ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಗ್ರರ ಹುಟ್ಟಡಗಿಸೋವರೆಗೂ ಮೋದಿ ಬಿಡೋದಿಲ್ಲ: ಬಿ.ಎಸ್.ಯಡಿಯೂರಪ್ಪ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

Surgical Strike 2: ಇಂದಿನ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಏನಂತಾರೆ?, ಕೇಳಿ|Oneindia Kannada

ಚಿಕ್ಕಮಗಳೂರು, ಫೆಬ್ರವರಿ 26: ಪಾಕಿಸ್ತಾನದ ಬಾಲಾಕೋಟ್​ನಲ್ಲಿ ಭಾರತ ನಡೆಸಿದ ವೈಮಾನಿಕ ದಾಳಿಯನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಭಿನಂದಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ಹುಟ್ಟಡಗಿಸೋವರೆಗೂ ನರೇಂದ್ರ ಮೋದಿ ಬಿಡೋದಿಲ್ಲ.ನಮ್ಮ 45 ಜನ ಸೈನಿಕರು ಹುತಾತ್ಮರಾಗಿದ್ರು. ಆಗ ಒಂದೊಂದು ತೊಟ್ಟು ರಕ್ತಕ್ಕೂ ಉತ್ತರ ಕೊಡುತ್ತೇನೆ ಎಂದು ಮೋದಿ ಹೇಳಿದ್ರು.ಇದೀಗ ಉಗ್ರರ 5 ಕ್ಯಾಂಪ್ ಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.

ಇದು ದೇಶ ರಕ್ಷಣೆ ಕಾರ್ಯ, ಗಡಿ ಕಾನೂನು ಉಲ್ಲಂಘಿಸಿಲ್ಲ : ಸ್ವಾಮಿಇದು ದೇಶ ರಕ್ಷಣೆ ಕಾರ್ಯ, ಗಡಿ ಕಾನೂನು ಉಲ್ಲಂಘಿಸಿಲ್ಲ : ಸ್ವಾಮಿ

ಈ ರೀತಿಯ ಉತ್ತರ ಇಲ್ಲಿಗೆ ಮುಗಿಯೋದಿಲ್ಲ. ಪಾಕಿಸ್ತಾನ ಸರಿಯಾದ ರೀತಿಯಲ್ಲಿ ಉತ್ತರಿಸಬೇಕು. ಇಡೀ ಪ್ರಪಂಚವೇ ಪಾಕ್ ಗೆ ವಿರುದ್ಧ ವ್ಯಕ್ತಪಡಿಸಿದ್ದು, ಮತ್ತೊಮ್ಮೆ ಮೋದಿ ಪರ ದೇಶದ ಜನ ನಿಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

BJP Chief BS Yeddyurappa congratulate for IAS air strike

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಪುಲ್ವಾಮಾ ದಾಳಿಗೆ ಉತ್ತರ ನೀಡುತ್ತೇವೆ ಎಂದು ನರೇಂದ್ರ ಮೋದಿ ಹೇಳಿದ್ರು. ಹುತಾತ್ಮರಾದ ಕುಟುಂಬದವರ ಕಣ್ಣೀರಿಗೆ ಉತ್ತರ ನೀಡಲಾಗಿದ್ದು, ಉತ್ತರ ಕೊಡುವ ದಿನವೂ ಆರಂಭವಾಗಿದೆ.ಮುಂದಿನ ದಿನಗಳಲ್ಲಿ ಭಯೋತ್ಪಾದಕರಿಗೆ ಇನ್ನು ಕಾದಿದೆ ಎಂದು ಎಚ್ಚರಿಸಿದರು.

 ಸರ್ಜಿಕಲ್ ಸ್ಟ್ರೈಕ್ 2: ಕರ್ನಾಟಕಾದ್ಯಂತ ಸಂಭ್ರಮಾಚರಣೆ ಸರ್ಜಿಕಲ್ ಸ್ಟ್ರೈಕ್ 2: ಕರ್ನಾಟಕಾದ್ಯಂತ ಸಂಭ್ರಮಾಚರಣೆ

ಉಗ್ರರಿಗೆ ರಕ್ಷಣೆ ನೀಡಿರುವ ಪಾಕಿಸ್ತಾನಕ್ಕೆ ಸರಿಯಾದ ಉತ್ತರ ನೀಡಲಾಗಿದ್ದು, ಆ ರೀತಿಯ ಕಾರ್ಯಾಚರಣೆ ಆರಂಭವಾಗಿದೆ. ನಮ್ಮೆಲ್ಲ ಸೈನಿಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಶೋಭಾ ತಿಳಿಸಿದರು.

English summary
BJP Chief, Former Chief Minister BS Yeddyurappa congratulate for IAS air strike. He praised Narendra Modi and said once again, people of the country stand for Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X