ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆ ನಿಲ್ಲಿಸುವಂತೆ ಕೋರಿ ದೇವರಿಗೆ ವಿಶೇಷ ಪೂಜೆ ಋಷ್ಯ ಶೃಂಗೇಶ್ವರನಿಗೆ ಪೂಜೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು,ಜು.14: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಬೀಸುತ್ತಿರುವ ಭಾರಿ ಗಾಳಿ ಜೊತೆಗೆ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಇನ್ನು ಗಾಳಿ ಮಳೆಗೆ ರಸ್ತೆಗೆ ಬೃಹತ್ ಅರಳಿಮರ ಉರುಳಿಬಿದ್ದಿರುವ ಘಟನೆ ತಾಲೂಕಿನ ಉದ್ದೇಬೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಎರಡು ದಿನಗಳೂ ಕಳೆದರೂ ಮರ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಗೆ ಮರ ಬಿದ್ದ ಪರಿಣಾಮ ಉದ್ದೇಬೋರನಹಳ್ಳಿ - ಬಿಳೇಕಲ್ಲಹಳ್ಳಿ ಸಂಪರ್ಕ ಸ್ಥಗಿತವಾಗಿದೆ.

ಮಳೆಯಿಂದ ಹಾನಿ; ಕೇಂದ್ರ ಪರಿಹಾರದ ಭರವಸೆ ಕೊಟ್ಟ ಶೋಭಾ ಕರಂದ್ಲಾಜೆ ಮಳೆಯಿಂದ ಹಾನಿ; ಕೇಂದ್ರ ಪರಿಹಾರದ ಭರವಸೆ ಕೊಟ್ಟ ಶೋಭಾ ಕರಂದ್ಲಾಜೆ

ಸಖರಾಯಪಟ್ಟಣದ ಅಯ್ಯನಕೆರೆ ಕೋಡಿಬಿದ್ದ ಬೆನ್ನಲ್ಲೇ ಪ್ರವಾಸಿಗರ ಹುಚ್ಚಾಟ!

ಸಖರಾಯಪಟ್ಟಣದ ಅಯ್ಯನಕೆರೆ ಕೋಡಿಬಿದ್ದ ಬೆನ್ನಲ್ಲೇ ಪ್ರವಾಸಿಗರ ಸಂಖ್ಯೆ ಹೆಚ್ಳಳ ಕಂಡು ಬರುತ್ತಿದೆ. ಅಪಾಯ ಅಂತ ಗೊತ್ತಿದ್ದರೂ ಮೈ ಮರೆತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಕೆರೆಯ ವೀವ್ ಪಾಯಿಂಟನಲ್ಲಿ ಕಬ್ಬಿಣದ ಸೇತುವೆ ಮೇಲೆ ನಿಂತು ಮೈ ಮರೆತು ಪ್ರವಾಸಿಗರ ಮೋಜುಮಸ್ತಿಯಲ್ಲಿ ತೊಡಗಿದ್ದಾರೆ. ಕೆರೆಯ ಸೌಂದರ್ಯ ಕಣ್ತುಂಬಿಕೊಳ್ಳಲು ಮುಂದಾಗಿರುವ ಪ್ರವಾಸಿಗರಿಗೆ ಸ್ಥಳೀಯರ ಎಚ್ಚರಿಕೆ ನೀಡುತ್ತಿದ್ದಾರೆ.

Big Banyan Tree Fells down in Udde Borana Halli due to Heavy Rain

ವಾರಾಂತ್ಯದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದ್ದು, ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಸ್ಥಳೀಯರೂ ಸೇರಿದಂತೆ ಹೊರ ಜಿಲ್ಲೆಯ ಸಾವಿರಾರು ಮಂದಿ ತಮ್ಮ ಇಷ್ಟಕ್ಕೆ ತಾವು ಎಂಬಂತೆ ಮೋಜು ಮಸ್ತಿಯಲ್ಲಿ ತೊಡಗಿದ್ದು ಕಂಡುಬಂತು.

 ಮಳೆ ರೌದ್ರ ನರ್ತನ ಮಲೆನಾಡು ತತ್ತರ, ಕಾಫಿ ಬೆಳೆಗಾರರ ಬದುಕು ದುಸ್ತರ ಮಳೆ ರೌದ್ರ ನರ್ತನ ಮಲೆನಾಡು ತತ್ತರ, ಕಾಫಿ ಬೆಳೆಗಾರರ ಬದುಕು ದುಸ್ತರ

Big Banyan Tree Fells down in Udde Borana Halli due to Heavy Rain

ಮಳೆ ನಿಲ್ಲಿಸುವಂತೆ ಕೋರಿ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ

ಇನ್ನು ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ರಾತ್ರಿ ವೇಳೆಯಲ್ಲಿ ಭಾರಿ ಗುಡುಗು ಸಹಿತ ಗಾಳಿ ಬೀಸುತ್ತಿದ್ದು, ಮಲೆನಾಡಿಗರು ಆತಂಕಕ್ಕೀಡಾಗಿದ್ದಾರೆ. ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಮಳೆ ನಿಲ್ಲಿಸುವಂತೆ ಕೋರಿ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿರುವ ಘಟನೆ ನಡೆದಿದೆ. ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯ ಶೃಂಗೇಶ್ವರನಿಗೆ ಸ್ಥಳೀಯರು ವಿಶೇಷ ಪೂಜೆ ನೆರವೇರಿಸಿದ್ದಾರೆ. ಮಳೆ ದೇವರು ಎಂದೇ ಪ್ರಸಿದ್ಧಿ ಪಡೆದಿರುವ ಕಿಗ್ಗಾದ ಋಷ್ಯ ಶೃಂಗೇಶ್ವರ, ಮಳೆ ಬೇಕು ಅಂದಾಗ ಸುರಿಸೋ, ಬೇಡವೆಂದಾಗ ನಿಲ್ಲಿಸೋ ದೇವರೆಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

Recommended Video

Jasprit Bumrahಗೆ ಚಾಲೆಂಜ್ ಮಾಡಿದ ಜೋಸ್ ಬಟ್ಲರ್ | *Cricket | OneIndia Kannada

English summary
chikkamagaluru : big banyan tree fells down in udde borana halli due to heavy rain from last 2 days. officials not yet removed the tree from the spot causes traffic to halt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X