ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರೇಮಗಳೂರಿನಲ್ಲಿ ಬಿರುಕು ಬಿಟ್ಟ ಕೆರೆ ಏರಿ ರಸ್ತೆ; ಸ್ಥಳಕ್ಕೆ ಸಿ.ಟಿ.ರವಿ ಭೇಟಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್ 11: ಚಿಕ್ಕಮಗಳೂರಿನಲ್ಲಿ ಕೆಲವು ದಿನಗಳಿಂದ ಮತ್ತೆ ಮಳೆಯ ವಾತಾವರಣ ಮುಂದುವರೆದಿದೆ. ಇದೀಗ ಮಳೆಯಿಂದ ಜಿಲ್ಲೆಯ ಹಿರೇಮಗಳೂರಿನ ದೊಡ್ಡ ಕೆರೆಯ ಏರಿ ಒಡೆಯುವ ಭೀತಿ ಎದುರಾಗಿದೆ.

ಚಿಕ್ಕಮಗಳೂರು ಹೊರವಲಯದಲ್ಲಿರುವ ಹಿರೇಮಗಳೂರು ಕೆರೆಯು ಹೆಚ್ಚಿನ ಹರಿವಿನಿಂದ ಒಡೆಯುವ ಆತಂಕವಿದ್ದು, ಕೆರೆ ಏರಿಯ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಬಿರುಕು ಕಾಣಿಸಿಕೊಂಡಿರುವುದು ಭೀತಿಗೆ ಎಡೆ ಮಾಡಿಕೊಟ್ಟಿದೆ.

Chikkamagaluru: Big Crack Appeared In Hiremagaluru Bridge Road

 ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ಚಾರ್ಮಾಡಿ ಘಾಟಿಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ

ಹೀಗೆ ರಸ್ತೆಯಲ್ಲಿ ಏಕಾಏಕಿ ಇಷ್ಟು ಪ್ರಮಾಣದ ಬಿರುಕು ಕಾಣಿಸಿಕೊಂಡಿರುವುದು ಕೆರೆ ಒಡೆಯುವ ಮುನ್ಸೂಚನೆ ನೀಡಿದೆ. ಕೆರೆ ಒಡೆದರೆ ಎಕರೆಗಟ್ಟಲೆ ಬೆಳೆಗಳು ಜಲಾವೃತವಾಗಲಿವೆ. ಬೆಳೆಗಳನ್ನು ಕಳೆದುಕೊಳ್ಳುವ ಚಿಂತೆ ಇಲ್ಲಿನ ನೂರಾರು ರೈತರನ್ನು ಕಾಡುತ್ತಿದೆ. ಇತ್ತ ಬಿರುಕು ಕಾಣಿಸಿಕೊಂಡಿರುವ ರಸ್ತೆಯಲ್ಲಿ ಭಯದಲ್ಲಿಯೇ ವಾಹನ ಸವಾರರು ಓಡಾಡುತ್ತಿದ್ದಾರೆ.

Recommended Video

ನಮ್ ಹಣೆಬರಹ ಯಾವಾಗ್ಲೂ ಇಷ್ಟೇ ಬಿಡಿ.? | Oneindia Kannada

ಸ್ಥಳಕ್ಕೆ ಇಂದು ಸಚಿವ ಸಿ.ಟಿ.ರವಿ ಆಗಮಿಸಿ, ಬಿರುಕು ಬಿಟ್ಟ ಜಾಗವನ್ನು ಪರಿಶೀಲಿಸಿದರು. "ನಿನ್ನೆ ರಾತ್ರಿ ಕುಸಿದ ಹಿರೇಮಗಳೂರು ಕೆರೆ ಏರಿಯ ಪರಿಶೀಲನೆ ನಡೆಸಲಾಯಿತು. ಏರಿ ಕುಸಿದ ಕಾರಣ ಏರಿಯ ಮೇಲಿನ ರಸ್ತೆ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ, ಈ ದಾರಿಯಲ್ಲಿ ಓಡಾಡುವ ಸಾರ್ವಜನಿಕರು ಜಾಗರೂಕರಾಗಿರಿ.

ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಕೂಡಲೇ ಏರಿ ಹಾಗೂ ರಸ್ತೆಯನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಶೀಘ್ರವಾಗಿ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ.

ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ಇದ್ದು, ಆರೆಂಜ್​ ಅಲರ್ಟ್ ಘೋಷಿಸಲಾಗಿತ್ತು. ಐದು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ, ಬಾಳೆಹೊನ್ನೂರು, ಶೃಂಗೇರಿಯಲ್ಲಿ ಧಾರಾಕಾರ ಮಳೆ ಸುರಿದಿತ್ತು.

English summary
Crack appeared on bridge road of hiremagaluru lake brings fear among people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X