ಶಿವಾಜಿ ಭಾವಚಿತ್ರಕ್ಕೆ ಅವಮಾನಿಸಿದ ಯುವಕರಿಗೆ ಥಳಿತ
ಚಿಕ್ಕಮಗಳೂರು, ಅಕ್ಟೋಬರ್ 14: ಶಿವಾಜಿ ಭಾವಚಿತ್ರಕ್ಕೆ ಅವಮಾನ ಮಾಡಿದ್ದರೆಂದು ಅಸ್ಸಾಂ ಮೂಲದ ಯುವಕರನ್ನು ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ..
ಅಮಾನವೀಯ ಘಟನೆ, ಜೈ ಶ್ರೀರಾಮ್ ಹೇಳದ ಮುಸ್ಲಿಂ ಕ್ಯಾಬ್ ಚಾಲಕನಿಗೆ ಥಳಿತ
ಕಾಫಿ ತೋಟಕ್ಕೆ ಕೆಲಸಕ್ಕೆಂದು ಬಂದಿದ್ದ ಅಸ್ಸಾಂ ಯುವಕರು ಮೂಡಿಗೆರೆ ತಾಲೂಕಿನ ತಲಗಾರು ಗ್ರಾಮದ ಬಳಿ ರಸ್ತೆಯಲ್ಲಿ ಬಿದ್ದಿದ್ದ ಭಾವಚಿತ್ರಕ್ಕೆ ಕಾಲಿನಿಂದ ತುಳಿದು ಅವಮಾನ ಮಾಡಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಆ ಯುವಕರಿಗೆ ಥಳಿಸಿದ್ದಾರೆ. ದಾರಿಯುದ್ದಕ್ಕೂ ಅವರನ್ನು ಹಿಗ್ಗಾಮುಗ್ಗಾ ಥಳಿಸಿ ಅಲ್ಲಿಯೇ ನಿಂತಿದ್ದ ಬೈಕ್ ಮಾಸ್ಕ್ ನಲ್ಲಿದ್ದ ಶಿವಾಜಿ ಭಾವಚಿತ್ರಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿಸಿದ್ದಾರೆ.
ನಂತರ ಯುವಕರು ತಪ್ಪಾಯ್ತು ಎಂದು ಶಿವಾಜಿ ಭಾವಚಿತ್ರಕ್ಕೆ ನಮಸ್ಕರಿಸಿ ಕ್ಷಮೆ ಯಾಚಿಸಿದ್ದಾರೆ.