ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ನೌಕರನ ಮೇಲೆ ಹಲ್ಲೆ; ಕೊಪ್ಪ ಕಾಂಗ್ರೆಸ್ ಮುಖಂಡನ ಮೇಲೆ ಆರೋಪ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ 12: ಕೊಪ್ಪ ಪಟ್ಟಣ ಪಂಚಾಯತಿಯ ಸಮುದಾಯ ಸಮನ್ವಯ ಅಧಿಕಾರಿ ಸುಬ್ಬಣ್ಣ‌ ಎಂಬುವವರ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಕೊಪ್ಪ ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ಸಹ ದಾಖಲಾಗಿದೆ.

ಸುಬ್ಬಣ್ಣ‌ ಎಂಬುವವರ ಮೇಲೆ ಖಾಸಗಿ ಲಾಡ್ಜ್‌ನಲ್ಲಿ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಎಂಬುದು ಆರೋಪವಾಗಿದೆ. ಚಿಕ್ಕಮಗಳೂರು ಜಿಲ್ಲಾಧಿಕಾರಿ ಒಪ್ಪಿಗೆ ಪಡೆದು ಕೊಪ್ಪ ಪಟ್ಟಣ ಠಾಣೆಯಲ್ಲಿ ದೂರು ನೀಡಲಾಗಿದೆ.

ಕೊಪ್ಪ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಮೇಲೆ ಹಲ್ಲೆಕೊಪ್ಪ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಮೇಲೆ ಹಲ್ಲೆ

ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ, ಪಟ್ಟಣ ಪಂಚಾಯತಿ ಸದಸ್ಯ ಶ್ರೀನಿವಾಸ್ ಶೆಟ್ಟಿ ಹಾಗೂ ಪ್ರಸನ್ನ ಶೆಟ್ಟಿ ಎಂಬುವವರ ಮೇಲೆ ಸುಬ್ಬಣ್ಣ ದೂರು ನೀಡಿದ್ದಾರೆ. ದೂರಿನ ಅನ್ವಯ ಎಫ್‌ಐಆರ್ ದಾಖಲು ಮಾಡಲಾಗಿದೆ.

ಕಾಡೆಮ್ಮೆ ಹಾವಳಿಗೆ ಬೇಸತ್ತು ಮತದಾನ ಬಹಿಷ್ಕಾರಕ್ಕೆ ಮುಂದಾದ ಕೊಪ್ಪ ತಾಲೂಕಿನ ಗ್ರಾಮಸ್ಥರುಕಾಡೆಮ್ಮೆ ಹಾವಳಿಗೆ ಬೇಸತ್ತು ಮತದಾನ ಬಹಿಷ್ಕಾರಕ್ಕೆ ಮುಂದಾದ ಕೊಪ್ಪ ತಾಲೂಕಿನ ಗ್ರಾಮಸ್ಥರು

Chikkamagaluru Assault On Government Employee In Koppa

ಜೆ.ಎಂ.ಜೆ ಲಾಡ್ಜ್‌ನ ಕೊಠಡಿಯೊಂದರಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ. ಈ ವೇಳೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಬಸವರಾಜ್ ಹಾಗೂ ಸಿಬ್ಬಂದಿ ಕಿಶೋರ್ ಸಹ ಇದ್ದರು. ಅವರಿಬ್ಬರು ಸುಮ್ಮನೆ ನಿಂತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸೂಚನೆ ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಸೂಚನೆ

ದಿನಾಂಕ 8/2/2021ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಸುಬ್ಬಣ್ಣ ಕಚೇರಿಯಲ್ಲಿದ್ದರು. ಆಗ ಕರೆ ಮಾಡಿದ್ದ ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಬಸವರಾಜ್ ಬಸ್ ನಿಲ್ದಾಣದ ಸಮೀಪದ ಹಣ್ಣಿನ ಅಂಗಡಿ ಬಳಿ ಬರಲು ಹೇಳಿದ್ದರು. ಅಲ್ಲಿಗೆ ಹೋದಾಗ ಜೆ. ಎಂ. ಜೆ ಲಾಡ್ಜ್‌ಗೆ ಬನ್ನಿ ಕೆಲವು ವಿಚಾರ ಮಾತನಾಡಬೇಕು ಎಂದು ಹೇಳಿದ್ದರು.

11.30ರ ಸುಮಾರಿಗೆ ಲಾಡ್ಜ್‌ಗೆ ಹೋದಾಗ ಸುಧೀರ್ ಕುಮಾರ್ ಮುರೊಳ್ಳಿ, ಶ್ರೀನಿವಾಸ್ ಶೆಟ್ಟಿ ಹಾಗೂ ಪ್ರಸನ್ನ ಶೆಟ್ಟಿ ಅಲ್ಲಿದ್ದರು. ನಾನು ರೂಂನೊಳಕ್ಕೆ ಹೋದಾಗ ನನ್ನ ಮೊಬೈಲ್ ಕಸಿದುಕೊಂಡರು ಎಂದು ಸುಬ್ಬಣ್ಣ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

Recommended Video

ಯಾವುದೇ ಕಾರಣಕ್ಕೂ ಮನೆ ಮುಂದೆ ಗಾಡಿ ನಿಲ್ಲಿಸಬೇಡಿ ! | Oneindia Kannada

ಸುಧೀರ್ ಕುಮಾರ್ ನನ್ನ ಎಡಕೆನ್ನೆಗೆ ಹೊಡೆದರು, ನಾನು ಕುಸಿದು ಬಿದ್ದಾಗ ಶ್ರೀನಿವಾಸ ಶೆಟ್ಟಿ, ಪ್ರಸನ್ನ ಶೆಟ್ಟಿ ನನ್ನನ್ನು ಮೇಲೆತ್ತಿ ಬೆನ್ನು ಮತ್ತು ಎದೆಗೆ ಗುದ್ದಿದ್ದಾರೆ. ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ನನಗೆ ನ್ಯಾಯ ದೊರಕಿಸ ಕೊಡಬೇಕೆಂದು ಮನವಿ ಮಾಡಿದ್ದಾರೆ.

English summary
Assault on government employee by Koppa block Congress president. Koppa town panchayat employee Subbanna field complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X