ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ರಾಮುಲ್ಲಾಖಾನ್ ಎಂದಿದ್ದಕ್ಕೆ ಕಾಂಗ್ರೆಸ್‌ನವರಿಗೆ ಉರಿ ಹತ್ತಿಕೊಂಡಿದೆ: ಸಿ.ಟಿ.ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಡಿ. 05 : ಸಿದ್ದರಾಮಯ್ಯ ಅವರಿಗೆ ಸಿದ್ರಾಮುಲ್ಲಾಖಾನ್ ಎಂದಿದ್ದಕ್ಕೆ ಕಾಂಗ್ರೆಸ್‌ನವರಿಗೆ ಉರಿ ಹತ್ತಿಕೊಂಡಿದೆ. ಹೀಗೆ ಉರಿ ಹತ್ತಿಕೊಳ್ಳುತ್ತೇ ಎಂದು ಗೊತ್ತಿದ್ದರೇ 10 ವರ್ಷದ ಮೊದಲೇ ಹೇಳುತ್ತಿದ್ದೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ಕಾಂಗ್ರೆಸ್ ವಾಗ್ದಾಳಿ ನಡೆಸಿದ ಅವರು ನೀವು ಪ್ರಧಾನಿಯನ್ನು ಕೊಲೆಗಡುಕ, ನರಹಂತಕ, ರಾವಣ, ಭಸ್ಮಾಸುರ ಎಂದು ಕರೆದಿದ್ದೀರಿ ಎಂದು ತಿರುಗೇಟು ನೀಡಿದರು. ಸಿದ್ರಾಮುಲ್ಲಾಖಾನ್ ಎನ್ನುವುದು ಬೈಗುಳವೇ ಎಂದು ಪ್ರಶ್ನಿಸಿದ ಅವರು, ಅದು ಬೈಗುಳ ಅಲ್ಲ ನಿಮ್ಮಗೆ ಉರಿ ಹತ್ತಿದ್ದು ಏಕೆ ಎಂದ ಅವರು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ ಮಾಡಬಹುದಿತ್ತು. ಆದರೆ, ಮಾಡಲಿಲ್ಲ ಹೀಗೆ ಉರಿ ಹತ್ತಿಕೊಳ್ಳುತ್ತದೆ ಎಂದು ಗೊತ್ತಿದ್ದರೇ ಅಂದೇ ಕರೆಯುತ್ತಿದ್ದೇ ಎಂದಿದ್ದಾರೆ.

ದತ್ತಪೀಠಕ್ಕೆ ಅರ್ಚಕರನ್ನು ನೇಮಿಸಿದ ರಾಜ್ಯ ಸರ್ಕಾರ: ಬಿಜೆಪಿ ಕಾರ್ಯಕರ್ತರ ಸಂಭ್ರಮದತ್ತಪೀಠಕ್ಕೆ ಅರ್ಚಕರನ್ನು ನೇಮಿಸಿದ ರಾಜ್ಯ ಸರ್ಕಾರ: ಬಿಜೆಪಿ ಕಾರ್ಯಕರ್ತರ ಸಂಭ್ರಮ

ಸಿದ್ರಾಮುಲ್ಲಾಖಾನ್ ನಿಮ್ಮ ಭಾವನೆಗೆ ಕೊಟ್ಟ ಬಿರುದು ಎಂದು ತಿಳಿಯಬಹುದಿತ್ತು. ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜಾಹುಲಿ ಎಂದು ಕರೆದರು. ಸಿದ್ದರಾಮಯ್ಯ ಅವರನ್ನು ಹುಲಿಯಾ ಎಂದರು ಹಾಗೇ ಇದು ಬಿರುದು ಎಂದು ವ್ಯಂಗ್ಯವಾಡಿದ್ದಾರೆ.

