ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಗವದ್ಗೀತೆ ಓದಿದವರು ಭಯೋತ್ಪಾದಕರು ಆಗಲ್ಲ; ಸಿಟಿ ರವಿ

By ಚಿಕ್ಕಮಗಳೂರು, ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮಾರ್ಚ್ 19: ಮಹಾತ್ಮ ಗಾಂಧೀಜಿ ಹಾಗೂ ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಪ್ರೇರಣೆ ಆಗಿರುವ ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಏಕೆ ಸೇರಿಸಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಭಗವದ್ಗೀತೆ ಓದಿದವರು ಭಯೋತ್ಪಾದಕರು ಆಗಿಲ್ಲ, ಬದಲಿಗೆ ಭಗವದ್ಗೀತೆ ಓದಿದವರು ಜೀವನದಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಜಗತ್ತಿನ ಇತಿಹಾಸದಲ್ಲಿ ಭಗವಗ್ದೀತೆ ಓದಿ ಭಯೋತ್ಪಾದಕರಾದ ಒಬ್ಬ ವ್ಯಕ್ತಿಯೂ ಇಲ್ಲ. ಭಗವದ್ಗೀತೆ ಪ್ರಚೋದಿಸುವುದಿಲ್ಲ ಬದಲಾವಣೆಗೆ ಪ್ರೇರಣೆ ನೀಡುತ್ತದೆ ಎಂದಿದ್ದಾರೆ.

ಕರ್ನಾಟಕದ ಶಾಲಾ ಪಠ್ಯಯಲ್ಲಿ ಭಗವದ್ಗೀತೆ ಸೇರಿಸುವ ಸುಳಿವು ನೀಡಿದ ಸಿಎಂ ಬೊಮ್ಮಾಯಿಕರ್ನಾಟಕದ ಶಾಲಾ ಪಠ್ಯಯಲ್ಲಿ ಭಗವದ್ಗೀತೆ ಸೇರಿಸುವ ಸುಳಿವು ನೀಡಿದ ಸಿಎಂ ಬೊಮ್ಮಾಯಿ

ಭಗವದ್ಗೀತೆ ಈ ದೇಶದ ಅಃತಸತ್ವ ಮತ್ತು ಜೀವನ ಮೌಲ್ಯಗಳೇ ಆಗಿದೆ. ಮಹಾತ್ಮ ಗಾಂಧಿ, ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅಂತಹವರಿಗೆ ಭಗವದ್ಗೀತೆ ಪ್ರೇರಣೆ ಆಗುತ್ತದೆ. ಪ್ರಚೋದಿಸುವುದು ಬೇರೆ, ಪ್ರೇರಣೆ ಕೊಡುವುದು ಬೇರೆ ಆಗಿರುತ್ತದೆ, ಅದರಲ್ಲಿ ಆಕ್ಷೇಪಾರ್ಹ ಸಂಗತಿಗಳಿದ್ದರೆ ಅದನ್ನು ಹೇಳಲಿ ಎಂದು ಸಿಟಿ ರವಿ ತಿಳಿಸಿದರು.

Bhagvadgeeta is inspiration to Mahatma Gandhi, then why we cant add this to school curriculum

ಭಗವದ್ಗೀತೆ ಪ್ರಚೋದನೆ ನೀಡುವುದಿಲ್ಲ:
ಭಗವದ್ಗೀತೆ ಎಂದಿಗೂ ಪ್ರಚೋದಿಸುವುದಿಲ್ಲ. ಅದು ಪ್ರೇರಣೆ ಕೊಡುತ್ತದೆ. ಮುಗ್ಧ ಮನಸ್ಸಿನ ಮಕ್ಕಳಲ್ಲಿ ಒಡಕು ತರಬಾರದು ಎನ್ನುವ ಕಾರಣಕ್ಕಾಗಿಯೇ ಶಾಲೆಗಳಲ್ಲಿ ಸಮವಸ್ತ್ರ ತಂದಿದ್ದು, ಅದನ್ನು ಒಡೆಯುವ ಕೆಲಸ ಮಾಡಿದವರು ಯಾರು ಎಂದು ಸಿಟಿ ರವಿ ಪ್ರಶ್ನಿಸಿದರು.
ಮಕ್ಕಳ ಬಿಸಿಯೂಟದಲ್ಲಿ ಜಾತಿ ಇದೆಯೇ. ಬಸವಣ್ಣ, ಕನಕದಾಸರು, ಅಂಬೇಡ್ಕರ್, ಬುದ್ಧ, ರಾಮ, ಕೃಷ್ಣ, ಭಗವಾನ್ ಮಹಾವೀರ, ಗುರುನಾನಕ್, ಕಬೀರ್, ಅಬ್ದುಲ್ ಕಲಾಂ ಅಂತಹವರ ಬದುಕು ಒಂದು ಪ್ರೇರಣೆ ನೀಡುತ್ತದೆ. ಅದನ್ನು ಜಾತಿಗೆ ಸೀಮಿತವಾಗಿ ನೋಡಲು ಸಾಧ್ಯವೇ, ಹಾಗೆ ನೋಡುವವರು ಮೂರ್ಖರು ಎಂದು ಕಿಡಿ ಕಾರಿದರು.

