ಅತಂತ್ರ ಸ್ಥಿತಿ ತಂದ ಬೀರೂರು ಪುರಸಭೆ ಫಲಿತಾಂಶ
ಚಿಕ್ಕಮಗಳೂರು, ನವೆಂಬರ್ 14: ಬೀರೂರು ಪುರಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಅತಂತ್ರ ಪರಿಸ್ಥಿತಿ ಉಂಟಾಗಿದೆ. ಬೀರೂರು ಪುರಸಭೆಯ 23 ವಾರ್ಡ್ ನಲ್ಲಿ 22 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, 16ನೇ ವಾರ್ಡಿನಲ್ಲಿ ಅವಿರೋಧ ಆಯ್ಕೆ ನಡೆದಿತ್ತು. 22 ಸ್ಥಾನಕ್ಕೆ 66 ಅಭ್ಯರ್ಥಿಗಳ ಫೈಟ್ ನಡೆದಿದ್ದು, ಅಂತಿಮವಾಗಿ ಬಿಜೆಪಿ 10, ಕಾಂಗ್ರೆಸ್ 9, ಜೆಡಿಎಸ್ 2, ಪಕ್ಷೇತರರು 2 ಸ್ಥಾನಗಳಲ್ಲಿ ಗೆಲುವನ್ನು ಕಂಡಿದ್ದಾರೆ. ಆದರೆ ಯಾವ ಪಕ್ಷಕ್ಕೂ ಬಹುಮತ ಇಲ್ಲದಿದ್ದರಿಂದ ಅತಂತ್ರ ಪರಿಸ್ಥಿತಿ ಉಂಟಾಗಿದೆ.
14 ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ
17866ರಷ್ಟು ಮತದಾರರಲ್ಲಿ 13908 ಮತ ಚಲಾವಣೆಯಾಗಿದ್ದವು.
ಗೆದ್ದವರ ವಿವರ ಇಂತಿದೆ: ವಾರ್ಡ್ 1ರಲ್ಲಿ ಬಿಜೆಪಿಯ ಸುದರ್ಶನ್, ವಾರ್ಡ್ 2ರಲ್ಲಿ ಕಾಂಗ್ರೆಸ್ನ ಸಮೀಉಲ್ಲಾ, ವಾರ್ಡ್ 3ರಲ್ಲಿ ಬಿಜೆಪಿಯ ಶಾರದ ಎಚ್, ವಾರ್ಡ್ 4ರಲ್ಲಿ ಕಾಂಗ್ರೆಸ್ನ ಲೋಕೇಶಪ್ಪ, ವಾರ್ಡ್ 5ರಲ್ಲಿ ಬಿಜೆಪಿಯ ಕೆ.ಆರ್ ರಘು, ವಾರ್ಡ್ 6ರಲ್ಲಿ ಪಕ್ಷೇತರ ಅಭ್ಯರ್ಥಿ ರಾಜು, ವಾರ್ಡ್ 7ರಲ್ಲಿ ಬಿಜೆಪಿಯ ನಾಗರಾಜ್, ವಾರ್ಡ್ 8ರಲ್ಲಿ ಕಾಂಗ್ರೆಸ್ನ ಶಶಿಧರ್, ವಾರ್ಡ್ 9ರಲ್ಲಿ ಕಾಂಗ್ರೆಸ್ನ ನಂದಿನಿ, ವಾರ್ಡ್ 1೦ರಲ್ಲಿ ಕಾಂಗ್ರೆಸ್ನ ರೋಹಿಣಿ, ವಾರ್ಡ್ 11ರಲ್ಲಿ ಬಿಜೆಪಿಯ ರವಿಕುಮಾರ್, ವಾರ್ಡ್ 12ರಲ್ಲಿ ಬಿಜೆಪಿಯ ಸಾಕಮ್ಮ, ವಾರ್ಡ್ 13ರಲ್ಲಿ ಜೆ.ಲಕ್ಷಣ, ವಾರ್ಡ್ 14ರಲ್ಲಿ ಮೋಹನ್ ಕುಮಾರ್, ವಾರ್ಡ್ 15ರಲ್ಲಿ ಮಾನಿಕ್ ಭಾಷ, ವಾರ್ಡ್ 16ರಲ್ಲಿ ಅವಿರೋಧ ಆಯ್ಕೆಯಾಗಿದ್ದಾರೆ,
ವಾರ್ಡ್ 17ರಲ್ಲಿ ಭಾಗ್ಯಲಕ್ಷ್ಮಿ, ವಾರ್ಡ್ 18ರಲ್ಲಿ ಗಂಗಾಧರ್, ವಾರ್ಡ್ 19ರಲ್ಲಿ ಜ್ಯೋತಿ, ವಾರ್ಡ್ 20ರಲ್ಲಿ ಕೆ. ಪುಷ್ಪ, ವಾರ್ಡ್ 21ರಲ್ಲಿ ವನಿತಾ, ವಾರ್ಡ್ 22ರಲ್ಲಿ ರವಿಕುಮಾರ್, ವಾರ್ಡ್ 23ರಲ್ಲಿ ಜ್ಯೋತಿ ಸಂತೋಷ್ ಗೆಲುವು ಪಡೆದಿದ್ದಾರೆ.