ಸಿದ್ರಾಮುಲ್ಲಾಖಾನ್ ಒಂದು ಬಿರುದು: ಸಿಟಿ ರವಿ

ಸಿದ್ರಾಮುಲ್ಲಾಖಾನ್ ಒಂದು ಬಿರುದು: ಸಿಟಿ ರವಿ

ಸಿದ್ದರಾಮಯ್ಯ ಹಿಂದೂಗಳಿಗೆ ಅನ್ಯಾಯ ಮಾಡಿದ್ದು, ಟಿಪ್ಪು ಜಯಂತಿ ಪರ ಇದ್ದರು. ಅದಕ್ಕೆ ಈ ಬಿರುದು ಎಂದು ಭಾವಿಸುತ್ತಾರೆ ಎಂದು ತಿಳಿದಿದ್ದೇ ಎಂದಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಟೀಕೆ ಮುಂದುವರೆಸಿದರೇ ಸಿ.ಟಿ.ರವಿ ಓಡಾಡುವುದು ಕಷ್ಟವಾಗಬಹುದು ಎಂಬ ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಇಂತಹ ಬೆದರಿಕೆ ನಡೆಯೋಲ್ಲ, ಅವರು ಶ್ರೀಮಂತರು, ಪಾಳೆಗಾರರು ಇರಬಹುದು, ನಾನೊಬ್ಬ ಸಾಮಾನ್ಯ ರೈತನ ಮಗ ಪಾಳೆಗಾರ ಮನೆತನದವನಲ್ಲ ಎಂದು ಕಿಡಿಕಾರಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪಾಳೆಗಾರಿಕೆ ಮನಸ್ಥಿತಿ ಬದಲಾಗಬೇಕು

ಪ್ರಜಾಪ್ರಭುತ್ವದಲ್ಲಿ ಪಾಳೆಗಾರಿಕೆ ಮನಸ್ಥಿತಿ ಬದಲಾಗಬೇಕು

ಪ್ರಜಾಪ್ರಭುತ್ವದಲ್ಲಿ ಅಂಬೇಡ್ಕರ್ ಅವರು ನೀಡಿದ್ದು ಒಂದೇ ವೋಟು. ಪಾಳೆಗಾರಿಕೆ ಮನಸ್ಥಿತಿಯನ್ನು ಎಂ.ಬಿ.ಪಾಟೀಲ್ ಬಲಿಸಿಕೊಳ್ಳಬೇಕು. ನೀವು ಮನಸ್ಥಿತಿ ಬದಲಿಸಿಕೊಳ್ಳದಿದ್ದರೇ, ನಿಮ್ಮ ಸವಾಲು ಸ್ವೀಕರಿಸುತ್ತೇನೆ. ನಿಮ್ಮೂರಿಗೂ ಬರುತ್ತೇನೆ. ನಾನು ಏನು ಹೇಳಬೇಕೆಂದುಕೊಂಡಿದ್ದೇನೆ ಅದನ್ನು ನಿಮ್ಮ ಎದುರೇ ಹೇಳುತ್ತೇನೆ ಎಂದು ಸವಾಲು ಹಾಕಿದ್ದಾರೆ.

ನೀವು ಶ್ರೀಮಂತರು, ನಿಮ್ಮ ಶ್ರೀಮಂತಿಗೆ ನನ್ನ ಬಳಿ ಇಲ್ಲ. ಆದರೆ, ನಿಮ್ಮ ಶ್ರೀಮಂತಿಗೆ ದರ್ಪ ಜನರ ಮೇಲೆ ತೋರಿಸಬೇಡಿ, ನಿಮ್ಮ ಶ್ರೀಮಂತಿಗೆ ದರ್ಪ ಇಲ್ಲಿ ನಡೆಯೋಲ್ಲ. ಕರ್ನಾಟಕ ಯಾರಪ್ಪನ ಮನೆಯ ಸ್ವತ್ತು ಅಲ್ಲಾ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪಿಎಫ್‍ಐ ಬ್ಯಾನ್ ಆಗಿದ್ದರೂ ಆ ಮನಸ್ಥಿತಿಯ ಜನರಿದ್ದಾರೆ

