಿ ಸಿ.ಟಿ. ರವಿ ಮಾತನಾಡಿದರು.

ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಮಂತ್ರಿ ಅಲ್ಲ, ನಾನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಯಾವ ಹಿನ್ನೆಲೆಯಲ್ಲಿ ಅವರು ಮಾತನಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ವರ್ಗಾವಣೆ ಆದೇಶವನ್ನು ಮಾಡುವ ಅಧಿಕಾರ ನನಗಿಲ್ಲ. ಅವರ ಜೊತೆ ನಾನು ಮಾತನಾಡುತ್ತೇನೆ,'' ಎಂದರು.

"ರಾಜಕಾರಣದ ಸೂಕ್ಷ್ಮಗಳು ನನಗೆ ಅರ್ಥವಾಗುತ್ತದೆ ಯಾವ ಸಂದರ್ಭದಲ್ಲಿ ಸಾರ್ವಜನಿಕವಾಗಿ ಉತ್ತರಿಸಬೇಕು ಆಗ ಇದಕ್ಕೆ ಉತ್ತರಿಸುತ್ತೇನೆ. ವರ್ಗಾವಣೆ ಮಾಡುವುದು ನನ್ನ ಕೆಲಸ ಅಲ್ಲ, ವರ್ಗಾವಣೆ ಶಿಫಾರಸ್ಸು ಯಾರು ಬಂದರು ಕೊಡುತ್ತೇನೆ ವರ್ಗಾವಣೆ ಮಾಡುವುದು ಸಂಬಂಧಪಟ್ಟ ಆಯಾ ಇಲಾಖೆಯ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಬಿಟ್ಟಿದ್ದು," ಎಂದರು.

"ನಾನು ಬಿಜೆಪಿಯ ಮಾಲಿಕನಲ್ಲ ಕಾರ್ಯಕರ್ತ. ಯಾರು ಪಕ್ಷದ ದೇಹ ನಿಷ್ಠೆಯನ್ನು ಇಟ್ಟುಕೊಂಡು ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ ಅವರೆಲ್ಲರೂ ಕಾರ್ಯಕರ್ತರೆ, ಕಾರ್ಯಕರ್ತರೇ ನಮ್ಮ ಪಕ್ಷದ ಮಾಲೀಕರು ಎಂ. ಪಿ ಕುಮಾರಸ್ವಾಮಿಯವರು ಯಾಕೆ ಈ ರೀತಿ ಆರೋಪ ಮಾಡಿದ್ದಾರೆ ನನಗೆ ಗೊತ್ತಿಲ್ಲ ಕೇಳುವಂತಹ ವೇದಿಕೆಯಲ್ಲಿ ಕೇಳುತ್ತೇನೆ ಸಾರ್ವಜನಿಕವಾಗಿ ಅವರ ಲೆವೆಲ್ ಗೆ ಇಳಿದು ನಾನು ಮಾತನಾಡುವುದಿಲ್ಲ," ಎಂದು ಹೇಳಿದರು.

ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ಕಿಡಿ
ಕೊರೊನಾ ಲಸಿಕೆ ವಿಚಾರವಾಗಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಚಿಕ್ಕಮಗಳೂರಿನಲ್ಲಿ ಆರೋಪಿಸಿದರು.

   ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಮೇಕ್ ಇನ್ ಇಂಡಿಯಾ ಕಲರವ | Make in India at Olympics | Oneindia Kannada

   "ಗೊಸುಂಬೆ ರಾಜಕಾರಣದಿಂದ ಕಾಂಗ್ರೆಸ್‌ಗೆ ಈ ಸ್ಥಿತಿ ಬಂದಿದೆ, ಈಗ ಲಸಿಕೆ ರಾಜಕಾರಣ ಬೇಡ. ಈ ಹಿಂದೆ ಕಾಂಗ್ರೆಸ್‌ನವರು ಲಸಿಕೆ ತೆಗೆದುಕೊಂಡರೆ ಮಕ್ಕಳಾಗಲ್ಲ ಅಂದಿದ್ದರು. ಸಿದ್ದರಾಮಯ್ಯ ಏನು ಹೇಳಿದ್ದರು ಅಂತಾ ಹೇಳಬೇಕಾ? ಡಿ.ಕೆ. ಶಿವಕುಮಾರ್ ಟ್ವೀಟ್ ತೋರಿಸಬೇಕಾ? ಜಾರ್ಖಂಡ್ ಆರೋಗ್ಯ ಸಚಿವರ ಹೇಳಿಕೆ ನೆನಪು ಮಾಡಬೇಕಾ?,'' ಎಂದು ಪ್ರಶ್ನಿಸಿದರು.

   "ಪ್ರಧಾನಿ ಮೋದಿ ಎಲ್ಲರಿಗೂ ಉಚಿತ ವ್ಯಾಕ್ಸಿನ್ ಅಂತ ಘೋಷಣೆ ಮಾಡಿದರು. ಆಗ ಕಾಂಗ್ರೆಸ್‌ನವರು ಥ್ಯಾಂಕ್ಯೂ ಸುಪ್ರೀಂ ಕೋರ್ಟ್ ಅಂದರು. ಕ್ರೆಡಿಟ್ ಮೋದಿ, ಬಿಜೆಪಿಗೆ ಹೋಗಬಹುದು ಅಂತ ಥ್ಯಾಂಕ್ಯೂ ಸುಪ್ರೀಂ ಕೋರ್ಟ್ ಎಂದು ರಾಜಕಾರಣ ಮಾಡಿದರು. ಕಾಂಗ್ರೆಸ್‌ನವರಿಗೆ ದೂರುವುದಕ್ಕೆ ಮೋದಿ ಬೇಕು, ಒಳ್ಳೆಯದಕ್ಕಾದರೆ ಮೋದಿ ಬೇಡ,'' ಎಂದು ಸಿ.ಟಿ. ರವಿ ಹರಿಹಾಯ್ದರು.

   English summary
   I am not the owner of the BJP. I am just the party worker; BJP National Secretary CT Ravi reaction to MP Kumaraswamy statement.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X