ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಳೆಹೊನ್ನೂರು ಪೊಲೀಸರಿಂದ ಬೀದಿ ನಾಟಕ: ಅಣ್ಣಾಮಲೈ ಮೆಚ್ಚುಗೆ

|
Google Oneindia Kannada News

ಚಿಕ್ಕಮಗಳೂರು, ಏಪ್ರಿಲ್ 27: ಚಿಕ್ಕಮಗಳೂರಿನಲ್ಲಿ ಜನರಿಗೆ ಕೊರೊನಾ ವೈರಸ್‌ ಬಗ್ಗೆ ಅರಿವು ಮೂಡಿಸಲು ಪೊಲೀಸರು ವಿಶೇಷ ಪ್ರಯತ್ನ ಮಾಡಿದ್ದಾರೆ. ಪೊಲೀಸರು ಬೀದಿ ನಾಟಕ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ.

ಚಿಕ್ಕಮಗಳೂರು: ಉಚಿತ ಪಡಿತರದಲ್ಲಿ ಗೋಲ್ ಮಾಲ್ ಚಿಕ್ಕಮಗಳೂರು: ಉಚಿತ ಪಡಿತರದಲ್ಲಿ ಗೋಲ್ ಮಾಲ್

ಮಹಾರಾಜ, ಸೇನಾಧಿಪತಿ, ಮಂತ್ರಿ ಈ ರೀತಿಯ ಪಾತ್ರಗಳ ಮೂಲಕ ಬೀದಿ ನಾಟಕ ಮಾಡಿದ್ದಾರೆ. ಜಿಲ್ಲಾಡಳಿತದ ಕ್ರಮಗಳನ್ನು ನಾಟಕದಲ್ಲಿ ಮೆಚ್ಚಿಕೊಳ್ಳಲಾಗಿದೆ. ಸೀಲ್ ಡೌನ್, ಲಾಕ್‌ಡೌನ್, ಸಾಮಾಜಿಕ ಅಂತರ ಹೀಗೆ ಎಲ್ಲ ಕ್ರಮಗಳನ್ನು ಪಾಲನೆ ಮಾಡುತ್ತಿದ್ದು, ಇಲ್ಲಿ ಕೊರೊನಾದ ಆಟ ನಡೆಯುತ್ತಿಲ್ಲ ಎಂದಿದ್ದಾರೆ.

Balehonnur Police Done A Street Play To Spread Awareness About Coronavirus

''ಮಾಡಲು ಕೊರೊನಾ ಸಂಹಾರ, ಪಾಲಿಸಿ ಸಾಮಾಜಿಕ ಅಂತರ'' ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಬೀದಿ ನಾಟಕ ನಡೆದಿದೆ. ಒಂದುವರೆ ಗಂಟೆಯ ಕಾಲ ನಾಟಕ ಪ್ರದರ್ಶನ ಮಾಡಲಾಗಿದೆ. ಯಕ್ಷಗಾನ ಶೈಲಿಯಲ್ಲಿ ನಾಟಕ ಮಾಡಲಾಗಿದೆ. ಮನೆಯಿಂದ ಹೊರಬರಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಹೀಗೆ ಜನರು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ವಿವರಿಸಿದರು.

ಸಾಕಷ್ಟು ಸಂಖ್ಯೆಯ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ನಾಟಕವನ್ನು ನೋಡಿದರು. ಪೊಲೀಸರ ಈ ಪ್ರಯತ್ನಕ್ಕೆ ಚಪ್ಪಾಳೆ ತಟ್ಟಿದರು. ವಿಶೇಷ ಅಂದರೆ, IPS ಅಧಿಕಾರಿ, ವೀ ದಿ ಲೀಡರ್ಸ್ ಸಂಸ್ಥೆಯ ಸಂಸ್ಥಾಪಕ ಅಣ್ಣಾಮಲೈ ಮೆಚ್ಚುಗೆ ಸೂಚಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೊಲೀಸರ ಬೀದಿ ನಾಟಕದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

English summary
Balehonnur police done a street play to spread awareness about Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X