ಪಿಎಫ್‍ಐ ಬ್ಯಾನ್ ಆಗಿದ್ದರೂ ಆ ಮನಸ್ಥಿತಿಯ ಜನರಿದ್ದಾರೆ

ಪಿಎಫ್‍ಐ ಬ್ಯಾನ್ ಆಗಿದ್ದರೂ ಆ ಮನಸ್ಥಿತಿಯ ಜನರು ಇನ್ನೂ ಇದ್ದಾರೆ. ಅವರನ್ನು ಎದುರಿಸಬೇಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ.

ಭಾನುವಾರ ನಗರದಲ್ಲಿ ಸಿಎಫ್‍ಐ ಗೋಡೆ ಬರಹಕ್ಕೆ ಪ್ರತಿಕ್ರಿಯಿಸಿದ ಅವರು, ಇಂತಹ ಮನಸ್ಥಿತಿಯವರು ಇಂದು ನಿನ್ನೆಯವರಲ್ಲಿ 7ನೇ ಶತಮಾನದಿಂದಲೂ ಇದ್ದಾರೆ. ಇಸ್ಲಾಮಿಕ್ ಸ್ಟೇಟ್ ಹುಟ್ಟುಹಾಕಬೇಕೆಂದು ಗಜಾವಹಿಂದ್ ಹೆಸರಿನಲ್ಲಿ 7ನೇ ಶತಮಾನದಲ್ಲಿ ಶುರುವಾಗಿದ್ದು ಎಂದಿದ್ದಾರೆ.

ಸಮಾಜ ಸಂಘಟಿತವಾಗಿ ಇಂತವರನ್ನು ಎದುರಿಸಬೇಕು

ಸಮಾಜ ಸಂಘಟಿತವಾಗಿ ಇಂತವರನ್ನು ಎದುರಿಸಬೇಕು

ಈ ಮನಸ್ಥಿತಿಯ ಜನರಿರುವ ಕಾರಣದಿಂದ ಜಿನ್ನಾ ಭಾರತ ವಿಭಜನೆಗೆ ಕೈ ಹಾಕಿದ್ದು, ಅಂತಹ ಮನಸ್ಥಿತಿ ಇರುವ ಜನರು ಇರುವರೆಗೂ ಈ ರೀತಿಯ ಕೃತ್ಯಗಳನ್ನು ಮಾಡುತ್ತಿರುತ್ತಾರೆ. ಅದನ್ನು ಎದುರಿಸಬೇಕು. ಸಮಾಜ ಸಂಘಟಿತವಾಗಿದ್ದರೇ, ಇದನ್ನು ಎದುರಿಸಬೇಕು ಎಂಬ ಮಾನಸಿಕತೆ, ಯಾರು ಇವರನ್ನು ನಿಯಂತ್ರಿಸಬಲ್ಲರು ಅರಿವು ಇದ್ದರೇ ಅಪಾಯ ಇಲ್ಲ ಎಂದಿದ್ದಾರೆ.

ತಮ್ಮದೆ ಶಾಸಕನ ಮನೆಗೆ ಬೆಂಕಿ ಹಾಕಿದರು ಕೂಡ ಮತಗಳ ಆಸೆಗೆ ಅವರು ಅಮಾಯಕರು ಸರ್ಟಿಫಿಕೇಟ್ ಕೊಡುವರಿಗೆ ಮತ ಹಾಕಿದರೇ ಅವರೂ ಉಳಿಯಲ್ಲ... ದೇಶವು ಉಳಿಯಲ್ಲ ಎಂದು ಸಿಟಿ ರವಿ ಕಿಡಿಕಾರಿದ್ದಾರೆ.

English summary
BJP National General Secretary CT Ravi slams congress over congress leaders statement against him.. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X