ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು; ತುಂಬಿದ ಅಯ್ಯನಕೆರೆ, ಸೆಲ್ಫೀಗೆ ಮುಗಿಬಿದ್ದ ಜನ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 05; ಚಿಕ್ಕಮಗಳೂರು ಜಿಲ್ಲೆಯ ಗಿರಿಭಾಗದಲ್ಲಿದ ಹರಿದು ಬಂದು ಶಕುನಗಿರಿ ತಟದಲ್ಲಿ ಸಂಗ್ರಹವಾಗುವ ಐತಿಹಾಸಿಕ ಅಯ್ಯನಕೆರೆ ತುಂಬಿ ಕೋಡಿ ಬಿದ್ದಿದ್ದು ಅಚ್ಚುಕಟ್ಟುದಾರರು ಹಾಗೂ ಈ ಭಾಗದ ರೈತರಲ್ಲಿ ಸಂತಸ ಮನೆಮಾಡಿದೆ.

ಕಳೆದ ಎರಡು ವಾರದಗಳಿಂದ ಗಿರಿಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಕಾರಣ ಕೆರೆ ತುಂಬಿದ್ದು, ಈ ಭಾಗದ ಜನರು ಕೆರೆ ಕೋಡಿ ಬೀಳುತ್ತಿದ್ದಂತೆ ಪೂಜೆ, ಪುನಸ್ಕಾರ ಮಾಡಿ ಸಂಭ್ರಮಿಸಿದ್ದಾರೆ.

ಬೆಂಗಳೂರು; ಕೆರೆ ಅಭಿವೃದ್ಧಿ ಯೋಜನೆಗೆ 6,316 ಮರಗಳಿಗೆ ಕೊಡಲಿಬೆಂಗಳೂರು; ಕೆರೆ ಅಭಿವೃದ್ಧಿ ಯೋಜನೆಗೆ 6,316 ಮರಗಳಿಗೆ ಕೊಡಲಿ

ಕೆರೆ ತುಂಬಿ ಕೋಡಿಬಿದ್ದರೆ ಸಖರಾಯಪಟ್ಟಣ ಹಾಗೂ ಕಡೂರು ತಾಲೂಕಿನ ಹಲವು ಹಳ್ಳಿಗಳಿಗೆ ನೀರಾವರಿ ಸೌಲಭ್ಯವನ್ನು ಈ ಕೆರೆ ಒದಗಿಸುತ್ತದೆ. ಈ ಬೃಹತ್ ಕೆರೆಯ ಸುತ್ತಲಿನ ಪ್ರದೇಶ ಸೇರಿದಂತೆ 1543 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದ್ದು ಕೆರೆಯ ಅಚ್ಚುಕಟ್ಟು ಪ್ರದೇಶದ ಜನರ ಖುಷಿಗೆ ಕಾರಣವಾಗಿದೆ.

ಮೋದಿ 'ಮನ್ ಕೀ ಬಾತ್' ಪ್ರೇರಣೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಕೆರೆ ನಿರ್ಮಿಸಿದ ವೃದ್ಧ ಮೋದಿ 'ಮನ್ ಕೀ ಬಾತ್' ಪ್ರೇರಣೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಕೆರೆ ನಿರ್ಮಿಸಿದ ವೃದ್ಧ

2017 ರಿಂದ ಆಚೆಗೆ ಮೂರ್ನಾಲ್ಕು ವರ್ಷ ಮಳೆ ಕೊರತೆಯಿಂದ ಕೆರೆ ತುಂಬದೇ ಇದ್ದದ್ದು ಈ ಭಾಗದ ಜನರಿಗೆ ನಿರಾಸೆ ಮೂಡಿಸಿತ್ತು. ಆದರೆ ಕಳೆದ 2018ರಿಂದ ಕೆರೆ ಪ್ರತಿವರ್ಷ ತುಂಬಿ ಕೋಡಿ ಬೀಳುತ್ತಿರುವುದು ಅಚ್ಚುಕಟ್ಟುದಾರರಲ್ಲಿ ನೆಮ್ಮದಿಯ ಭಾವ ಮೂಡಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಅಕಾಲಿಕ ಮಳೆ: ತುಂಬಿ ಹರಿದ ಮಲ್ಲಾಪುರ ಕೆರೆಚಿತ್ರದುರ್ಗ ಜಿಲ್ಲೆಯಲ್ಲಿ ಅಕಾಲಿಕ ಮಳೆ: ತುಂಬಿ ಹರಿದ ಮಲ್ಲಾಪುರ ಕೆರೆ