ಕಾಶ್ಮೀರ್ ಫೈಲ್ಸ್‌ನಂತೆ ಗೋಧ್ರಾ ಹತ್ಯಾಕಾಂಡ ಬಗ್ಗೆಯೂ ಸಿನಿಮಾ ಮಾಡಲಿ; ಸಿದ್ದರಾಮಯ್ಯಕಾಶ್ಮೀರ್ ಫೈಲ್ಸ್‌ನಂತೆ ಗೋಧ್ರಾ ಹತ್ಯಾಕಾಂಡ ಬಗ್ಗೆಯೂ ಸಿನಿಮಾ ಮಾಡಲಿ; ಸಿದ್ದರಾಮಯ್ಯ

ಸಿದ್ದರಾಮಯ್ಯ ಕುರಿತು ಸಿಟಿ ರವಿ ವ್ಯಂಗ್ಯ:
ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಸತ್ಯವನ್ನು ತೋರಿಸಿಲ್ಲ, ಅದಕ್ಕೆ ತಾವು ಆ ಚಿತ್ರವನ್ನು ನೋಡುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಸಿಟಿ ರವಿ ತಿರುಗೇಟು ನೀಡಿದರು. ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಕಾಶ್ಮೀರದಲ್ಲಿ ಇದ್ದಿದ್ದರೆ ಸಿದ್ದರಾಮಯ್ಯ ಎಂಬ ಹೆಸರು ಹೇಳಿಕೊಂಡು ಅಲ್ಲಿ ಉಳಿಯಲು ಸಾಧ್ಯವೇ ಆಗುತ್ತಿರಲಿಲ್ಲ. ಅವರೆಲ್ಲ ಸಿದ್ರಾಮುಲ್ಲಾ ಖಾನ್ ಎಂದಿದ್ದರೆ ಮಾತ್ರ ಉಳಿದುಕೊಳ್ಳುತ್ತಿದ್ದರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಪೂರ್ವಾಗ್ರಹ ಪೀಡಿತರಾಗಿದ್ದು, ಎಲ್ಲದರಲ್ಲೂ ರಾಜಕೀಯ ಹುಡುಕುವ ಮನಸ್ಸುಗಳಿಗೆ ಅದು ಅರ್ಥವಾಗುವುದಿಲ್ಲ ಎಂದರು. ಸತ್ಯವನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಇದ್ದರೆ ಅವರು ಚಿತ್ರ ವೀಕ್ಷಿಸಿ ಸತ್ಯಾಸತ್ಯದ ವಿವೇಚನೆ ಮಾಡುತ್ತಿದ್ದರು ಎಂದು ಟಾಂಗ್ ನೀಡಿದ್ದಾರೆ.

Bhagvadgeeta is inspiration to Mahatma Gandhi, then why we cant add this to school curriculum

ಕಾಶ್ಮೀರಿ ಫೈಲ್ಸ್ ಸತ್ಯದ ಘಟನೆಗಳನ್ನು ಆಧರಿಸಿದ ಚಿತ್ರವಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಆಯಾ ಕಾಲಘಟ್ಟದಲ್ಲಿ ಬಂದ ಪೇಪರ್ ಕಟ್ಟಿಂಗ್, ಸುದ್ದಿ ಎಲ್ಲಾ ಸಾಕ್ಷ್ಯಗಳ ಜೊತೆ ಸರ್ಕಾರಿ ದಾಖಲೆಗಳೂ ಇವೆ. ಸಿದ್ದರಾಮಯ್ಯರಿಗೆ ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲ ಎಂದರು. ಆಫ್ಘಾನಿಸ್ತಾನದಲ್ಲಿ ನಗುತ್ತಾ ನಿಂತಿದ್ದ ಬುದ್ಧನ ಪ್ರತಿಮೆಯನ್ನು ತಾಲಿಬಾನಿಗಳು ಫಿರಂಗಿ ಇಟ್ಟು ಉಡಾಯಿಸಿದ್ದೇಕೆ. ಬುದ್ಧನಿಗಿಂತ ಶಾಂತಿ ಸಂದೇಶ ಸಾರಿದ ವ್ಯಕ್ತಿ ಬೇಕಾ ಎಂದು ಪ್ರಶ್ನಿಸಿದರು.
ಅದೇ ಜನ ಕಾಶ್ಮೀರಿ ಪಂಡಿತರನ್ನು, ಹಿಂದೂಗಳನ್ನು ಕಾಶ್ಮೀರ ತೊರೆಯುವಂತೆ ಮೈಕ್‍ಗಳಲ್ಲಿ ಬಹಿರಂಗವಾಗಿ ಸಾರಿದರು. ಭಯ ಹುಟ್ಟಿಸಲೆಂದು ಮರ ಕೊಯ್ಯುವ ಯಂತ್ರದಲ್ಲಿ ಜೀವಂತವಾಗಿ ಕೊಯ್ದರು. ಇಂತಹ ನೂರೂರು ಸಾಕ್ಷ್ಯಗಳಿವೆ. ಅದಾಗ್ಯೂ, ಸಿದ್ಧರಾಮಯ್ಯನವರಿಗೆ ಸತ್ಯವನ್ನು ನೋಡಿ ಒಪ್ಪಿಕೊಳ್ಳುವ ಮನಸ್ಸು, ಮನಸ್ಥಿತಿ ಇಲ್ಲ ಎಂದು ದೂಷಿಸಿದರು.

