ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಪ್ಪ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಮೇಲೆ ಹಲ್ಲೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 23 : ನೀವು ಹೇಳದೇ ಕೇಳದೇ ನಮ್ಮೂರಿಗೆ ಬರುವಂತಿಲ್ಲ ಎಂದು ಕೊಪ್ಪ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಮೇಲೆ ಸ್ಥಳೀಯ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ನವೀನ್ ಕುಮಾರ್ ಮೇಲೆ ಕುಪ್ಪನಮಕ್ಕಿ ಗ್ರಾಮದ ಸ್ಥಳೀಯರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಚಿಕ್ಕಮಗಳೂರು; ಜಿಲ್ಲಾಧಿಕಾರಿ ಬಗಾದಿಯಿಂದ ಕಪಾಳಮೋಕ್ಷ; ಸ್ಪಷ್ಟನೆ ಕೊಟ್ಟ ಡಿಸಿಚಿಕ್ಕಮಗಳೂರು; ಜಿಲ್ಲಾಧಿಕಾರಿ ಬಗಾದಿಯಿಂದ ಕಪಾಳಮೋಕ್ಷ; ಸ್ಪಷ್ಟನೆ ಕೊಟ್ಟ ಡಿಸಿ

ಕುಪ್ಪನಮಕ್ಕಿ ಗ್ರಾಮದ ಶಿವಕಾರ್ ಗೌಡ, ಸುರೇಶ್, ಉಮೇಶ್ ಎಂಬುವರು ದೌರ್ಜನ್ಯ ಮಾಡಿದ್ದಾರೆ ಎಂದು ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

Assault On Koppa Taluk Panchayat Executive Officer

ಕುಡಿಯುವ ನೀರಿನ ಬಾವಿಗೆ ಸೇರುತ್ತಿದ್ದ ಚರಂಡಿ ನೀರು ಪರಿಶೀಲನೆ ಮಾಡಲು ತಾಲ್ಲೂಕು ಪಂಚಾಯತ್ ಇ.ಓ ನವೀನ್ ಕುಮಾರ್ ಗ್ರಾಮಕ್ಕೆ ಭೇಟಿ ನೀಡಿದ್ದರು. ನಂತರ ನವೀನ್ ಅವರ ಕಾರಿನ ಕೀ ಕಿತ್ತುಕೊಂಡು ಹಲ್ಲೆಗೆ ಮುಂದಾಗಿದ್ದಾರೆ ಎಂದು ಆರೋಪಿಸಲಾಗಿದೆ.

Assault On Koppa Taluk Panchayat Executive Officer

ಇ.ಓ ನವೀನ್ ಕುಮಾರ್ ಅವರನ್ನು ತಳ್ಳಾಡಿದ್ದಲ್ಲದೇ ಏಕವಚನದಲ್ಲಿ ಸ್ಥಳೀಯರು ಮಾತನಾಡಿದ್ದಾರೆ ಎಂದು ಕೊಪ್ಪ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದು, ಏಫ್.ಐ.ಆರ್ ದಾಖಲಾಗಿದೆ.

English summary
Local villagers have assaulted an executive Officer of the Koppa Taluk Panchayat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X