ಎರಡು ತಾಲೂಕಿಗೆ ಜೀವಸೆಲೆ

ಎರಡು ತಾಲೂಕಿಗೆ ಜೀವಸೆಲೆ

ಅಯ್ಯನಕೆರೆ ಸಖರಾಯಪಟ್ಟಣ ಹಾಗೂ ಕಡೂರು ತಾಲೂಕಿನ ಜೀವ ಸೆಲೆ. ಇಲ್ಲಿಂದ ಹರಿಯುವ ಕಡೆ ಕಾಲುವೆ, ಊರ ಕಾಲುವೆ, ಬಸವನ ಕಾಲುವೆ, ಬ್ರಹ್ಮಸಮುದ್ರ ಕಾಲುವೆಗಳು ಕಡೂರು ತಾಲ್ಲೂಕಿನ ಸುಮಾರು 1574 ಹೇಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿವೆ. ಕಟ್ಟೆಹೊಳೆಯೆಂದು ಇಲ್ಲಿಂದ ಹರಿಯುವ ನದಿ ಮುಂದೆ ವೇದಾನದಿಯಾಗಿ ಹರಿದು ಆವತಿಯೊಂದಿಗೆ ಕುಂತಿಹೊಳೆಯ ಸಮೀಪ ಸೇರಿ ವೇದಾವತಿಯಾಗಿ ಚಿತ್ರದುರ್ಗವೆಂಬ ಕಗ್ಗಲ್ಲ ನಾಡಿಗೆ ಜೀವ ಚೈತನ್ಯವಾಗುತ್ತಿದೆ.

ಅಯ್ಯನಕೆರೆ ಇತಿಹಾಸ

ಅಯ್ಯನಕೆರೆ ಇತಿಹಾಸ

ಈ ಪ್ರದೇಶದಲ್ಲಿ ವಿಶಾಲ ಕೆರೆಯನ್ನು ನಿರ್ಮಿಸಲೇಬೇಕೆಂದು ಪಣತೊಟ್ಟ ಹೊಯ್ಸಳ ಚಕ್ರವರ್ತಿಯ ಎಲ್ಲ ಪ್ರಯತ್ನಗಳು ನಿಷ್ಪಲವಾಗುವಂತೆ ಕೆರೆಯ ಏರಿಯನ್ನು ನಿರ್ಮಿಸುತ್ತಿದ್ದಾಗೆಯೇ ಕುಸಿಕುಸಿದು ಹೋಗುತ್ತಿತ್ತು. ಹತಾಶನಾದ ದೊರೆಯು ಕೆರೆ ಬದಿಯ ಗುಡ್ಡದ ಮೇಲೆ ಚಿಂತಿಸುತ್ತಾ ಕುಳಿತಾಗ ಕಾಣಿಸಿಕೊಂಡ ವೃದ್ಧ ಅಯ್ಯನವರು ಚಿಂತೆ ಬೇಡ ದೊರೆ ಏರಿಗೆ ಅಡ್ಡಲಾಗಿ ನಾನೇ ಕೂರುವೆ. ನನ್ನನ್ನು ಸೇರಿಸಿ ಏರಿಕಟ್ಟಿಸಿಬಿಡು ಭದ್ರವಾಗಿರುತ್ತದೆ ಎಂದು ಹೇಳಿದಾಗ ಔಹಾರಿದ ರಾಜ ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆಗೂ ಅವಕಾಶ ಇಲ್ಲದಂತೆ ಅವರೇ ಸ್ವತ: ಹೋಗಿ ಕಟ್ಟುತ್ತಿದ್ದ ಏರಿಗೆ ಅಡ್ಡವಾಗಿ ಪದ್ಮಾಸನ ಹಾಕಿ ಕುಳಿತರಂತೆ. ದಿಕ್ಕೆಟ್ಟ ಕಾರ್ಮಿಕರಿಗೆ ಸೂಕ್ಷ್ಮ ಸ್ವರದಲ್ಲಿ ಕೆಲಸ ಮುಂದುವರೆಸಲು ಕರೆಕೊಟ್ಟರು. ಎಂದು ಕಂಡು ಕೇಳರಿಯದ ಜೀವಂತ ಸಮಾಧಿಯು ಏರಿಯ ಒಡಲಿನಲ್ಲೇ ನಿರ್ಮಾಣವಾಯಿತು. ಈ ಬಾರಿ ಕಟ್ಟಿದ ಏರಿ ಭದ್ರವಾಗಿಯೇ ನಿಂತಿತಂತೆ.