Bhagvadgeeta is inspiration to Mahatma Gandhi, then why we cant add this to school curriculum

Recommended Video

ಚೆನ್ನೈ ಹುಡುಗಿ ಕೈಹಿಡಿದ RCB ಯ ಸ್ಟಾರ್ ಆಲ್-ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ | Oneindia Kannada

ಹಿಜಾಬ್ ವಿವಾದವನ್ನು ಜೀವಂತವಾಗಿಡಲು ಹುನ್ನಾರ:
ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟ್ ನೀಡಿರುವ ತೀರ್ಪುನ್ನು ಪ್ರಶ್ನಿಸಲು ಸಂವಿಧಾನದಲ್ಲಿ ಅವಕಾಶವಿದೆ. ಸುಪ್ರಿಂಕೋರ್ಟ್‍ನಲ್ಲಿ ಅದನ್ನು ಪ್ರಶ್ನೆ ಮಾಡಬಹುದು. ಆದರೆ ಪದೇ ಪದೇ ಉಲ್ಲಂಘಿಸುತ್ತಿರುವ ಉದ್ದೇಶವೇ ಪ್ರಚೋದನೆ ನೀಡುವುದಾಗಿದೆ. ವಿವಾದವನ್ನು ಜೀವಂತವಾಗಿ ಇಡುವ ಹುನ್ನಾರವಿದೆ. ಅಂಥ ದುರುದ್ದೇಶದಿಂದ ಈ ಕೆಲಸ ಮಾಡುತ್ತಿದ್ದಾರೆ ಎಂದು ಸಿಟಿ ರವಿ ದೂಷಿಸಿದರು.
ನ್ಯಾಯಾಲಯದಲ್ಲಿ 10 ದಿನ ದೊಡ್ಡ-ದೊಡ್ಡ ವಕೀಲರನ್ನು ಇಟ್ಟು ವಾದ-ಪ್ರತಿವಾದ ಮಾಡಿದರು. ಮೂವರು ನ್ಯಾಯಾಧೀಶರ ಪೀಠದಲ್ಲಿ ಮುಸ್ಲಿಂ ಜಡ್ಜ್ ಕೂಡ ಇದ್ದರು. ಅವರು ಡೀಸೆಂಟ್ ನೋಟ್ ಬರೆದಿಲ್ಲ. ಅವರು ಕೂಡ ಹಿಜಾಬ್ ಕಡ್ಡಾಯ ಧರ್ಮಾಚರಣೆಯ ಭಾಗವಲ್ಲ. ಎಲ್ಲಾ ಕಡೆ ಕಡ್ಡಾಯ ಇಲ್ಲ. ಶಾಲೆಯಲ್ಲಿ ಯೂನಿಫಾರಂ ಇರಬೇಕು ಅನ್ನೋದನ್ನು ಎತ್ತಿ ಹಿಡಿದಿದ್ದಾರೆ. ಹಿಜಾಬ್ ಅನ್ನು ಯಾರೂ ಬ್ಯಾನ್ ಮಾಡಿಲ್ಲ. ತರಗತಿಗಳಲ್ಲಿ ಇರಬೇಕೋ-ಬೇಡವೋ ಎನ್ನುವುದಷ್ಟೇ ಪ್ರಶ್ನೆ ಇರುವುದು. ಹೀಗಿದ್ದರೂ ಮತ್ತೆ-ಮತ್ತೆ ಉಲ್ಲಂಘಿಸುವುದರ ಹಿಂದೆ ಹುನ್ನಾರ ಇದೆ ಎಂದು ಆರೋಪಿಸಿದ್ದಾರೆ.

English summary
Bhagvadgeeta is inspiration to Mahatma Gandhi, then why we can't add this to school curriculum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X