ಜಾನಪದದಲ್ಲಿಯೂ ಉಲ್ಲೇಖವಿದೆ

ಜಾನಪದದಲ್ಲಿಯೂ ಉಲ್ಲೇಖವಿದೆ

ಈ ಅಯ್ಯನವರನ್ನು ಈ ಪರಿಸರದ ಕಲ್ಮರಡಿ ಮಠದಲ್ಲಿದ್ದ ಗುರುಗಳು ಎಂದು ಕೆಲವು ಕಥೆಗಳಲ್ಲಿ ನಿರೂಪಿಸಿದರೆ ಮತ್ತೆ ಕೆಲವು ಹೇಳಿಕೆಗಳು ಈ ಭಾಗದ ಖ್ಯಾತ ಗುರುಗಳಾದ ನಿರ್ವಾಣ ಸ್ವಾಮಿಯವರೆಂದು ಹೇಳುತ್ತವೆ. ಕೆರೆಯ ಏರಿಯನ್ನು ಭದ್ರವಾಗಿ ಉಳಿಸಲು ಕಿಡಿಗೇಡಿಗಳಿಂದ ರಕ್ಷಿಸಿಕೊಳ್ಳಲು ಜನಮಾನಸದಲ್ಲಿ ರೂಪುಗೊಳ್ಳುವ ಇಂತಹ ಕತೆಗಳು ಕೆರೆಕಟ್ಟೆಗಳಿಗೆ ಅಪೂರ್ವ ದೃಷ್ಟಿಕೋನವನ್ನು ತಂದುಕೊಡುವಲ್ಲಿ ಯಶಸ್ವಿಯಾಗಿದೆ ಹಾಗೂ ಜನಪದದಲ್ಲಿ ಇನ್ನು ಅನೇಕ ಕತೆಗಳು ಈ ಕೆರೆಗೆ ಅನುಗುಣವಾಗಿಯೇ ರೂಪಗೊಂಡತಿವೆ. ನಮ್ಮ ಹಿರಿಯರು ರಾಮಯಣಕ್ಕೂ ಕೆರೆಗೂ ಸಹ ಸಂಬಂಧವನ್ನು ಕಟ್ಟಿಕೊಟ್ಟ ಕತೆಗಳು ಈ ಭಾಗದ ಹಿರಿಯರಿಂದ ಆಗಾಗ ಕೇಳಿ ಬರುತ್ತವೆ.

Recommended Video

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ | Oneindia Kannada
ಪ್ರವಾಸಿ ತಾಣವಾಗಿದೆ ಕೆರೆ

ಪ್ರವಾಸಿ ತಾಣವಾಗಿದೆ ಕೆರೆ

ಕೆರೆ ತುಂಬಿ ಕೋಡಿ ಬೀಳುತ್ತಿದ್ದಂತೆ ಈಗ ಕೆರೆಯ ಪ್ರದೇಶ ಪ್ರವಾಸಿಗರ ಆಕರ್ಷಣೀಯ ತಾಣವಾಗಿ ಮಾರ್ಪಟ್ಟಿದೆ. ಎತ್ತರದ ಬೆಟ್ಟಗುಡ್ಡಗಳು, ತಂಪಾದ ಗಾಳಿ, ಅಲೆಅಲೆಯಾಗಿ ಬರುವ ನೀರು ಕೋಡಿಯಿಂದಿಳಿದು ಹೋಗುವ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಸಹ ನಿನ್ನೆಯಿಂದಲೇ ಕೆರೆಯ ಕಡೆಗೆ ಧಾವಿಸುತ್ತಿದ್ದಾರೆ. ಇನ್ನು ಕೆರೆಯ ಕೋಡು ಕೆಳಗಿನ ಸಣ್ಣಕಟ್ಟೆಯಲ್ಲಿ ನೀರು ತುಂಬಿ ಮುಂದೆ ಹೋಗುವುದರಿಂದ ನೀರಿಗಿಳಿದು ಜನರು ಸಖತ್ ಎಂಜಾಯ್ ಸಹ ಮಾಡಬಹುದು.

English summary
Due to heavy rain Chikkamagaluru district Ayyanakere full. Now it is selfie point for tourist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X